ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಿಂದ ನಿರಂತರವಾಗಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಐವತ್ತಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಮಲೆಮಾದೇಶ್ವರ ವನ್ಯಧಾಮ ವ್ಯಾಪ್ತಿಯ ರಾಮಾಪುರ, ಹೂಗ್ಯಂ, ಮಹಾಲಿಂಗನ ಕಟ್ಟೆ ಮತ್ತು ಬೂದಿ ಪಡ್ಗ ಸಮೀಪದ ಅರಣ್ಯ ಪ್ರದೇಶ ಸೇರಿದಂತೆ ಬೆಳತ್ತೂರು, ಹನೂರು ಪಟ್ಟಣಕ್ಕೆ ಸೇರಿದಂತೆ ಇರುವ ಅರಣ್ಯದಂಚಿನಲ್ಲಿ ಸುಮಾರು 20 ದಿನಗಳಿಂದ ನಿರಂತರವಾಗಿ ಪಚ್ಚೆದೊಡ್ಡಿ ಹಾಗೂ ಎಲ್ಲೇ ಮಾಳ ರಸ್ತೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಅರಣ್ಯದಲ್ಲಿನ ಗಿಡ ಮರ ಕೆಲವು ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ.
ಶನಿವಾರ ಸಂಜೆ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಬಫರ್ ಅರಣ್ಯ ಪ್ರದೇಶ ವ್ಯಾಪ್ತಿಯ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಇಪ್ಪತ್ತಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಾಗಿ ಆನೆ, ಕಾಡೆಮ್ಮೆ, ಜಿಂಕೆಗಳು ಸೇರಿದಂತೆ ಇನ್ನಿತರ ಪ್ರಾಣಿಗಳ ವಾಸಸ್ಥಾನವಾಗಿದೆ. ಬೆಂಕಿ ಬಿದ್ದಿರುವುದರಿಂದ ವನ್ಯ ಪ್ರಾಣಿಗಳಿಗೂ ಕಂಟಕವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಮೇವು ಮೇಯಿಸುವ ಕೆಲವು ರೈತರುಗಳು ಹೊಸ ಮೇವು ಬರಲಿ ಎಂದು ಹುಲ್ಲಿಗೆ ಬೆಂಕಿ ಹಾಕುತ್ತಿರುವುದರಿಂದ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಅರಣ್ಯಕ್ಕೆ ಬೆಂಕಿ ಇಡುತ್ತಿರುವ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಎತ್ತರವಾದ ಬೆಟ್ಟದಲ್ಲಿ ಕಾಡಿಗೆಚಿಗೆ ಬೆಂಕಿ ಕಾಣಿಸಿಕೊಂಡು ಅರಣ್ಯ ಪ್ರದೇಶದಲ್ಲಿ ಅತೀ ಉರಿಯುತ್ತಿದೆ. ಹೀಗಾಗಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಿರಂತರವಾಗಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.
ಈಗಾಗಲೇ ಸಿಬ್ಬಂದಿಗಳು ಹೆಚ್ಚು ಬೆಂಕಿ ವ್ಯಾಪಿಸಿದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಕತ್ತಲೆ ಆಗಿರುವುದರಿಂದ ಬೆಂಕಿ ನಂದಿಸಲು ವಿಳಂಬವಾಗಬಹುದು ಹೀಗಾಗಿ ಕಾಡ್ಗಿಚ್ಚಿನಿಂದ ಆಗಿರುವ ಬೆಂಕಿ ಬೆಟ್ಟ ಅತಿ ಉರಿಯುತ್ತಿದೆ ಕೂಡಲೇ ಬೆಂಕಿ ನಂದಿಸಲಾಗುವುದು.ಪ್ರವೀಣ್, ವಲಯ ಅರಣ್ಯಾಧಿಕಾರಿ ಮಲೆ ಮಹದೇಶ್ವರ ವನ್ಯಧಾಮ ಬಪ್ಪರ್ ಜೋನ್ ವಲಯ