ರೈತ ಸಂಘದ ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ

KannadaprabhaNewsNetwork | Published : Oct 7, 2024 1:31 AM

ಸಾರಾಂಶ

ಹನೂರು: ರೈತ ಸಂಘದ ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ ನಾಮಫಲಕಗಳು ವಾಪಸ್ ನೀಡುವ ಮೂಲಕ ರೈತ ಸಂಘಟನೆ ಗ್ರಾಮಗಳಲ್ಲಿ ನಾಮಫಲಕ ಮರುಸ್ಥಾಪನೆ ಮಾಡುವ ಮೂಲಕ ಗ್ರಾಮಸ್ಥರಿಗೆ ಧೈರ್ಯ ತುಂಬಿದೆ.

ಹನೂರು: ರೈತ ಸಂಘದ ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ ನಾಮಫಲಕಗಳು ವಾಪಸ್ ನೀಡುವ ಮೂಲಕ ರೈತ ಸಂಘಟನೆ ಗ್ರಾಮಗಳಲ್ಲಿ ನಾಮಫಲಕ ಮರುಸ್ಥಾಪನೆ ಮಾಡುವ ಮೂಲಕ ಗ್ರಾಮಸ್ಥರಿಗೆ ಧೈರ್ಯ ತುಂಬಿದೆ.

ಹನೂರು ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಆಲಂಬಾಡಿ, ಅಪ್ಪು ಕಾಮ್ ಪಟ್ಟಿ, ಪುಂಗಂ ,ಅತೂರ್ ವಿವಿಧ ಗ್ರಾಮಗಳಲ್ಲಿ ಸೆ.20ರಂದು ಗ್ರಾಮ ಘಟಕ ನಾಮಫಲಕಗಳನ್ನು ಅಳವಡಿಸುವ ಮೂಲಕ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಚಾಮರಾಜನಗರ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಸಂಘಟನೆಗೆ ಒತ್ತು ನೀಡಿತ್ತು, ನಂತರ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಮತ್ತು ರಾಜ್ಯ ರೈತ ಸಂಘ ಗಮನಕ್ಕೆ ತರದೆ ಏಕೈಕ ಅಪ್ಪು ಕಾಂ ಪಟ್ಟಿ, ಪುಂಗಂ, ಅತ್ತೂರು ಗ್ರಾಮಗಳಲ್ಲಿ ನಾಮಫಲಕಗಳನ್ನು ತೆರವುಗೊಳಿಸಿ ಆಲಂಬಡಿ ಗ್ರಾಮದಲ್ಲಿ ನಾಮಫಲಕ ತೆರವುಗೊಳಿಸಲು ತೆರಳಿದ್ದಾಗ ಗ್ರಾಮಸ್ಥರ ವಿರೋಧದ ನಡುವೆ ವಾಗ್ವಾದ ನಡೆದು ಗ್ರಾಮಸ್ಥರ ಮೇಲೆ ಅರಣ್ಯಾಧಿಕಾರಿಗಳು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಆಲಂಬಾಡಿ ಗ್ರಾಮದಲ್ಲಿರುವ ನಾಮಫಲಕ ತೆರವುಗೊಳಿಸಲು ಒಂದು ವಾರ ಕಾಲ ಗಡುವು ನೀಡಿದ್ದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜೊತೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೂ ಮನವಿ ಸಲ್ಲಿಸಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳೇ ವಶಪಡಿಸಿಕೊಂಡಿದ್ದ ನಾಮಫಲಕಗಳನ್ನು ವಾಪಸ್ ನೀಡಿ ಕ್ಷಮೆ ಕೇಳಿರುವ ಪ್ರಸಂಗ ಜರುಗಿದೆ.

ನಾಮಫಲಕ ಮರುಸ್ಥಾಪನೆ: ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮಗಳಿಗೆ ತೆರಳಿ ಅಪ್ಪು ಕಮ್ ಪಟ್ಟಿ, ಪುಂಗಂ, ಅತ್ತೂರು ಗ್ರಾಮಗಳಲ್ಲಿ ಎರಡು ನಾಮಪಲಕಗಳನ್ನು ತೆರವುಗೊಳಿಸಿದ್ದ ಸ್ಥಳದಲ್ಲಿಯೇ ಮರುಸ್ಥಾಪನೆ ಮಾಡುವ ಮೂಲಕ ಅರಣ್ಯಾಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹೋರಾಟದ ಫಲವಾಗಿ ಜಿಲ್ಲಾಮಟ್ಟದಲ್ಲಿ ಪತ್ರಿಕಾಗೋಷ್ಠಿ ಕರೆದು ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿ ಗಡಿ ಗ್ರಾಮಗಳಲ್ಲಿ ಶಾಂತಿಯುತವಾಗಿ ಮರು ನಾಮಫಲಕ ಅಳವಡಿಸುವ ಮೂಲಕ ಗ್ರಾಮಸ್ಥರಿಗೆ ರೈತ ಸಂಘಟನೆ ಧೈರ್ಯ ತುಂಬಿದೆ.

ಜಿಲ್ಲಾಧಿಕಾರಿ ಭೇಟಿ, ಭರವಸೆ: ತಮಿಳುನಾಡಿನ ಗಡಿ ಗ್ರಾಮದಲ್ಲಿ ಬರುವ ಗೋಪಿನಾಥಂ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ನಡೆಯುತ್ತಿರುವ ಅರಣ್ಯ ಅಧಿಕಾರಿಗಳ ಕಿರುಕುಳ ತಪ್ಪಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ದಸರಾ ಮುಗಿದ ನಂತರ ಗ್ರಾಮಗಳಿಗೆ ತೆರಳಿ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಸಹ ರಾಜ್ಯ ರೈತ ಸಂಘ ಪತ್ರ ವ್ಯವಹಾರ ನಡೆಸಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಅರಣ್ಯಾಧಿಕಾರಿಗಳು ಮತ್ತೆ ಗ್ರಾಮಸ್ಧರನ್ನು ಒಕ್ಕಲೆಬ್ಬಿಸಲು ಕಿರುಕುಳ ನೀಡಿದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ, ತಾಲೂಕು ಅಧ್ಯಕ್ಷ ಅಮ್ಜದ್ ಖಾನ್, ರೈತ ಮುಖಂಡರಾದ ತಂಗವೇಲು, ರತ್ನವೇಲು, ಗೋವಿಂದರಾಜು ಮತ್ತು ಮಾದೇಶ್ ಹಾಗೂ ಅಪ್ಪು ಕಾಂ ಪಟ್ಟಿ .ಆಲಂಬಾಡಿ ,ಪುಂಗಂ, ಅತೂರು ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.

Share this article