ಹೂವಿನಹಡಗಲಿ: ಮುಂದಿನ ಯುವ ಪೀಳಿಗೆಗೆ ಅರಣ್ಯ ಮತ್ತು ಜಲದ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಜತೆಗೆ ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಹೇಳಿದರು.
ಬೇಸಿಗೆ ಸಂದರ್ಭದಲ್ಲಿ ಪಾಣಿ, ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಗಿಡ ಮರಗಳಲ್ಲಿ ವ್ಯವಸ್ಥೆ ಮಾಡಬೇಕಿದೆ. ನಮ್ಮ ಮಕ್ಕಳಿಗೆ ಎಲ್ಲ ಪಾಣಿ, ಪಕ್ಷಿಗಳಲ್ಲಿ ಪಾಮುಖ್ಯತೆ ತಿಳಿಸಬೇಕು. ಈ ಹಿಂದೆ ರಾಜ ಮಹಾರಾಜರು ನೀರಿಗಾಗಿ ಕೆರೆಗಳ ಕಟ್ಟಿಸಿ ನೀರಾವರಿ ಸೌಲಭ್ಯದ ಜತೆಗೆ ನೀರಿನ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಿದ್ದರು ಎಂದರು.
ಪ್ರಾಧ್ಯಾಪಕ ಸದಾಶಿವ, ಐಕ್ಯೂಎಸಿ ಸಂಯೋಜನಕಿ ಡಾ. ಮಹಿಮಾ ಜ್ಯೋತಿ, ಪಾಧ್ಯಾಪಕ ಡಾ. ಚಂದ್ರಬಾಬು ಮಾತನಾಡಿದರು.ದೈಹಿಕ ನಿರ್ದೇಶಕ ಬಡೇಸಾಬ್ ನಾಯಕ, ಕೆ.ಎಂ. ಹರ್ಷ, ಎಸ್.ಬಿ. ಸಂಜಯ್, ಚಂದನಾ ಎಚ್.ಎಂ. ಚೈತ್ರ ಜೆ, ಕುಸುಮ ಎಚ್.ಎಂ. ಅನ್ನದಾನಪ್ಪ, ಎ.ಎಂ.ಪಿ. ಸಂದೀಪ ಹಾಗೂ ವಿದ್ಯಾರ್ಥಿಗಳು ಇತರರಿದ್ದರು.