ಟಿಎಪಿಸಿಎಂಎಸ್‌ ವಾಣಿಜ್ಯ ಮಳಿಗೆ ಉದ್ಘಾಟಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Jun 25, 2025, 12:34 AM IST
23ಕೆಎಂಎನ್ ಡಿ16 | Kannada Prabha

ಸಾರಾಂಶ

ಟಿಎಪಿಸಿಎಂಎಸ್ ಸಂಸ್ಥೆಯಿಂದ ನಿರ್ಮಿಸಿರುವ 16 ಮಳಿಗೆಗಳ ಪೈಕಿ 14 ಮಳಿಗೆಗಳನ್ನು ಹೀಗಾಗಲೆ ಟೆಂಡರ್ ಪ್ರಕ್ರಿಯೆ ಮೂಲಕ ಹರಾಜು ನಡೆಸಲಾಗಿದೆ. ಹರಾಜು ಮೂಲಕ ಪಡೆದುಕೊಂಡಿರುವ ಬಾಡಿಗೆದಾರರು ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಹುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಾಂಡವಪುರ- ಕೆಆರ್‌ಎಸ್ ಮುಖ್ಯ ರಸ್ತೆಯ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಬಳಿ ಅಂದಾಜು 56 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 16 ವಾಣಿಜ್ಯ ಮಳಿಗೆಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೋಮವಾರ ಉದ್ಘಾಟಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಟಿಎಪಿಸಿಎಂಎಸ್ ಸಂಸ್ಥೆಯಿಂದ ನಿರ್ಮಿಸಿರುವ 16 ಮಳಿಗೆಗಳ ಪೈಕಿ 14 ಮಳಿಗೆಗಳನ್ನು ಹೀಗಾಗಲೆ ಟೆಂಡರ್ ಪ್ರಕ್ರಿಯೆ ಮೂಲಕ ಹರಾಜು ನಡೆಸಲಾಗಿದೆ. ಹರಾಜು ಮೂಲಕ ಪಡೆದುಕೊಂಡಿರುವ ಬಾಡಿಗೆದಾರರು ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಹುದು ಎಂದರು.

ಸಂಸ್ಥೆಯಲ್ಲಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಪಕ್ಷಾತೀತವಾಗಿ ಕೆಲಸ ಮಾಡಿ ಸಂಸ್ಥೆಗೆ ಆದಾಯ ಮೂಲಗಳನ್ನು ಮಾಡುವ ಮೂಲಕ ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದೇವೆ. ಬಟ್ಟೆ ಅಂಗಡಿ, ವಾಟರ್‌ ಪ್ಲಾಂಟ್, ಆರ್‌ಟಿಸಿ ಮತ್ತು ಎಂಆರ್ ವಿಭಾಗ, ವಾಣಿಜ್ಯ ಸಂಕೀರಣ, ವೇಬ್ರಿಡ್ಜ್ ಮಾಡಿದ್ದೇವೆ. ಜತೆಗೆ ಆಡಳಿತ ಕಚೇರಿಯನ್ನು ಹೊಸದಾನಿ ನಿರ್ಮಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಸಿಮೆಂಟ್ ಅಂಗಡಿ ಹಾಗೂ ಪೆಟ್ರೂಲ್ ಬಂಕ್ ಆವರಣದಲ್ಲಿ ವಾಟರ್‌ಪ್ಲಾಂಟ್ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಈ ವೇಳೆ ಟಿಎಪಿಸಿಎಂಎಸ್ ಉಪಾಧ್ಯಕ್ಷೆ ತಿಮ್ಮಬ್ಬ ಉ.ಪದ್ಮಮ್ಮ, ನಿರ್ದೇಶಕರಾದ ಎಸ್.ನಾಗರಾಜು, ಗುರುಸ್ವಾಮಿ, ರಾಮಕೃಷ್ಣೇಗೌಡ, ಸಿ.ಎಂ.ಶ್ರೀಕಾಂತ್, ಕೆ.ಎಸ್.ಯೋಗೇಶ್, ಎಸ್.ದಯಾನಂದ್, ವಿ.ಬೆಟ್ಟಸ್ವಾಮೀಗೌಡ, ನರಸಿಂಹನಾಯ್ಕ, ಸಿ.ಜಿ.ಮಾಲತಿ, ಜಯಶೀಲಮ್ಮ, ಕೆ.ಪುಷ್ಪವತಿ, ಎಚ್.ಎನ್.ಚಿಟ್ಟಿಬಾಬು, ಕಾರ್‍ಯದರ್ಶಿ ಎ.ಎಸ್.ನವೀನ್‌ಕುಮಾರ್, ರೈತಮುಖಂಡೆ ಸುನೀತ ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಕೆ.ಬಿ.ನರಸಿಂಹೇಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಸಿದ್ದೇಗೌಡ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ
ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ