ಮಂಡ್ಯ:
ತಾಲೂಕಿನ ಹನಕೆರೆ ಗ್ರಾಮದ ರೈತರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡಿದ ಬಳಗದ ಅಧ್ಯಕ್ಷ ಜಿ.ಬಿ.ನವೀನ್ ಕುಮಾರ್, ಜಿಲ್ಲೆಯ ಅಭಿವೃದ್ಧಿಗೆ ಚಲುವರಾಯಸ್ವಾಮಿ ಅವರ ಕೊಡುಗೆ ಅಪಾರ. ಮೆಡಿಕಲ್ ಕಾಲೇಜು, ಸಾರಿಗೆ ಬಸ್ ನಿಲ್ದಾಣಗಳು, ನೂತನ ಸರ್ಕಾರಿ ಕಟ್ಟಡಗಳು ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ನಮ್ಮ ಕಣ್ಣಮುಂದಿವೆ. ಅಲ್ಲದೇ, ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ತರುವ ಮೂಲಕ ರೈತರಿಗೆ ನ್ಯಾಯ ದೊರಕಿಸಿದ್ದಾರೆ ಎಂದು ಶ್ಲಾಘಿಸಿದರು.
ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಮತ್ತಷ್ಟು ವೃದ್ಧಿಸಲಿ, ಜನಸೇವಾ ಕಾರ್ಯಗಳು ಮುಂದುವರಿಯಲಿ. ಜನಸೇವೆಗಾಗಿ ಹುಟ್ಟಿರುವ ಚಲುವರಾಯಸ್ವಾಮಿ ಅವರ ಸಮಾಜಮುಖಿ ಕಾರ್ಯಗಳು ಸದಾ ನಡೆಯಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಚ್.ಪಿ.ಮಹೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಉಪನ್ಯಾಸಕ ಪ್ರೊ.ಎನ್.ರಾಜೇಂದ್ರಸಿಂಗ್ ಬಾಬು, ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ರಾಜಣ್ಣ, ರಘು, ಅಭಿ, ಸುಧನ್, ಪುಟ್ಟಸ್ವಾಮಿ ಇದ್ದರು.ಚಿಕ್ಕಬ್ಯಾಡರಹಳ್ಳಿ ಬೊಮ್ಮಲಿಂಗಯ್ಯರಿಗೆ ಬೀಳ್ಕೊಡುಗೆ
ಕಾರ್ಯಕ್ರಮದಲ್ಲಿ ಎಂಪ್ಲಾಯೀಸ್ ಕೋ-ಆಪರೀಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಪುಟ್ಟಮಾದೇಗೌಡ, ಉಪಾಧ್ಯಕ್ಷ ಎಚ್.ಆರ್.ಮಹೇಶ್ ಗೌಡ, ನಿರ್ದೇಶಕರಾದ ಕೃಷ್ಣಮೂರ್ತಿ, ಆರ್.ರಮೇಶ್,ಜಿ.ಗೋಪಾಲಕೃಷ್ಣ, ಡಿ.ಸುರೇಶ್, ಕಾರ್ಯದರ್ಶಿ ಆರ್.ಕೃಪಾ, ಪಿಎಸ್ ಎಸ್ ಕೆ ಕೋ-ಆಪರೇಟೀವ್ ಸಂಘದ ಅಧ್ಯಕ್ಷ ಎಂ.ಪುಟ್ಟಮಾದೇಗೌಡ, ಉಪಾಧ್ಯಕ್ಷ ಡಿ.ಲೋಕೇಶ್, ಕಾರ್ಯದರ್ಶಿ ದರಸಗುಪ್ಪೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.