ವನ್ಯಜೀವಿಗಳಿಗೆ ಅರಣ್ಯ ಇಲಾಖೆಯಿಂದ ಟ್ಯಾಂಕರ್‌ ನೀರು

KannadaprabhaNewsNetwork |  
Published : Apr 05, 2025, 12:47 AM IST
27ಎಚ್.ಎಲ್.ವೈ-1: ಹಳಿಯಾಳ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ  ಅರಣ್ಯದಲ್ಲಿ ವನ್ಯಪ್ರಾಣಿ ಮತ್ತು ಪಕ್ಷಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿರುವ ಅರಣ್ಯ ಇಲಾಖೆ. | Kannada Prabha

ಸಾರಾಂಶ

ಬೇಸಿಗೆಯ ಬೇಗೆಯಿಂದ ಹಳಿಯಾಳ ಅರಣ್ಯ ವಿಭಾಗದ ಕಾಡು ಸಂಪೂರ್ಣವಾಗಿ ಒಣಗಿ, ಕಾಡಿನಲ್ಲಿರುವ ಕೆರೆಗಳು, ನೀರಿನ ಝರಿಗಳು ಬತ್ತಿ ಹೋಗುತ್ತಿವೆ.

ಹಳಿಯಾಳ: ಬೇಸಿಗೆಯ ಬೇಗೆಯಿಂದ ಹಳಿಯಾಳ ಅರಣ್ಯ ವಿಭಾಗದ ಕಾಡು ಸಂಪೂರ್ಣವಾಗಿ ಒಣಗಿ, ಕಾಡಿನಲ್ಲಿರುವ ಕೆರೆಗಳು, ನೀರಿನ ಝರಿಗಳು ಬತ್ತಿ ಹೋಗುತ್ತಿವೆ. ವನ್ಯ ಪ್ರಾಣಿ-ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಹಳಿಯಾಳ ಅರಣ್ಯ ವಿಭಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾರಂಭಿಸಿದೆ.

ಈ ಬಾರಿಯ ಅತಿಯಾದ ಬಿಸಿಲು ಹಾಗೂ ಒಣ ಹವೆಯಿಂದಾಗಿ ಕಾಡಿನಲ್ಲಿನ ಜಲಮೂಲಗಳು ಬತ್ತಿ ಹೋಗಲಾರಂಭಿಸಿವೆ. ಈ ಜಲಮೂಲಗಳ ಬಳಿ ಹಾಗೂ ಇತರೆಡೆ ಅಲ್ಲಲ್ಲಿ ಸಿಮೆಂಟಿನ ಟ್ಯಾಂಕ್‌ಗಳನ್ನು ನಿರ್ಮಿಸಿರುವ ಅರಣ್ಯ ಇಲಾಖೆ, ಈ ಟ್ಯಾಂಕ್‌ಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯ ಮಾಡಲಾರಂಭಿಸಿದೆ. ಟ್ಯಾಂಕ್‌ಗಳನ್ನು ಪರಿಶೀಲಿಸಿ, ಹದಿನೈದು ದಿನಗಳಿಗೊಮ್ಮೆ ನೀರು ತುಂಬಿಸುವ ಕಾರ್ಯ ಮುಂದುವರಿಯಲಿದೆ.

ಆರಂಭದಲ್ಲಿ ಹಳಿಯಾಳ ಅರಣ್ಯ ವಲಯದಲ್ಲಿ 20, ಸಾಂಬ್ರಾಣಿ ಅರಣ್ಯ ವಲಯದಲ್ಲಿ 9 ಹಾಗೂ ಭಾಗವತಿ ಅರಣ್ಯ ವಲಯದಲ್ಲಿ 5 ಕಡೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಇನ್ನೂ ಮುಂದಿನ ತಿಂಗಳು ಮಳೆ ಬರದೇ ಇದ್ದಲ್ಲಿ ಅರಣ್ಯ ಇಲಾಖೆ ಟ್ಯಾಂಕ್‌ಗಳ ಸಂಖ್ಯೆ ಹೆಚ್ಚಿಸುವ ಕಾರ್ಯಯೋಜನೆ ಸಿದ್ಧಪಡಿಸಿದೆ. ಬಿರುಬಿಸಿಲಿನ ಬೇಗೆಯಿಂದ ನೀರನ್ನು ಅರಸಿ ವನ್ಯಪ್ರಾಣಿಗಳು ಗ್ರಾಮದಂಚಿಗೆ ಬಂದರೆ ಬೆದರಿಸದಂತೆ, ಪ್ರಾಣಹಾನಿ ಮಾಡದಂತೆ ಸಾರ್ವಜನಿರಕಿಗೆ ಮನವಿಯನ್ನೂ ಮಾಡಿದೆ.

ಕಾಡಂಚಿನ ಗ್ರಾಮಸ್ಥರು, ಕಾಡಂಚಿನಲ್ಲಿ ಕೃಷಿ ಜಮೀನುಗಳನ್ನು ಹೊಂದಿರುವ ರೈತರು ಹಾಗೂ ಜನಸಾಮಾನ್ಯರು ವನ್ಯಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ವ್ಯವಸ್ಥೆ ಮಾಡಬೇಕು. ಮನೆಯ ಬಳಿ ಅಥವಾ ಹೊಲಗಳಲ್ಲಿ ಅಥವಾ ಕೊಟ್ಟಿಗೆಯ ಬಳಿ ನೀರಿನ ತೊಟ್ಟಿಯಿಟ್ಟು ನೀರು ತುಂಬಿಸಬೇಕು. ಈ ಕಾರ್ಯದಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು.

ಬಸವರಾಜ ಎಂ. ಹಳಿಯಾಳ ವಲಯ ಅರಣ್ಯಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌