ಮಾಜಿ ಶಾಸಕ ಡಿಎಸ್ ಸುರೇಶ್ ಕ್ಷಮೆ ಯಾಚಿಸಬೇಕು: ಶಿವಪ್ರಕಾಶ್ ಸ್ವಾಮೀಜಿ ಆಗ್ರಹ

KannadaprabhaNewsNetwork | Published : May 26, 2024 1:31 AM

ಸಾರಾಂಶ

ತರೀಕೆರೆ ತಾಲೂಕು ನಾಗೇನಹಳ್ಳಿ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ನಡೆದಿರುವ ಘಟನೆಯಲ್ಲಿ ಮಾಜಿ ಶಾಸಕ ಡಿ ಎಸ್ ಸುರೇಶ್ ಲಿಂಗಾಯತರ ಪರ ನಿಂತು ಬಂಜಾರ ಸಮುದಾಯದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಈ ಸರಿಯಲ್ಲ ಎಂದು ಶ್ರೀ ಕೊಟ್ಟೂರು ಬಂಜಾರ ಸಂಸ್ಥಾನದ ಶಿವಪ್ರಕಾಶ್ ಸ್ವಾಮೀಜಿ ಹೇಳಿದರು.

ದೇವಸ್ಥಾನ ದ್ವಂಸ, ದೇವರ ವಿಗ್ರಹ ವಿರೂಪ । ಬಂಜಾರರ ವಿರುದ್ಧ ಆಕ್ರೋಶ ಸರಿಯಲ್ಲ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ತಾಲೂಕು ನಾಗೇನಹಳ್ಳಿ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ನಡೆದಿರುವ ಘಟನೆಯಲ್ಲಿ ಮಾಜಿ ಶಾಸಕ ಡಿ ಎಸ್ ಸುರೇಶ್ ಲಿಂಗಾಯತರ ಪರ ನಿಂತು ಬಂಜಾರ ಸಮುದಾಯದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಈ ಸರಿಯಲ್ಲ ಎಂದು ಶ್ರೀ ಕೊಟ್ಟೂರು ಬಂಜಾರ ಸಂಸ್ಥಾನದ ಶಿವಪ್ರಕಾಶ್ ಸ್ವಾಮೀಜಿ ಹೇಳಿದರು. ನಾಗೇನಹಳ್ಳಿ ತುರಮಂದಿಯ ಸುಮಾರು 2 ಎಕರೆ ಜಾಗ ಇದ್ದು, ಇದರಲ್ಲಿ ಒಂದೂವರೆ ಎಕರೆ ಜಾಗವನ್ನು ಮತ್ತೊಂದು ಸಮುದಾಯ ಒತ್ತುವರಿ ಮಾಡಿಕೊಂಡಿದೆ. ಉಳಿದ ಜಾಗದಲ್ಲಿ ಅದರಲ್ಲೂ ಕೇವಲ ಹತ್ತು ಗುಂಟೆ ಜಾಗದಲ್ಲಿ ಬಂಜಾರರು ತಮ್ಮಆರಾಧ್ಯ ದೇವಿ ಮರಿಯಮ್ಮ ದೇವಸ್ಥಾನ ನಿರ್ಮಾಣ ಮಾಡಿದ್ದು, ಅಂದಿನಿಂದಲೂ ಈ ವರೆಗೆ ದೇವಸ್ಥಾನ ದಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದೆ. ಈ ಮಧ್ಯೆ ಲಿಂಗಾಯತ ಮತ್ತು ಬಂಜಾರ ಸಮುದಾಯ ದವರು ಭಾವೈಕ್ಯತೆಯಿಂದ ತಲತಲಾಂತರದಿಂದಲೂ ಬದುಕುತ್ತಿದ್ದಾರೆ. ಕೆಲವರು ಬಂಜಾರರ ದೇವಸ್ಥಾನವನ್ನು ದ್ವಂಸ ಮಾಡಿ ದೇವರ ವಿಗ್ರಹ ವಿರೂಪಗೊಳಿಸಿ ಸಮಾಜಘಾತುಕ ಕೃತ್ಯ ಎಸಗಿದ್ದರು.

ಮಾಜಿ ಶಾಸಕ ಡಿಎಸ್ ಸುರೇಶ ಸ್ಥಳಕ್ಕೆ ಭೇಟಿ ನೀಡಿ ಎರಡು ಸಮುದಾಯದವರನ್ನು ಕರೆದು ಸಾಂತ್ವನ ಹೇಳುವ ಬದಲು ಈ ಘಟನೆಗೆ ಪ್ರಚೋದನೆ ನೀಡಿ ಅಮಾಯಕ ಬಂಜಾರರು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ. ಈ ಕುರಿತು ಮಾಜಿ ಶಾಸಕ ಡಿ.ಎಸ್.ಸುರೇಶ್ ಬಂಜಾರ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಈ ಘಟನೆ ಬಗ್ಗೆ ಉಗ್ರ ಹೋರಾಟ ನಡೆಸಲಾಗುವುದು ಸರ್ಕಾರಕ್ಕೆ ಇದರ ಸಂಪೂರ್ಣ ಮಾಹಿತಿ ತಿಳಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಬಂಜಾರ ಸಮಾಜದ ಕಾರ್ಯಾಧ್ಯಕ್ಷ ಎಚ್ ಎಲ್ ಮಂಜುನಾಥ್, ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಮಹಿಳಾ ಅಧ್ಯಕ್ಷೆ ಶೈಲಾಬಾಯಿ, ಹುಣಸಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ನಾಯಕ್, ತಾಲೂಕು ಬಂಜಾರ ಬಳಗದ ಅಧ್ಯಕ್ಷ ಬಿ ಕೃಷ್ಣ ನಾಯಕ್, ಮಾಜಿ ಅಧ್ಯಕ್ಷ ಸತ್ಯಪ್ಪ, ಕರಕುಚ್ಚಿ ಗೋವಿಂದ ನಾಯಕ್ ಉಪಾಧ್ಯಕ್ಷ ಶಾಂತಿಬಾಯಿ, ಬಂಜಾರ ಮುಖಂಡ ಪ್ರದೀಪ್ ಎಚ್ ಇ, ಗ್ರಾಮ ಪಂಚಾಯಿತಿ ಸದಸ್ಯ ಮಂಜ ನಾಯಕ್, ಗ್ರಾಮಸ್ಥರಾದ ಸತೀಶ್ ನಾಯಕ್, ಎಸ್ ರುದ್ರ ನಾಯಕ್, ಹಾಗೂ ಇತರರು ಭಾಗವಹಿಸಿದ್ದರು.

25ಕೆಟಿಆರ್.ಕೆ.10ಃ ಶ್ರೀ ಕೊಟ್ಟೂರು, ಬಂಜಾರ ಸಂಸ್ಥಾನದ ಶಿವಪ್ರಕಾಶ್ ಸ್ವಾಮೀಜಿ ಅವರು ನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.

Share this article