ಅರಣ್ಯ ಇಲಾಖೆಯಿಂದ 4 ಜನ ಕಾಡುಹಂದಿ ಬೇಟೆಗಾರ ಬಂಧನ

KannadaprabhaNewsNetwork |  
Published : Apr 05, 2024, 01:06 AM IST
ಕಾಡುಹಂದಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ | Kannada Prabha

ಸಾರಾಂಶ

ಸುರಪುರ ಅರಣ್ಯದಲ್ಲಿ ಅಕ್ರಮವಾಗಿ ಕಾಡಿನ ಹಂದಿಗಳನ್ನು ಬೇಟೆಯಾಡಿ ಯಾದಗಿರಿಯಿಂದ ಕೊರಟಗೆರೆ ಪಟ್ಟಣಕ್ಕೆ ತಂದು ಮಾರಾಟಕ್ಕೆ ಯತ್ನಿಸುವ ವೇಳೆಯಲ್ಲಿ ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ರವಿ.ಸಿ ನೇತೃತ್ವದ ಅಧಿಕಾರಿಗಳ ತಂಡ ೪ ಜನ ಆರೋಪಿಗಳ ಬಂಧಿಸುವ ಜೊತೆ ೭ ಕಾಡುಹಂದಿಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಕೊರಟಗೆರೆ: ಸುರಪುರ ಅರಣ್ಯದಲ್ಲಿ ಅಕ್ರಮವಾಗಿ ಕಾಡಿನ ಹಂದಿಗಳನ್ನು ಬೇಟೆಯಾಡಿ ಯಾದಗಿರಿಯಿಂದ ಕೊರಟಗೆರೆ ಪಟ್ಟಣಕ್ಕೆ ತಂದು ಮಾರಾಟಕ್ಕೆ ಯತ್ನಿಸುವ ವೇಳೆಯಲ್ಲಿ ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ರವಿ.ಸಿ ನೇತೃತ್ವದ ಅಧಿಕಾರಿಗಳ ತಂಡ ೪ ಜನ ಆರೋಪಿಗಳ ಬಂಧಿಸುವ ಜೊತೆ ೭ ಕಾಡುಹಂದಿಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.ಕೊರಟಗೆರೆ ಪಟ್ಟಣದ ವಿನಾಯಕ ನಗರದ ಮಾರುತಿ ಎಂಬಾತನ ಅಂಗಡಿಯಲ್ಲಿ ಮಾರಾಟಕ್ಕೆ ಯತ್ನಿಸುವ ವೇಳೆ ಅರಣ್ಯ ಇಲಾಖೆ ದಾಳಿ ನಡೆಸಿ ೪ ಜನ ಆರೋಪಿ, ಬುಲೇರೋ ವಾಹನ ವಶಕ್ಕೆ ಪಡೆದು ೭ಕಾಡಿನ ಹಂದಿಗಳನ್ನು ರಕ್ಷಣೆ ಮಾಡಿದ್ದಾರೆ. ಕೊರಟಗೆರೆ ಅರಣ್ಯ ಇಲಾಖೆಯಲ್ಲಿ ೫ಜನ ಆರೋಪಿಗಳ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೂಲ್‌ಪೇಟೆಯ ಸುರೇಶ(೨೮), ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಗಾಂಧಿ ನಗರದ ಮಂಜುನಾಥ(೨೮), ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರಂಗಮಪೇಟೆಯ ಪರಶುರಾಮ(೨೨), ತುಮ ಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ವಿನಾಯಕ ನಗರದ ಮಾರುತಿ(೩೯) ಬಂಧಿತರು ಇನ್ನೋರ್ವ ದೂಲ್‌ಪೇಟೆಯ ಆರೋಪಿ ಭೀಮಾ(೩೮)ನಿಗೆ ಶೋಧ ಕಾರ್ಯ ನಡೆದಿದೆ.ತುಮಕೂರು ಉಪಅರಣ್ಯ ಸಂರಕ್ಷಣಾಧಿಕಾರಿ ಅನುಪಮ.ಎಚ್, ಮಧುಗಿರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾ ರ್ಜುನ್ ಮಾರ್ಗದರ್ಶನದಲ್ಲಿ ಕೊರಟಗೆರೆ ವಲಯ ಅರಣ್ಯಾಧಿಕಾರಿ ರವಿ.ಸಿ, ಉಪ ವಲಯ ಅರಣ್ಯಾಧಿಕಾರಿ ದಿಲೀಪ್‌ಕುಮಾ ರ್, ಸಿಬ್ಬಂದಿ ವಿಜಯಕುಮಾರ್, ಮಂಜುನಾಥ, ಚಾಂದುಪಾಷ, ಕಾವ್ಯಶ್ರೀ, ನರಸರಾಜು, ಬಾಬು ಇತರರು ದಾಳಿಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ