)
- ಹೊರ ರಾಜ್ಯಗಳಲ್ಲಿ ಸಿಕ್ಕ ಚಿರತೆ ಎಂಎಂಹಿಲ್ಸ್‌ಗೆ ವರ್ಗ
---
ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರಿಗಳು ಹೋಗದಂತೆ ತಡೆಯಲು ಅರಣ್ಯ ಇಲಾಖೆಯು ಹೊರರಾಜ್ಯಗಳಲ್ಲಿ ಸಿಕ್ಕಿ ಚಿರತೆಗಳನ್ನು ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮ ಮತ್ತು ಕಾವೇರಿ ಧಾಮಕ್ಕೆ ಬಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಹೊರರಾಜ್ಯಗಳಷ್ಟೇ ಅಲ್ಲದೇ ಜಿಲ್ಲೆ ಮತ್ತು ಸುತ್ತಮುತ್ತಲು ಸಿಗುವ ಚಿರತೆಗಳನ್ನೂ ಇಲ್ಲಿಯೇ ತಂದು ಬಿಡುತ್ತಿರುವುದರಿಂದ ಜನ, ಜಾನುವಾರು ಮತ್ತು ಭಕ್ತರ ಮೇಲೆ ದಾಳಿ ಹೆಚ್ಚುತ್ತಿದೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಈ ರೀತಿ ಹೊರಗಡೆ ಸೆರೆಸಿಕ್ಕ ಚಿರತೆಗಳನ್ನು ಎಂಎಂಹಿಲ್ಸ್ ವನ್ಯಜೀವಿ ಧಾಮ ಮತ್ತು ಕಾವೇರಿ ಧಾಮಗಳಲ್ಲಿ ಬಿಡದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.