ಒಕ್ಕಲೆಬ್ಬಿಸುವ ಪ್ರಕ್ರಿಯೆ ತುರ್ತು ಸ್ಥಗಿತಗೊಳಿಸುವಂತೆ ಘೋಷಣೆ
ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಾವಿರಾರು ಅರಣ್ಯವಾಸಿಗಳ ಐತಿಹಾಸಿಕ ಬೃಹತ್ ರ‍್ಯಾಲಿಯು ಶಿರಸಿಯಲ್ಲಿ ಯಶಸ್ವಿಯಾಗಿ ನಡೆಯಿತು.
ನಗರದ ಯಲ್ಲಾಪುರ ನಾಕಾದಲ್ಲಿ ಜಮಾಯಿಸಿದ ಸುಮಾರು 3 ಸಾವಿರ ಅರಣ್ಯವಾಸಿಗಳು, ರಸ್ತೆ ಬಂದ್ ಮಾಡಿ ಸುಮಾರು 3 ತಾಸು ಧರಣಿ ಹಮ್ಮಿಕೊಂಡು ಅಧಿಕಾರಿಗಳ ಆಗಮನ, ಸಮಾಲೋಚನೆ ಸಭೆಗೆ ಆಗ್ರಹಿಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ತುರ್ತು ಸಿಸಿಎಫ್ ಸ್ಥಗಿತಕ್ಕೆ ಘೋಷಣೆ ಕೊನೆಯಲ್ಲಿ ಜಯ ಘೋಷದೊಂದಿಗೆ ಬೃಹತ್ ಮೆರವಣಿಗೆ ಐತಿಹಾಸಿಕವಾಗಿತ್ತು.ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮುಂದಾಳತ್ವದಲ್ಲಿ ಮಂಗಳವಾರ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಲಯದ ಸಮೀಪದ ಯಲ್ಲಾಪುರ ನಾಕಾದಲ್ಲಿ ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳು ಪ್ರಥಮ ಹಂತದಲ್ಲಿ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಆಗ್ರಹಿಸಿದರೇ, ತದನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಆಗಮಿಸಿ ಸಾರ್ವಜನಿಕವಾಗಿ ಮನವಿ ಸ್ವೀಕರಿಸಬೇಕೆಂದು ಧರಣಿ ಆಗ್ರಹಿಸಲಾಯಿತು. ಹೋರಾಟಗಾರರ ಒತ್ತಾಯಕ್ಕೆ ಮಣಿದು ಸ್ಥಳದಲ್ಲಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೋರಾಟಗಾರರಿಗೆ ಮಣಿದು ಸಿಸಿಎಫ್‌ಗೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಲು ಮನವೊಲಿಸಿದರು.ತುರ್ತು ಸ್ಥಗಿತಕ್ಕೆ ಘೋಷಣೆ:
ಜೋಯಿಡಾದಲ್ಲಿ ಅತಿಕ್ರಮಣದಾರರ ಮೇಲೆ ಜರುಗುತ್ತಿರುವ ದೌಜನ್ಯದ ಕುರಿತು ಮುಂದಿನ 15 ದಿನದೊಳಗಡೆ ವಿಶೇಷ ಸಭೆ ಸಂಘಟಿಸಲಾಗುವುದು ಎಂದು ಹೇಳಿದರು.
ಕಾನೂನಾತ್ಮಕ ಹೋರಾಟದ ಹಿನ್ನೆಲೆ ಸಿಸಿಎಫ್ ಅವರಿಂದ ಒಕ್ಕಲೆಬ್ಬಿಸುವಿಕೆಯಲ್ಲಿ ಸ್ಪಷ್ಟ ನಿರ್ದೇಶನ ಘೋಷಣೆ ನಂತರ, ಕಳೆದ 3 ದಶಕಗಳಿಂದ ಅರಣ್ಯವಾಸಿಗಳ ಧ್ವನಿಯಾಗಿರುವ ರವೀಂದ್ರ ನಾಯ್ಕ ಅವರನ್ನು ಹೆಗಲಮೇಲೆ ಹೊತ್ತು ಜಯ ಘೋಷ ಮತ್ತು ಪಟಾಕಿಗಳಿಂದ ಬೃಹತ್ ಮೆರವಣಿಗೆ ಸಿಸಿಎಫ್ ಕಚೇರಿಯಿಂದ ವಿಕಾಸಾಶ್ರಮ ಮೈದಾನದವರೆಗೆ ಮೆರವಣಿಗೆ ಜರುಗಿ ಕೊನೆಯಲ್ಲಿ ವಿಜಯೋತ್ಸವದ ಸಭೆಯಾಗಿ ಪರಿವರ್ತನೆಗೊಂಡಿತು.