ಸಡಗರ-ಸಂಭ್ರಮ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ

KannadaprabhaNewsNetwork |  
Published : May 16, 2026, 12:30 AM IST
15ಕೆಎಂಎನ್ ಡಿ21 | Kannada Prabha

ಸಾರಾಂಶ

ಮಂಡ್ಯದ ಚಾಮುಂಡೇಶ್ವರಿನಗರ ಬಡಾವಣೆಯ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಮಧ್ಯಾಹ್ನ 12.30ರ ವೇಳೆ ರಥೋತ್ಸವ ಪ್ರಾರಂಭವಾಯಿತು. ಮಂಡ್ಯ-ಬನ್ನೂರು ರಸ್ತೆಯಲ್ಲಿ ಸಾಗಿದ ರಥೋತ್ಸವ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆವರೆವಿಗೂ ಎಳೆದು ತರಲಾಯಿತು. ಮತ್ತೆ ಪುನಃ ದೇವಾಲಯದ ಆವರಣಕ್ಕೆ ತಂದು ನಿಲ್ಲಿಸಲಾಯಿತು.

ಮಂಡ್ಯ:

ಚಾಮುಂಡೇಶ್ವರಿನಗರ ಬಡಾವಣೆಯ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ಮಧ್ಯಾಹ್ನ 12.30ರ ವೇಳೆ ರಥೋತ್ಸವ ಪ್ರಾರಂಭವಾಯಿತು. ಮಂಡ್ಯ-ಬನ್ನೂರು ರಸ್ತೆಯಲ್ಲಿ ಸಾಗಿದ ರಥೋತ್ಸವ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆವರೆವಿಗೂ ಎಳೆದು ತರಲಾಯಿತು. ಮತ್ತೆ ಪುನಃ ದೇವಾಲಯದ ಆವರಣಕ್ಕೆ ತಂದು ನಿಲ್ಲಿಸಲಾಯಿತು.

ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ನಂತರ ಭಕ್ತರು ದೇವಾಲಯದ ಮುಂದಿರುವ ಮಂಡ್ಯ-ಬನ್ನೂರು ರಸ್ತೆಯಲ್ಲಿ ಕೋಳಿಗಳನ್ನು ಬಲಿಕೊಟ್ಟರು.

ರಥೋತ್ಸವಕ್ಕೂ ಮುನ್ನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ ಹಾಗೂ ಅಪರ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್‍ಯಕ್ರಮಗಳನ್ನು ನೆರವೇರಿಸಲಾಯಿತು.

ಇಂದು ಬೆಳಗ್ಗೆ ದೇವಾಲಯದ ಆವರಣದಲ್ಲಿ ಚಂಡಿಕಾಹೋಮ, ಪಾರಾಯಣ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಬಳಿಕ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಯಿತು. ಪೂಜಾ ಕಾರ್‍ಯಕ್ರಮದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ರಥೋತ್ಸವ ಸಾಂಗೋಪ ಸಾಂಗವಾಗಿ ನೆರವೇರಿತು. ರಥೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಶ್ರೀ ಲಕ್ಷ್ಮಿನರಸಿಂಹಸ್ವಾಮಿ ವೈರಮುಡಿ ಉತ್ಸವ

ಮದ್ದೂರು:ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ವೈರಮುಡಿ ಉತ್ಸವ ಗುರುವಾರ ರಾತ್ರಿ ವಿಜ್ರಂಭಣೆಯಿಂದ ನೆರವೇರಿತು.

ಶ್ರೀಲಕ್ಷ್ಮಿನರಸಿಂಹ ಸ್ವಾಮಿ, ಸಮೇತ ಶ್ರೀದೇವಿ ಮತ್ತು ಭೂದೇವಿ ಪುಷ್ಪಾಲಕೃತ ಉತ್ಸವಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ಕೋಟೆ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತಾದಿಗಳು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು.ಕೀರ್ತಿ ಶೇಷರಾದ ಅವ್ವೇರಹಳ್ಳಿ ಮಾಜಿ ಶಾಸಕ ಎ.ಡಿ.ಬಿಳಿ ಗೌಡ ಹೆಸರಿನಲ್ಲಿ ಮದ್ದೂರು ಬ್ರಹ್ಮರಥೋತ್ಸವದ ಅಂಗವಾಗಿ ಕುಟುಂಬ ವರ್ಗದವರು ಪ್ರತಿ ವರ್ಷ ಪೂಜೆ ಸಲ್ಲಿಸುವುದನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಡೆದ ವೈರಮುಡಿ ಉತ್ಸವದಲ್ಲಿ ಮಕ್ಕಳಾದ ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ಬಿ.ಸಿ. ಚಂದ್ರಕುಮಾರ, ಕುಟುಂಬ ವರ್ಗದವರಾದ ಕೆ.ಲತಾ, ಕಲ್ಪನಾ ಭಾಸ್ಕರ್ ಬಾಬು, ವಿನೋದ್ ಕುಮಾರ್, ಕಾಮಿನಿ, ಗುಣಶೀಲಿ, ಮತ್ತು ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ಆರ್. ಪ್ರಸನ್ನ ಕುಮಾರ್ ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾರಂಪರಿಕ ಮೂಲೆ ಮಂಟಪ ಧ್ವಂಸ: ಪ್ರತಿಭಟನೆ
ಮೇಲುಕೋಟೆ: ವೈಭವದ ಭೂವರಾಹಸ್ವಾಮಿ ಜಯಂತ್ಯುತ್ಸವ