ಮಾಜಿ ಶಾಸಕ ನಿರಂಜನ್‌ಗೆ ಸ್ವಂತ ಶಕ್ತಿ ಇಲ್ಲ: ಶಾಸಕ ಗಣೇಶ್‌ ಪ್ರಸಾದ್

KannadaprabhaNewsNetwork |  
Published : Sep 08, 2026, 01:45 AM IST
ಶಾಸಕ ಗಣೇಶ್‌ ಪ್ರಸಾದ್‌ | Kannada Prabha

ಸಾರಾಂಶ

ಕೆರೆಗಳಿಗೆ ನೀರು ಬಿಡಿಸುವ ವಿಚಾರದಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಸ್ವಂತ ಶಕ್ತಿ ಇಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೆರೆಗಳಿಗೆ ನೀರು ಬಿಡಿಸುವ ವಿಚಾರದಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಸ್ವಂತ ಶಕ್ತಿ ಇಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ನಿರಂಜನ್‌ ಕುಮಾರ್‌ ಸ್ವಂತ ಶಕ್ತಿ ಇದ್ದರೆ ಅವರೇ ಹೋರಾಟ ಮಾಡಬಹುದಿತ್ತು. ಸ್ವಂತ ಶಕ್ತಿ ಇಲ್ಲದ ಕಾರಣ ಕೆರೆ ನೀರು ಪ್ರತಿಭಟನೆಗೆ ವಿಪಕ್ಷ ನಾಯಕರಾದ ಅಶೋಕ, ಛಲವಾದಿ ನಾರಾಯಣಸ್ವಾಮಿ, ಮೈಸೂರು ಸಂಸದ ಒಡೆಯರ್, ಮಾಜಿ ಸಂಸದ ಪ್ರತಾಪ್‌ಸಿಂಹನ ಕರೆದು ಪ್ರತಿಭಟನೆ ಮಾಡಿಸುತ್ತಿರಲಿಲ್ಲ ಎಂದರು.

ಮಾಜಿ ಶಾಸಕ ನಿರಂಜನ್‌ ಕುಮಾರ್‌ ಶಕ್ತಿ ಎಲ್ಲಿದೆ ಹೇಳಿ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಅವರು, ನಿರಂಜನ್‌ ಕುಮಾರ್‌ ಶಕ್ತಿ ಇಲ್ಲ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಅದು ಬಿಜೆಪಿಯವರು ಒಪ್ಕೋಬೇಕು. ನಿರಂಜನ್‌ ಕುಮಾರ್‌ ಕೆರೆ ನೀರಿಗಾಗಿ ಪ್ರತಿಭಟನೆ ಮಾಡಲಿ ನೀರು ಬಿಡಿಸೋಣ ಎಂದರು.

ಸ್ವಾರ್ಥ, ಹಠಕ್ಕೆ ಬಲಿ:

ನಿರಂಜನ್‌ ಕುಮಾರ್‌ ಸ್ವಾರ್ಥ ಹಾಗೂ ಹಠಕ್ಕೆ 4 ನೇ ಹಂತದ ಯೋಜನೆ ಬಲಿ ಕೊಟ್ಟರು.ನೀರು ಬಾರದೇ ಇರುವುದಕ್ಕೆ ನಿರಂಜನ್‌ ಕುಮಾರ್‌ ಅವರೇ 100 ಪರ್ಸೆಂಟ್‌ ಕಾರಣರಾಗಿದ್ದಾರೆ.ಬಿಜೆಪಿಗರ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.

ಕೆರೆ ನೀರು ವಿಚಾರದಲ್ಲಿ ರೈತ ಸಂಘಕ್ಕೆ ನಿಜವಾದ ಪರಿಸ್ಥಿತಿ ಗೊತ್ತಿದೆ. ರೈತಸಂಘದರು ಬೇಕಾದ ಹಕ್ಕು ಕೇಳ್ತಾವ್ರೆ ತಪ್ಪೇನು ಇಲ್ಲ. ಆದರೆ ಬಿಜೆಪಿಗರು ಮಾತ್ರ ನೀರಿಗಾಗಿ ರಾಜಕೀಯ ಮಾಡ್ತಾವ್ರೆ ಎಂದರು.

110 ಕೆರೆಗಳಿಗೆ 475 ಕೋಟಿ ವೆಚ್ಚದ ಯೋಜನೆಯಲ್ಲಿ ಹುತ್ತೂರಿನಿಂದ ಕಲ್ಕಟ್ಟಿವರೆಗೆ ಪೈಪ್‌ಲೈನ್ ಗೆ ಅನುಮತಿ ಸಿಕ್ಕಿದೆ ಬೇಗ ಕೆಲಸ ಮುಗಿಸಬೇಕು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಬಗ್ಗೆ ಸಚಿವ ಪುಟ್ಟರಂಗಶೆಟ್ಟಿ ಅವರೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.

ಕೇಸು ಹಾಕಿಸಿದ್ರು:

ನಿರಂಜನ್‌ ಕುಮಾರ್‌ ಶಾಸಕರಾಗಿದ್ದ ಕಾಲದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೋರ್ವನ ಮೇಲೆ ಅಟ್ರಾಸಿಟಿ ಸುಳ್ಳು ಕೇಸು ಹಾಕಿಸಿದ್ದರು. ಅಂದು ನಾನು ಎಂಎಲ್‌ಎ ಅಲ್ಲ, ಎಕ್ಸ್‌ ಎಂಎಲ್‌ಸಿ ಅಲ್ಲ, ಎಂಎಲ್‌ಎ ಕ್ಯಾಂಡಿಡೇಟು ಆಗಿರಿಲ್ಲ. ಪಕ್ಷ ಕೂಡ ಅನೌನ್ಸ್‌ ಮಾಡಿರಲಿಲ್ಲ. ಅಟ್ರಾಸಿಟಿ ಕೇಸಿನ ಸಂಬಂಧ ಪ್ರತಿಭಟನೆ ಕರೆ ಕೊಟ್ಟೆ, ನನ್ನ ಪ್ರತಿಭಟನೆ ಗಂಭೀರತೆ ಅರಿತು ಕೇಸು ಹಾಕಲಿಲ್ಲ ಎಂದರು.

ಕೂರಿಸಲಿ ಬಿಡಿ:

ತಾಲೂಕು ಆಫೀಸ್ ಮುಂದೆ ಬಿಜೆಪಿಗರು ಗಣಪತಿ ಕೂರಿಸಿರುವ ವಿಚಾರ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಗಣಪತಿ ಎಲ್ಲಿ ಕೂರಿಸಿದರೂ ಒಳ್ಳೆಯದೇ, ಗಣಪತಿ ವಿಘ್ನ ನಿವಾರಕ ಅಲ್ವ ಎಂದು ಪ್ರತಿಕ್ರಿಯಿಸಿದರು.

ಆರೋಪ ಸುಳ್ಳು:

ನೀರು ಬಿಡಬೇಕಾದ ಟೈಮಲ್ಲಿ ಬಿಡಲಿಲ್ಲ, ಈಗ ನೀರು ಬರದೇ ಇರುವ ಟೈಮಲ್ಲಿ ಬಿಡ್ತೀನಿ ಅಂತ ಹೇಳ್ತಿದ್ದಾರೆ ಎಂದು ವಿಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಪ್ರತಿಭಟನೆ ಮಾಡಿದರೆ ಮಾತ್ರ ಶಾಸಕರು ಕೆಲಸ ಮಾಡ್ತಾರೆ ಎನ್ನುವ ಆರೋಪ ಸರಿಯಲ್ಲ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಪುರಸಭೆ ಮಾಜಿ ಅಧ್ಯಕ್ಷ ಕಿರಣ್‌ ಗೌಡ, ಮಾಜಿ ಉಪಾಧ್ಯಕ್ಷರಾದ ಕಾರ್ಗಳ್ಳಿ ಸುರೇಶ್‌, ಶ್ರೀನಿವಾಸ್‌, ಮಾಜಿ ಸದಸ್ಯರಾದ ಲಿಂಗರಾಜು, ಎನ್.ಕುಮಾರ್‌ ಸೇರಿ ಹಲವರು ಇದ್ದರು.

ಬಾಕ್ಸ್‌....

25 ದಿನಗಳಲ್ಲಿ ಕೆರೆಗಳಿಗೆ ನೀರು: ಗಣೇಶ್‌

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಬಳಿಕ ಮುಂದಿನ 20 ಅಥವಾ 25 ದಿನಗಳಲ್ಲಿ 4 ನೇ ಹಂತದ ಕೆರೆಗಳಿಗೆ ನೀರು ಬಿಡಿಸ್ತೀವಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮತ್ತೊಮ್ಮೆ ಭರವಸೆ ನೀಡಿದರು.

ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನೀರು ಬಿಡದೆ ಎಲ್ಲೂ ಹೋಗಲ್ಲ,ನೀರಿಗಾಗಿ ರಾಜಕೀಯ ಬೇಳೆ ಬೇಯಿಸಿ ಕೊಳ್ಳೋರೀಗೆ ಬೆಲೆ ಕೊಡಲ್ಲ. ನೀರು ಬರುತ್ತದೆ ಎಂದರು. ರೈತರ ಹೋರಾಟ, ಪ್ರತಿಭಟನೆಯ ಫಲ ಬಿಜೆಪಿಗರು ಪಡೆಯುತ್ತಿದ್ದಾರೆ. ಬಿಜೆಪಿಗರ ಫ್ಲಸ್‌ ಮಾಡ್ಕೋತಿದ್ದರಲ್ಲ ಎಂಬ ಪ್ರಶ್ನೆಗೂ ಪ್ರತಿಕ್ರಿಯಿಸಿ ಬಿಜೆಪಿಗೆ ಎಲ್ಲೂ ಫ್ಲಸ್‌ ಆಯ್ತಿಲ್ಲ, ಎಲ್ಲಾಗ್ತಿದೆ ಹೇಳಿ ಎಂದರು. 7ಸಿಎಚ್‌ಎನ್‌51

ಶಾಸಕ ಗಣೇಶ್‌ ಪ್ರಸಾದ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಂಗ್‌ಪಿನ್‌ ಕನ್ನಾಳೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದವರಾರು?: ಖಂಡ್ರೆ
ಬರ ಘೋಷಣೆ ಕೇಂದ್ರವೇ ಹೊಣೆ: ಸಚಿವ ಖಂಡ್ರೆ