ಒಂದೇ ಸೂರಿನಡಿ ಅರಣ್ಯ ಭವನ ಕೆಲಸ ಬಹುತೇಕ ಪೂರ್ಣ

KannadaprabhaNewsNetwork |  
Published : Oct 09, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುನಗರದ ಅರಣ್ಯ ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕಟ್ಟಡದಲ್ಲಿ ಬಾಕಿ ಇರುವ ಸಣ್ಣಪುಟ್ಟ ತಿದ್ದುಪಡಿ ಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಅರಣ್ಯ ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕಟ್ಟಡದಲ್ಲಿ ಬಾಕಿ ಇರುವ ಸಣ್ಣಪುಟ್ಟ ತಿದ್ದುಪಡಿ ಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ ₹9.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅರಣ್ಯ ಭವನಕ್ಕೆ ಗುರುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದರು ಅರಣ್ಯ ಇಲಾಖೆಯ ವಿವಿಧ ವಿಭಾಗಗಳು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಒಂದೇ ಸೂರಿನಡಿ ತರಲು ಅರಣ್ಯ ಭವನ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಚಿಕ್ಕಮಗಳೂರಿನ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ದೂರದೃಷ್ಟಿಯ ಯೋಜನೆಗೆ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗಿತ್ತು ಎಂದು ಹೇಳಿದರು.ಅರಣ್ಯ ಭವನ ಕಾಮಗಾರಿಗೆ 2022ರ ಅ. 29ರಂದು ತಾಂತ್ರಿಕ ಅನುಮೋದನೆ ದೊರೆತಿದ್ದು, 2023ರ ಫೆ.23ರಂದು ವರ್ಕ್ ಆರ್ಡರ್ ನೀಡಿ ಕಾಮಗಾರಿ ಆರಂಭಿಸಲಾಗಿತ್ತು. ಒಟ್ಟು ₹9.80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಂಕೀರ್ಣದಲ್ಲಿ ಅರಣ್ಯ ಇಲಾಖೆ ವಿವಿಧ ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದರು.ಕಟ್ಟಡದ ಹೊರಾಂಗಣ ವಿನ್ಯಾಸ ಹಾಗೂ ಎಲಿವೇಷನ್ ಉತ್ತಮವಾಗಿ ಮೂಡಿಬಂದಿದೆ. ಒಳಭಾಗದಲ್ಲಿರುವ ಸಣ್ಣಪುಟ್ಟ ಕೊರತೆಗಳನ್ನು ಸಿಬ್ಬಂದಿಯಿಂದ ಮಾಹಿತಿ ಪಡೆದು ಸರಿಪಡಿಸುವಂತೆ ಸೂಚಿಸಲಾಗಿದೆ. ಅಂತಿಮ ಹಂತದ ಕಾಮಗಾರಿ ಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

-- ಬಾಕ್ಸ್...

ಹಸಿರು ವಾತಾವರಣಕ್ಕೆ ಆದ್ಯತೆ

ಅರಣ್ಯ ಭವನದ ಆವರಣ ಪ್ರವೇಶಿಸುತ್ತಿದ್ದಂತೆಯೇ ಅರಣ್ಯದ ವಾತಾವರಣದ ಅನುಭವವಾಗುವಂತೆ ಸುತ್ತಮುತ್ತ ಸೂಕ್ತ ರೀತಿಯಲ್ಲಿ ಗಿಡ–ಮರಗಳನ್ನು ಬೆಳೆಸಬೇಕು. ಅಗತ್ಯ ಸಸಿಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಿಸುವಂತೆ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದರು.2018ರಿಂದ 2023ರವರೆಗೆ ಚಿಕ್ಕಮಗಳೂರಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಪ್ರವಾಸಿ ಮಂದಿರ, ನ್ಯಾಯಾಲಯ ಸಂಕೀರ್ಣ, ವಸತಿ ಶಾಲೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ₹10 ಕೋಟಿ ಹಾಗೂ ಜಗಜೀವನ್ ರಾಮ್ ಭವನಕ್ಕೂ ಅನುದಾನ ಮಂಜೂರಾಗಿತ್ತು. ನಗರದ ಭವಿಷ್ಯದ ಅಭಿವೃದ್ಧಿ ಹಾಗೂ ಸರ್ಕಾರಿ ಕಚೇರಿಗಳ ವ್ಯವಸ್ಥೆ ಗಮನದಲ್ಲಿಟ್ಟುಕೊಂಡೇ ಈ ಯೋಜನೆ ರೂಪಿಸಲಾಗಿತ್ತು ಎಂದು ಸಿ.ಟಿ. ರವಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಸ್ಸೆಸ್ಸೆಕೆ ಪುನಶ್ಚೇತನಕ್ಕೆ ಕೃಷಿಕ ಸಮಾಜ ಆಗ್ರಹ
ಪದವೀಧರರು, ಶಿಕ್ಷಕರ ದನಿಯಾಗುವೆ: ಶಶಿ ಹುಲಿಕಂಟೆಮಠ್