ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗ್ರಾಪಂ ಎದುರು ಕಾರ್ಮಿಕರ ವಿವಿಧ ಬೇಡಿಕೆ ಪೂರೈಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ತಾಲೂಕು ಕಾರ್ಯದರ್ಶಿ ಗಂಗೇನಹಳ್ಳಿ ಗಿರೀಶ್, ಕೇಂದ್ರ ಸರ್ಕಾರ ಉದ್ಯೋಗ ಖಾತರಿ ತೀರ್ಮಾನ ಅನುಷ್ಠಾನ ಮಾಡಿಲ್ಲ. ರಾಜ್ಯ ಸರ್ಕಾರವನ್ನು ಅವಲಂಬಿಸದೆ ಕೇಂದ್ರ ಸರ್ಕಾರ ಶೇ.60 ರಷ್ಟು ಅನುದಾನ ನೀಡಲಿ ಎಂದು ಆಗ್ರಹಿಸಿದರು.
ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ ನೀಡಲಿ. ಎನ್‌ಎಂಎಂಎಸ್‌ನ ಅವೈಜ್ಞಾನಿಕ ತಂತ್ರಜ್ಞಾನ ಬಿಟ್ಟು ಸರಳೀಕರಣವಾಗಿ ಕಾರ್ಮಿಕರ ಹಾಜರಾತಿ ತೆಗೆದುಕೊಳ್ಳಬೇಕು. ನರೇಗಾದಲ್ಲಿ ನಮೂನೆ 6 ರಲ್ಲಿ ಉದ್ಯೋಗ ಕಲ್ಪಿಸಬೇಕು. ಬೇಸಿಗೆ ಇರುವುದರಿಂದ ಬೆಳಗ್ಗೆ 7 ರಿಂದ 10ರವರೆಗೆ ಕೆಲಸ, ಬಿಸಿಲಿನಿಂದ ನಿಧನರಾದ ಕಾರ್ಮಿಕರಿಗೆ 10 ಲಕ್ಷ ರು.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಬಿಸಲಿನಿಂದ ಮಣ್ಣುಗಟ್ಟಿಯಾಗಿದ್ದು ಸಡಿಲ ಮಾಡುವ ವ್ಯವಸ್ಥೆ ಮಾಡಿಕೊಟ್ಟು ಕೆಲಸ ಮಾಡಿಸಬೇಕು. ವರ್ಷದಲ್ಲಿ 200 ದಿನ ಕೆಲಸ, ಕನಿಷ್ಠ 700 ರು.ಕೂಲಿ ನೀಡಬೇಕು. ನೆರಳು, ನೀರಿನ ವ್ಯವಸ್ಥೆ ಕೆಲಸದ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಗ್ರಾಪಂ ಪಿಡಿಒ ಚಂದ್ರು ಅವರಿಗೆ ಮನವಿ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರಾದ ಸುರೇಶ್, ರಾಜು, ಜಯರಾಂ, ಮಂಜುಳಾ, ಜಯಮ್ಮ, ಪಲ್ಲವಿ, ಸಾವಿತ್ರಮ್ಮ, ಪ್ರೇಮ, ಶೋಭಾ ಮತ್ತಿತರರು ಇದ್ದರು.
ಈ ಕುರಿತು ಹೇಳಿಕೆ ನೀಡಿರುವ ಸಿಪಿಐ ಎಂನ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಇತರ ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿವೆ. ಆದರೆ, ಭಾರತದಲ್ಲಿ ಕೇಂದ್ರ ಸರ್ಕಾರ ಅಂತಹ ಕ್ರಮ ಕೈಗೊಳ್ಳದೆ ದುಡಿಯುವ ಜನರ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹೆಚ್ಚಿಸಿದೆ. ಜನಹಿತಕ್ಕಿಂತ ಬಿಜೆಪಿಗೆ ಮತ್ತೆ ಚುನಾವಣೆ ಗೆಲ್ಲುವುದೇ ಮುಖ್ಯ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಇದು ದೊಡ್ಡ ಜನವಿರೋಧಿ ನಡೆ ಬೇರೆ ಇಲ್ಲ ಎಂದು ಎಂದು ಕಿಡಿಕಾರಿದ್ದಾರೆ.ಅಮೆರಿಕಾ-ಇಸ್ರೇಲ್ ಸಾಮ್ರಾಜ್ಯಶಾಹಿಗಳ ದುರಾಕ್ರಮಣದಿಂದ ಹಲವೆಡೆ ಬಿಕ್ಕಟ್ಟು ಸೃಷ್ಟಿಯಾಗಿದೆ. ತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಯುದ್ಧ ನಿಲ್ಲಿಸಲು ಪ್ರಯತ್ನಿಸದೆ ಪ್ರಧಾನಿ ಮೋದಿಯವರು ಅಮೆರಿಕಾದ ಹಿಂಬಾಲಕ ನಾಯಕನಾಗಿ, ಇಸ್ರೇಲ್ ಅನ್ನು `ತಂದೆ ರಾಷ್ಟ್ರ’ ಎಂಬ ಅಸಂಬದ್ಧ ಜಪ ಮಾಡಿ ನೇತನ್ಯಾಹುವನ್ನು ತಬ್ಬಿಕೊಂಡು ಹಾಸ್ಯಾಸ್ಪದರಾಗಿದ್ದಾರೆ. ಇದು ಜಾಗತಿಕವಾಗಿ ದಕ್ಷಿಣದ ದೇಶಗಳ ನಾಯಕತ್ವಕ್ಕೆ ಕಳಂಕ ತಂದಿದೆ ದೂರಿದ್ದಾರೆ.