ಕರ್ನಾಟಕಕ್ಕೆ ಡಾ. ರಾಜ್‌ ಕೊಡುಗೆ ಅಪಾರ: ಅಯೂಬ್ ಖಾನ್

KannadaprabhaNewsNetwork |  
Published : Apr 13, 2024, 01:07 AM IST
39 | Kannada Prabha

ಸಾರಾಂಶ

ಕನ್ನಡ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮೂಲಕ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಅಭಿವೃದ್ಧಿ ಕೆಲಸಗಳಿಗೆ ಡಾ. ರಾಜಕುಮಾರ್ ನೆರವಾಗಿದ್ದರು. ಅವರು ನಟಿಸಿರುವ ಚಿತ್ರಗಳು ಕೌಟುಂಬಿಕ ಪ್ರಧಾನವಾದುದು ಸಂಸ್ಕಾರ, ಸಂಸ್ಕೃತಿಯನ್ನ ಬಿಂಬಿಸುತ್ತಿದ್ದವು. ಮಾದಕ ವಸ್ತುಗಳನ್ನ ಬಳಸದಂತೆ ಆರೋಗ್ಯ ಸಮಾಜ ನಿರ್ಮಾಣದ ಬಗ್ಗೆ ಯುವಜನತೆಗೆ ಸಂದೇಶ ನೀಡುತ್ತಿದ್ದರು. ಪೌರಾಣಿಕ, ಧಾರ್ಮಿಕ, ಸಾಮಾಜಿಕ ಸೇರಿದಂತೆ ಎಲ್ಲಾ ತರಹದ ಪಾತ್ರಗಳನ್ನ ನಿರ್ವಹಿಸಿ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ನೆಲಸಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕಕ್ಕೆ ನಟ ಡಾ. ರಾಜಕುಮಾರ್ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅಯೂಬ್ ಖಾನ್ ತಿಳಿಸಿದರು.

ಡಾ. ರಾಜಕುಮಾರ್ ಅವರ 18ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಸರಾ ವಸ್ತುಪ್ರದರ್ಶನ ಅವರಣದಲ್ಲಿರುವ ಡಾ. ರಾಜಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಡಾ. ರಾಜಕುಮಾರ್ ಅವರು ಕನ್ನಡ ನೆಲ ಜಲ ಭಾಷೆ ವಿಚಾರಕ್ಕೆ ಧಕ್ಕೆ ಬಂದಾಗ ಪ್ರಪ್ರಥಮವಾಗಿ ಹೋರಾಟದಲ್ಲಿ ಪಾಲ್ಗೊಂಡು ಕನ್ನಡಿಗರ ಪರವಾಗಿ ಧ್ವನಿಯೆತ್ತುತ್ತಿದರು, ಸಹಸ್ರಾರು ಕಲಾವಿರನ್ನ ಮುಖ್ಯವಾಹಿನಿಗೆ ತಂದಿದ್ದಾರೆ. ಇಂದಿನ ಯುವ ಕಲಾವಿದರಿಗೆ ಮಾದರಿಯಾಗಿದ್ದಾರೆ ಎಂದರು.

ಕನ್ನಡ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮೂಲಕ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಅಭಿವೃದ್ಧಿ ಕೆಲಸಗಳಿಗೆ ಡಾ. ರಾಜಕುಮಾರ್ ನೆರವಾಗಿದ್ದರು. ಅವರು ನಟಿಸಿರುವ ಚಿತ್ರಗಳು ಕೌಟುಂಬಿಕ ಪ್ರಧಾನವಾದುದು ಸಂಸ್ಕಾರ, ಸಂಸ್ಕೃತಿಯನ್ನ ಬಿಂಬಿಸುತ್ತಿದ್ದವು. ಮಾದಕ ವಸ್ತುಗಳನ್ನ ಬಳಸದಂತೆ ಆರೋಗ್ಯ ಸಮಾಜ ನಿರ್ಮಾಣದ ಬಗ್ಗೆ ಯುವಜನತೆಗೆ ಸಂದೇಶ ನೀಡುತ್ತಿದ್ದರು. ಪೌರಾಣಿಕ, ಧಾರ್ಮಿಕ, ಸಾಮಾಜಿಕ ಸೇರಿದಂತೆ ಎಲ್ಲಾ ತರಹದ ಪಾತ್ರಗಳನ್ನ ನಿರ್ವಹಿಸಿ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ನೆಲಸಿದ್ದಾರೆ ಎಂದು ಅವರು ಹೇಳಿದರು.

ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಚಾಮುಂಡೇಶ್ವರಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಆರೀಫ್ ಪಾಷಾ, ತಬ್ರೇಜ್, ಐಎನ್ ಟಿಸಿ ಚೇತನ್, ಮಹದೇವ ಪಾಂಡೆ, ನಿಂಗರಾಜು, ಲೋಕೆಶ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಗೆ ಉತ್ತೇಜನ ನೀಡಲು ಕ್ರೀಡಾಕೂಟ ಸಹಕಾರಿ: ಶಾಸಕ ತಮ್ಮಯ್ಯ
ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಅಗತ್ಯ ಸಿದ್ದತೆಗೆ ಸೂಚನೆ