ಯಸಳೂರು ಗ್ರಾಮದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಿ.ಬಿ. ಶಿವಪ್ಪನವರ 9ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಪಕ್ಷದ ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಿ.ಬಿ ಶಿವಪ್ಪ ಪಕ್ಷದ ಇರುವನ್ನು ಸಾಬೀತುಪಡಿಸಲು ಬೆಂಗಳೂರು, ಸೋಮವಾರಪೇಟೆ ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧಿಸಿ ಪರಭಾವಗೊಂಡ ಮಹನೀಯರು. ಇವರು ಪಕ್ಷ ಸಂಘಟನೆಗಾಗಿ ತಮ್ಮ ಆಸ್ತಿಯನ್ನೆ ಮಾರಾಟ ಮಾಡಿ ರಾಜಕಾರಣ ಮಾಡಿದ ಅಪರೂಪದ ವ್ಯಕ್ತಿತ್ವ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಬಿಜೆಪಿಯ ಹಿರಿಯ ಮುಖಂಡರಾದ ಬಿ.ಬಿ. ಶಿವಪ್ಪ ಆಸ್ತಿ ಮಾರಿ ಪಕ್ಷ ಕಟ್ಟಿದವರು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಯಸಳೂರು ಗ್ರಾಮದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಿ.ಬಿ. ಶಿವಪ್ಪನವರ 9ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಪಕ್ಷದ ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಿ.ಬಿ ಶಿವಪ್ಪ ಪಕ್ಷದ ಇರುವನ್ನು ಸಾಬೀತುಪಡಿಸಲು ಬೆಂಗಳೂರು, ಸೋಮವಾರಪೇಟೆ ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧಿಸಿ ಪರಭಾವಗೊಂಡ ಮಹನೀಯರು. ಇವರು ಪಕ್ಷ ಸಂಘಟನೆಗಾಗಿ ತಮ್ಮ ಆಸ್ತಿಯನ್ನೆ ಮಾರಾಟ ಮಾಡಿ ರಾಜಕಾರಣ ಮಾಡಿದ ಅಪರೂಪದ ವ್ಯಕ್ತಿತ್ವ. ಕ್ಷೇತ್ರವನ್ನು ಎರಡು ಬಾರಿ ಶಾಸಕರಾಗಿ ಪ್ರತಿನಿಧಿಸುವ ಮೂಲಕ ವಿಧಾನಸಭೆಗೆ ಶೋಭೆ ತಂದಿದ್ದರು. ಅಜಾತಶತ್ರು ಎಂದು ಗುರುತಿಸಿಕೊಂಡ ಇವರನ್ನು ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರು ಗೌರವಿಸುತ್ತಾರೆ. ಪತಿ ಹಾಗೂ ಪತ್ನಿ ಸುಶೀಲಮ್ಮ ರಾಜ್ಯಾಧ್ಯಕ್ಷರಾಗಿ ಇಡಿ ರಾಜ್ಯಸುತ್ತುವ ಮೂಲಕ ಪಕ್ಷಕ್ಕೆ ಬಲ ತುಂಬಿದ್ದರು. ಇವರಿಗೆ ಬಿಜೆಪಿ ಪಕ್ಷದ ಹಿರಿಯ ನಾಯಕರ ನೇರ ಪರಿಚಯವಿದ್ದರೂ ರಾಜಕೀಯವಾಗಿ ಸ್ವಾರ್ಥಕ್ಕೆ ತಮ್ಮ ಸಂಪರ್ಕವನ್ನು ಎಂದಿಗೂ ಬಳಸಿಕೊಳ್ಳದೆ ಇರುವುದು ಇವರಲ್ಲಿದ ಉತ್ತಮ ಗುಣವನ್ನು ಸಮಾಜಕ್ಕೆ ಸಾರಿದೆ ಎಂದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಕಾರ್ಯದರ್ಶಿ ಮೋಹನ್, ಮುಖಂಡರಾದ ಬ್ಯಾಕರವಳ್ಳಿ ಜಯಣ್ಣ,ಜೈಮಾರುತಿದೇವರಾಜ್, ಜಯಪ್ರಕಾಶ್, ಉದಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.