ಮಾಜಿ ಶಾಸಕ ಸುನೀಲ್ ನಾಯ್ಕ ಆರೋಪ ಸುಳ್ಳು

KannadaprabhaNewsNetwork |  
Published : Oct 23, 2023, 12:15 AM IST
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹೊನ್ನಾವರಸಚಿವ ಮಂಕಾಳು ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ್‌ ನಾಯ್ಕ ಮಾಡಿರುವ ಆರೋಪ ಸುಳ್ಳು, ಆಧಾರರಹಿತ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸುನೀಲ್ ನಾಯ್ಕ ಐದು ವರ್ಷಗಳ ಕಾಲ ಸುಳ್ಳು ಹೇಳಿಕೊಂಡೆ ಆಡಳಿತ ಮಾಡಿಕೊಂಡು ಬಂದವರು, ಜನರಿಗೆ ಸರಿಯಾದ ನ್ಯಾಯ ದೊರಕಿಸಿ ಕೊಡಲು ವಿಫಲರಾಗಿ ಸೋತವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಕನ್ನಡಪ್ರಭ ವಾರ್ತೆ ಹೊನ್ನಾವರ ಸಚಿವ ಮಂಕಾಳು ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ್‌ ನಾಯ್ಕ ಮಾಡಿರುವ ಆರೋಪ ಸುಳ್ಳು, ಆಧಾರರಹಿತ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸುನೀಲ್ ನಾಯ್ಕ ಐದು ವರ್ಷಗಳ ಕಾಲ ಸುಳ್ಳು ಹೇಳಿಕೊಂಡೆ ಆಡಳಿತ ಮಾಡಿಕೊಂಡು ಬಂದವರು, ಜನರಿಗೆ ಸರಿಯಾದ ನ್ಯಾಯ ದೊರಕಿಸಿ ಕೊಡಲು ವಿಫಲರಾಗಿ ಸೋತವರು ಎಂದರು. ಮಂಕಾಳ ವೈದ್ಯ ನೂರು ಕೋಟಿ ಅನುದಾನ ತಂದು ಮೂರೂ ನಾಲ್ಕು ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿದ್ದರು. ಆದರೆ ಸುನೀಲ್ ನಾಯ್ಕ ₹3 ಕೋಟಿ ತಂದು ನೂರು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದರು‌. ವೈದ್ಯರ ಕಾಲದಲ್ಲಿ ಹಾಗಿರಲಿಲ್ಲ. ಲಕ್ಷ ಕಾಮಗಾರಿ ಆ ಭಾಗದ ತಾಪಂ, ಜಿಪಂ ಸದಸ್ಯರೆ ನೆರವೇರಿಸುತ್ತಿದ್ದರು ಎಂದರು. ವೈದ್ಯ ಅವರು 2017 ಡಿ. 5ರಂದು ಒಂದೇ ದಿನಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನಕ್ಕೆ ಭಟ್ಕಳದಲ್ಲಿ ಗುದ್ದಲಿಪೂಜೆ ಮಾಡಿದ್ದರು. ಸಚಿವರಾದ ಈ ಐದು ತಿಂಗಳುಗಳಲ್ಲಿ 114 ಮುಖ್ಯಮಂತ್ರಿ ಪರಿಹಾರ ನಿಧಿ ಅರ್ಜಿ ಸ್ವೀಕರಿಸಿ, 84 ಅರ್ಜಿಗೆ ಒಟ್ಟು ₹28,17,229 ಪರಿಹಾರದ ಮೊತ್ತ ಬಿಡುಗಡೆಗೊಳಿಸಿದ್ದಾರೆ. ಉಡುಪಿಯ ಗುಜ್ಜಾಡಿ ನಿವಾಸಿ ಶಂಕರ ಖಾರ್ವಿ ಎನ್ನುವವರಿಗೆ ತುರ್ತು ಚಿಕಿತ್ಸೆಗೆ ಮನವಿ ನೀಡಿದ 24 ಗಂಟೆ ಅವಧಿಯೊಳಗೆ ₹3 ಲಕ್ಷ ಪರಿಹಾರ ಹಣ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಗ್ರಾಪಂ ಅಧ್ಯಕ್ಷ ಐ.ವಿ. ನಾಯ್ಕ, ಶ್ರೀಧರ ನಾಯ್ಕ, ಗಣೇಶ ನಾಯ್ಕ, ಸದಸ್ಯರಾದ ಉಷಾ ನಾಯ್ಕ, ಅಣ್ಣಪ್ಪ ಗೌಡ, ಮಾಜಿ ತಾಪಂ ಸದಸ್ಯ ಲೊಕೇಶ ನಾಯ್ಕ, ಅಣ್ಣಪ್ಪ ನಾಯ್ಕ ಮತ್ತಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ