ಕನ್ನಡಪ್ರಭ ವಾರ್ತೆ ಸಿದ್ದಾಪುರ
ಈ ಹಿಂದೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಶಾಶ್ವತ ಪರಿಹಾರದ ಚಿಂತನೆ ಮಾಡಿ ಜಾಗ ಗುರುತಿಸಿ ನದಿ ದಡದ ನಿವಾಸಿಗಳ ಸ್ಥಳಾಂತರಕ್ಕೆ ಶ್ರಮಿಸಿದರು. ನಿವಾಸಿಗಳು ಸ್ಥಳದಿಂದ ತೆರಳಲು ಮುಂದಾಗಿರಲಿಲ್ಲ. ಈಗ ಸಂತ್ರಸ್ತರು ಪುನರ್ ವಸತಿ ಸ್ಥಳಗಳಿಗೆ ತೆರಳಲು ಒಪ್ಪಿದ್ದಾರೆ. ಸರ್ಕಾರ ಆದಷ್ಟು ಬೇಗ ಶಾಶ್ವತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕಾವೇರಿ ನದಿ ನೀರಿನಲ್ಲಿ ಭಾರಿ ಪ್ರಮಾಣದ ಏರಿಕೆಯಾದ ನದಿ ದಡ ಗ್ರಾಮಗಳದ ಗುಹ್ಯ ಗೂಡುಗದ್ದೆಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.ನಂತರ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟದಲ್ಲಿರುವ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರ ಅಹವಾಲು ಕೇಳಿದರು. ಈ ಸಂದರ್ಭ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಸಂತ್ರಸ್ತರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪಕ್ಷದ ಮುಖಂಡರಾದ ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್, ನೆಲ್ಲಿರ ಚಲನ್, ಸುವಿನ್ ಗಣಪತಿ, ಅಜಿತ್ ಕರುಂಬಯ್ಯ ಮತ್ತಿತರರು ಇದ್ದರು.