ಮೇಲುಕೋಟೆ: ವೈಭವದ ಭೂವರಾಹಸ್ವಾಮಿ ಜಯಂತ್ಯುತ್ಸವ

KannadaprabhaNewsNetwork |  
Published : May 16, 2026, 12:30 AM IST
18 | Kannada Prabha

ಸಾರಾಂಶ

ಮೇಲುಕೋಟೆ ಕಲ್ಯಾಣಿತೀರದ ಭೂವರಾಹಸ್ವಾಮಿಯ ಜಯಂತ್ಯುತ್ಸವ ಗುರುವಾರ ವೈಭವದಿಂದ ನೆರವೇರವೇರಿತು. ಅಭಿಷೇಕದ ನಂತರ ವರಾಹಸ್ವಾಮಿಗೆ ಪ್ರಿಯವಾದ ಹೂಗಳಿಂದ ತಯಾರಿಸಿದ ಭವ್ಯತೋಮಾಲೆಗಳಿಂದ ಅಲಂಕಾರ ಮಾಡಲಾಯಿತು. ಅಂತಿಮವಾಗಿ ದೇವಾಲಯದಲ್ಲಿ ಮಹಾಮಂಗಳಾರತಿ ಶಾತ್ತುಮೊರೈ ನಡೆದವು.

ಮೇಲುಕೋಟೆ:

ಮೇಲುಕೋಟೆ ಕಲ್ಯಾಣಿತೀರದ ಭೂವರಾಹಸ್ವಾಮಿಯ ಜಯಂತ್ಯುತ್ಸವ ಗುರುವಾರ ವೈಭವದಿಂದ ನೆರವೇರವೇರಿತು.

ವರಾಹ ಜಯಂತಿಯ ಅಂಗವಾಗಿ ಕಲ್ಯಾಣಿ ತೀರದಲ್ಲಿ ವಿರಾಜಮಾನವಾಗಿರುವ ಭೂದೇವಿ ಸಮೇತ ಭೂವರಾಹಸ್ವಾಮಿಗೆ ವೇದ ಹಾಗೂ ಮಂಗಳವಾದ್ಯಗಳೊಂದಿಗೆ ಹಾಲು, ಮೊಸರು, ಜೇನು, ಎಳೆನೀರು ಮುಂತಾದ ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ಅಭಿಷೇಕದ ನಂತರ ವರಾಹಸ್ವಾಮಿಗೆ ಪ್ರಿಯವಾದ ಹೂಗಳಿಂದ ತಯಾರಿಸಿದ ಭವ್ಯತೋಮಾಲೆಗಳಿಂದ ಅಲಂಕಾರ ಮಾಡಲಾಯಿತು. ಅಂತಿಮವಾಗಿ ದೇವಾಲಯದಲ್ಲಿ ಮಹಾಮಂಗಳಾರತಿ ಶಾತ್ತುಮೊರೈ ನಡೆದವು.

ರಾಜ್ಯದ ವರಾಹಣಸ್ವಾಮಿ ದೇವಾಲಯಗಳ ಪೈಕಿ ಮೇಲುಕೋಟೆ ವರಾಹಸ್ವಾಮಿಯೂ ಪ್ರಮುಖ ದೇವಾಲಯ. ಸಾಲಿಗ್ರಾಮ ಶಿಲೆಯಿಂದ ಪ್ರತಿಸ್ಠಾಪಿಸಲಾದ ಸುಮಾರು ಎಂಟು ಅಡಿಯ ಭೂವರಾಹಸ್ವಾಮಿ ಮೂರ್ತಿ ಆಕರ್ಷಕವಾಗಿದೆ. ಈ ವರಾಹಸ್ವಾಮಿ ಬೆವರಿನಿಂದಲೇ ಕಲ್ಯಾಣಿತೀರ್ಥ ಉಗಮವಾಗಿದೆ ಎಂಬ ನಂಬಿಕೆಯಿದೆ.

ವರಾಹ ಜಯಂತಿಯ ಅಂಗವಾಗಿ ಗುರುವಾರ ಸಂಜೆ ಚೆಲುವನಾರಾಯಣಸ್ವಾಮಿ ಉತ್ಸವ ಕಲ್ಯಾಣಿ ತೀರದಲ್ಲಿರುವ ವರಾಹ ಸನ್ನಿಧಿಗೆ ನೆರವೇರವೇರಿತು. ದಿವ್ಯಪ್ರಬಂದಪಾರಾಯಂಗಳು ನೆರವೇರಿದವು ಅರ್ಚಕ ಸ್ಥಾನಾಚಾರ್ಯ ಕೋವಿಲ್‌ನಂಬಿ ಸಂಪತ್ಕುಮಾರನ್ ಮತ್ತು ಸಹೋದದರು ವರಾಹಜಯಂತಿಯ ಕಾರ್ಯಕ್ರಮಗಳನ್ನು ನೆರವೇರಿಸಿದರು. ಕದಂಬ,ಮೊಸರನ್ನು ಹಾಗೂ ವಿಶೇಷವಾಗಿ ಕೊನ್ನಾರಿಗೆಡ್ಡೆಯಿಂದಮಾಡಿದ ಕೊಬ್ಬರಿ ಸಕ್ಕರೆ ನಿವೇದನ ಮಾಡಿ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರಿಗೆ ವಿನಿಯೋಗ ಮಾಡಲಾಯಿತು. 41 ಲಕ್ಷ ರು. ಕಾಣಿಕೆ ಸಂಗ್ರಹ

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಹುಂಡಿಗಳಲ್ಲಿ ಕಳೆದ ಮಾರ್ಚ್ 16ರಿಂದ ಮೇ 14ರವರೆಗಿನ ಅವಧಿಯಲ್ಲಿ 41 ಲಕ್ಷರೂ ಕಾಣಿಕೆ ಸಂಗ್ರಹವಾಗಿದೆ.

ಗುರುವಾರ ಎಲ್ಲಾ ಹುಂಡಿಗಳನ್ನು ತೆರೆದು ದೇಗುಲದ ಇಒ ಮಾರ್ಗದರ್ಶನದಲ್ಲಿ ಎಣಿಕೆ ಕಾರ್ಯ ನೆರವೇರಿಸಲಾಯಿತು. ದಾಸೋಹದ ಹುಂಡಿ ಸೇರಿದಂತೆ ಒಟ್ಟಾರೆ 41,7104 ರು ಕಾಣಿಕೆ ಹಣ ಸಂಗ್ರಹವಾಗಿದೆ. ಹಣವನ್ನು ಎಸ್.ಬಿ.ಐಗೆ ಜಮಾ ಮಾಡಲಾಯಿತು. ಇದಕ್ಕೂ ಮುನ್ನ ಎಣಿಕೆ ಮಾಡಲಾದ ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದ ಹುಂಡಿಗಳಿಂದ 11 ಲಕ್ಷ ರು. ಸಂಗ್ರಹವಾಗಿದೆ.

ಎಣಿಕೆ ಕಾರ್ಯದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಕೀಲರಾದ ಕಾಡೇನಹಳ್ಳಿ ಸತೀಶ್ ಮತ್ತು ಕೆ.ಎಸ್ ಪುಟ್ಟಸ್ವಾಮಿ, ಕಂದಾಯ ಇಲಾಖೆಯ ಕಂದಾಯ ವೃತ್ತ ನಿರೀಕ್ಷಕ ಮಹದೇಶ್ ಸಿಬ್ಬಂದಿ ಮಂಜು ಭಾಗವಹಿಸಿದ್ದರು. ಚೆಲುವನಾರಾಯಣಸ್ವಾಮಿ ದೇವಾಲಯದ ಸಿಬ್ಬಂದಿವರ್ಗ ಎಣಿಕೆಕಾರ್ಯ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಡಗರ-ಸಂಭ್ರಮ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ
ಪಾರಂಪರಿಕ ಮೂಲೆ ಮಂಟಪ ಧ್ವಂಸ: ಪ್ರತಿಭಟನೆ