ಕನ್ನಡಪ್ರಭ ವಾರ್ತೆ ಮುಂಡರಗಿ
ಇತ್ತೀಚಿನ ದಿನಮಾನಗಳಲ್ಲಿ ಶ್ರೀ ಲಕ್ಷ್ಮೀ ಕನಕನರಸಿಂಹ ಗುಡ್ಡದ ಪಕ್ಕದಲ್ಲಿ ಕೆಲವರು ಕಟ್ಟಡಗಳನ್ನು ಕಟ್ಟುತ್ತಿದ್ದು, ಆ ಮನೆಗಳಿಗೆ ನಾವು ಸುಟ್ಟು ಒಡೆದಂತಹ ಕಲ್ಲುಗಳಿಂದ ತೊಂದರೆ ಉಂಟಾಗುವ ಸಂಭವವಿದೆ. ಕಾರಣ ಅಲ್ಲಿ ನಮಗೆಲ್ಲ ಕೆಲಸ ಮಾಡಲು ತೊಂದರೆ ಉಂಟಾಗುತ್ತಿದ್ದು, ಗುಡ್ಡದ ಪಕ್ಕದಲ್ಲಾಗಲಿ ಅಥವಾ ಗುಡ್ಡದ ಎದುರಿನಲ್ಲಿರುವ ಹಳ್ಳಕ್ಕೆ ಹೊಂದಿಕೊಂಡಿರುವ ಜಾಗೆಯಲ್ಲಿ ಮನೆ ಕಟ್ಟುವುದಕ್ಕಾಗಲಿ, ಇತರೆ ಯಾವುದೇ ಕೆಲಸ ಕಾರ್ಯಗಳಿಗೆ ಅನುವು ಮಾಡಿಕೊಡದೇ ತಲೆ ತಲಾಂತರಗಳಿಂದ ಅಲ್ಲಿ ಕಲ್ಲು ಒಡೆದು ಜೀವನ ನಡೆಸುವಂತಹ ಕುಟುಂಬಗಳಿಗೆ ಮಾತ್ರ ಅವಕಾಶ ನೀಡಿ. ಆ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶ್ರಮವಹಿಸಬೇಕು ಎಂದು ತಾಲೂಕು ಭೋವಿ, ವಡ್ಡರ ಸಮಾಜದ ಅಧ್ಯಕ್ಷ ರಾಘವೇಂದ್ರ ನರೇಗಲ್ ವಿನಂತಿಸಿದರು.
ಭೋವಿ, ವಡ್ಡರ ಸಮಾಜದ ಪ್ರಶಾಂತ ನಾಗರಹಳ್ಳಿ, ಮಹೇಶ ವಡ್ಡರ, ಯಮನಪ್ಪ ಬೆಣ್ಣಿಹಳ್ಳಿ, ಚನ್ನಪ್ಪ ಗುಗ್ಗರಿ, ವೆಂಕಪ್ಪ ಕಟ್ಟಿಮನಿ, ಮಂಜಪ್ಪ ಗುಗ್ಗರಿ, ಹುಲಿಗೆಪ್ಪ ಬಿಡನಾಳ, ಹನುಮಪ್ಪ ಬಂಡಿವಡ್ಡರ, ಕನಕರಾಯ ಕಟ್ಟಿಮನಿ, ಪರಶುರಾಮ್ ಗೊಂಡಬಾಳ, ಸಂತೋಷ ಸಿಂದೋಗಿ, ಹನುಮಂತ ವಡ್ಡರ, ಮಾರುತಿ ದೊಡ್ಡಮನಿ, ದೇವಣ್ಣಿ ಸಂದಿಮನಿ, ನಾಗಪ್ಪ ದೊಡ್ಡಮನಿ, ಕೃಷ್ಣ ಕಟ್ಟಿಮನಿ, ಹನುಮಂತ ಕರಡಿಗುಡ್ಡ, ಮಂಜುನಾಥ ಕಟ್ಟಿಮನಿ, ಶಿವಕುಮಾರ, ವಾಸು ಬಾದಾಮಿ, ಮಾರುತಿ ಕಲ್ಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.