ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ರಕ್ತದಾನ ಶಿಬಿರ, ಅನ್ನದಾಸೋಹ ಮೂಲಕ ಸಾಮಾಜಿಕ ಕಾರ್ಯಗಳನ್ನು ನೆರವೇರಿಸಿದರು.ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿ 1 ಮತ್ತು 2ನೇ ವೃತ್ತದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆಚ್ಚಿನ ನಾಯಕನ ಹುಟ್ಟುಹಬ್ಬದ ಅಂಗವಾಗಿ ಶುಭ ಕೋರಿ ಮಿಮ್ಸ್ ರಕ್ತನಿಧಿ ಕೇಂದ್ರದಲ್ಲಿ 30 ಮಂದಿ ರಕ್ತದಾನ ಮಾಡಿದರು.
ನಂತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ತ್ರೀ ರೋಗ ಪ್ರಸೂತಿ ವಿಭಾಗದ ರೋಗಿಗಳು, ಸಂಬಂಧಿಕರಿಗೆ ಪ್ರತಿನಿತ್ಯ ಜರುಗುವ ಅನ್ನದಾಸೋಹದಲ್ಲಿ ಪಾಲ್ಗೊಂಡು ಊಟ ನೀಡಿದರು.ನೇರ ನಡೆ, ನುಡಿಯ ಧೀಮಂತ ವ್ಯಕ್ತಿತ್ವ ಹೊಂದಿರುವ, ಜನಸ್ನೇಹಿ ನಾಯಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆದು ಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಮಂಡ್ಯ ಮಿಮ್ಸ್‌ನ ಸ್ತ್ರೀ ರೋಗ ಪ್ರಸೂತಿ ವಿಭಾಗದ ಬಳಿ ಮಮತೆಯ ಮಡಿಲು ವತಿಯಿಂದ ರೋಗಿಗಳು, ಸಂಬಂಧಿಕರಿಗೆ ಅನ್ನದಾಸೋಹ ನೆರವೇರಿಸಿದರು.
ಈ ವೇಳೆ ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ರಾಕೇಶ್ ಗೌಡ, ಕಾರಸವಾಡಿ ಗ್ರಾಪಂ ಸದಸ್ಯ ಬಸವರಾಜು, ಸೂಗನಹಳ್ಳಿ ಶಿವಲಿಂಗೇಗೌಡ, ಪುಟ್ಟಸ್ವಾಮಿ, ಪ್ರಶಾಂತ್ , ಸೂಗನಹಳ್ಳಿ, ಕಾರಸವಾಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.ನಾಳೆ ವಾಲ್ಮೀಕಿ ಜಯಂತಿ
ಮೈಸೂರುಜಿಲ್ಲಾಡಳಿತವು ಅ.17 ರಂದು ಮಧ್ಯಾಹ್ನ 12.30ಕ್ಕೆ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಏರ್ಪಡಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿ ಪ.ಜಾತಿ ಮತ್ತು ಪಂಗಡ ವಿಶೇಷ ಘಟಕವು ಅ.17 ರಂದು ಬೆಳಗ್ಗೆ 11ಕ್ಕೆ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ವಾಲ್ಮೀಕಿ ಜಯಂತಿ ಏರ್ಪಡಿಸಿದೆ. ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸುವರು. ಪ್ರೊ.ಎಸ್.ಆರ್. ಕೇಶವ ವಿಶೇಷ ಉಪನ್ಯಾಸ ನೀಡುವರು.ಕ್ಯಾನ್ಸರ್ ತಪಾಸಣಾ ಶಿಬಿರಮೈಸೂರು
ನಗರದ ವಾಣಿವಿಲಾಸ ರಸ್ತೆಯ ಪ್ರೀತಿ ಕ್ಯಾನ್ಸರ್ ಕೇಂದ್ರದಲ್ಲಿ ಅ.17 ರಂದು ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದ್ದು, ಆಸಕ್ತರು ದೂ.4259259 ಸಂಪರ್ಕಿಸಬಹುದು.ಕವನ ಸಂಕಲನ ಬಿಡುಗಡೆಮೈಸೂರುಜಿಲ್ಲಾ ಕಸಾಪವು ಅ.18 ರಂದು ಸಂಜೆ 5ಕ್ಕೆ ಜೆಎಲ್ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಆರ್. ರಂಗಸ್ವಾಮಿ ಶಾಂತ ಅವರ ಕಾವ್ಯಸುರಭಿ- ಕವನ ಸಂಕಲನ ಬಿಡುಗಡೆ ಏರ್ಪಡಿಸಿದೆ. ಡಾ.ಸಿಪಿಕೆ ಕೃತಿ ಬಿಡುಗಡೆ ಮಾಡಲಿದ್ದು, ಕೃತಿ ಕುರಿತು ಎ.ಎಸ್. ವಾಣಿ ಸುಬ್ಬಯ್ಯ ಮಾತನಾಡುವರು. ಡಿ. ಈರೇಶ ನಗರ್ಲೆ ಅವರು ಕವಿಯನ್ನು ಪರಿಚಯಿಸುವರು.