ಮಾಜಿ ಶಾಸಕ ಡಾ. ಆರ್‌.ಬಿ. ಶಿರಿಯಣ್ಣವರ ನಿಧನ

KannadaprabhaNewsNetwork |  
Published : Aug 28, 2026, 02:00 AM IST
ಡಾ. ಆರ್.ಬಿ. ಶಿರಿಯಣ್ಣವರ. | Kannada Prabha

ಸಾರಾಂಶ

ಮೂಲತಃ ನವಲಗುಂದ ತಾಲೂಕಿನ ಶಿರೂರು ಗ್ರಾಮದವರಾದ ಅವರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದರು.

ನವಲಗುಂದ:

ನವಲಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರ (83) ಗುರುವಾರ ಧಾರವಾಡದ ನಾಯಕನಹೂಲಿಕಟ್ಟಿ ಗ್ರಾಮದಲ್ಲಿರುವ ಅವರ ತೋಟದ ನಿವಾಸದಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು- ಬಳಗವಿದೆ.

ಮೂಲತಃ ನವಲಗುಂದ ತಾಲೂಕಿನ ಶಿರೂರು ಗ್ರಾಮದವರಾದ ಅವರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದರು. 1994 ಮತ್ತು 1999ರಲ್ಲಿ ಪಕ್ಷೇತರರಾಗಿ ನವಲಗುಂದ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ‎ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಡಾ. ಆರ್.ಬಿ. ಶಿರಿಯಣ್ಣನವರ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಬೆಳಗ್ಗೆ ನವಲಗುಂದದ ವೀರಶೈವ ಲಿಂಗಾಯತ ಭವನದಲ್ಲಿ ಬೆಳಗ್ಗೆ 7ರಿಂದ 9 ಗಂಟೆ ವರೆಗೆ ಸಾರ್ವಜನಿಕ ದರ್ಶನದ ವ್ಯವಸ್ಥೆ ಮಾಡಲಾಗಿದೆ. ನಂತರ ಸ್ವಗ್ರಾಮ ಶಿರೂರು ಗ್ರಾಮಕ್ಕೆ ತೆರಳಲಿದ್ದು ಬಳಿಕ ಧಾರವಾಡದ ನಾಯಕನಹೂಲಿಕಟ್ಟಿಗೆ ಪ್ರಾರ್ಥಿವ ಶರೀರ ತಂದು ಮಧ್ಯಾಹ್ನ 2 ಗಂಟೆಗೆ ತೋಟದ ಮನೆಯಲ್ಲಿ ಅಂತಿಮ ಕಾರ್ಯಗಳು ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಲ್ಲಿ ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡಿವೆ; ಹುಷಾರು!
ಬೆಳಗಾವಿಯಲ್ಲೂ ಶಾಸಕರ ಭವನ: ಸ್ಪೀಕರ್‌ ಜಿ.ಎಸ್. ಪಾಟೀಲ