ಬಕ್ರೀದ್‌ ಶುಭಾಶಯ ಕೋರಿದ ಮಾಜಿ ಎಂಎಲ್ಸಿ ಗೋಪಾಲಸ್ವಾಮಿ

KannadaprabhaNewsNetwork |  
Published : May 29, 2026, 01:45 AM IST
28ಎಚ್ಎಸ್ಎನ್17 :  | Kannada Prabha

ಸಾರಾಂಶ

ಅಹಿಂದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಝಬಿವುಲ್ಲಾ ಬೇಗ ತಂಝೀಮ್ ಮಾತನಾಡಿ ಪ್ರಪಂಚದ ನಾನಾ ಮೂಲೆಗಳಿಂದ ಬಕ್ರೀದ್ ವೇಳೆ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ನಾವೆಲ್ಲಾ ಸಮುದಾಯ ಸೇರಿ ಸಮಾಜದ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ಬಲಿಕೊಡುವ ಪ್ರಾಣಿಯ ಮಾಂಸವನ್ನು ಬಡ ಜನರಿಗೆ ಹಂಚುವುದು ಈ ಹಬ್ಬದ ವಿಶೇಷ. ಈ ದೇಶದ ಪ್ರಗತಿ, ಸೌಹಾರ್ದತೆ ಮತ್ತು ಸಹೋದರತ್ವಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು. ಬಕ್ರೀದ್ ನಿಮಿತ್ತ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ, ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಕೋರಿದರು. ಪೊಲೀಸ್ ಇಲಾಖೆಯಿಂದ ಬಂದೂಬಸ್ತ್‌ ಏರ್ಪಡಿಸಲಾಗಿತ್ತು.

ಚನ್ನರಾಯಪಟ್ಟಣ: ಬಕ್ರೀದ್ ಹಬ್ಬದ ಅಂಗವಾಗಿ ಗುರುವಾರ ನಗರದ ಬಾಗೂರು ರಸ್ತೆಯ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಬೆಳಿಗ್ಗೆ ಸರಿಯಾಗಿ ೯.೧೫ ಕ್ಕೆ ಸಾವಿರಾರು ಮುಸ್ಲಿಂ ಬಾಂಧವರು ಒಂದೆಡೆ ಸೇರಿ ವಿಶೇಷ ನಮಾಜ್ ಮಾಡಿದರು. ನಗರದ ಇತರೆ ಭಾಗಗಳ ಮಸೀದಿ ಗಳಲ್ಲಿಯೂ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ಮಾತನಾಡಿ, ಸಮಸ್ತ ನಾಗರಿಕ ಬಂಧುಗಳಿಗೆ ಬಕ್ರೀದ್ ಹಬ್ಬದ ತುಂಬು ಹೃದಯದ ಶುಭಾಶಯಗಳು. ಬಕ್ರೀದ್ ಎಂದರೇ ತ್ಯಾಗ ಮತ್ತು ಬಲಿದಾನದ ಸಂಕೇತ ಎಂದರು. ಬಕ್ರೀದ್ ನಿಮಿತ್ತ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ, ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಕೋರಿದರು. ಪೊಲೀಸ್ ಇಲಾಖೆಯಿಂದ ಬಂದೂಬಸ್ತ್‌ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಚೌಕ್ ಮಸೀದಿ ಆಡಳಿತ ಅಧಿಕಾರಿಗಳಾದ ಟಿ ಮುನವರ್‌ ಪಾಷಾ, ಮಾಜಿ ಪುರಸಭಾ ಸದಸ್ಯರಾದ ಆನ್ಸರ್ ಪಾಷಾ, ಮಹಬೂಬ್ ಪಾಷಾ, ಕೆಡಿಪಿ ಸದಸ್ಯರಾದ ಕಬ್ಬಾಳು ಮಹೇಶ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನಿರ್ದರ್ಶಕರಾದ ಬಾಲು, ಕಾಂಗ್ರೆಸ್ ಮುಖಂಡರಾದ ಲವಣ್ಣ ಮತ್ತು ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ