ಮುಸ್ಲಿಂ ಪ್ರಯಾಣಿಕರಿಗೆ ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಹಲ್ಲೆ?

KannadaprabhaNewsNetwork |  
Published : Jun 24, 2025, 12:32 AM IST

ಸಾರಾಂಶ

ಮಾಜಿ ಸಂಸದ ಹೆಗಡೆ ಕಾರಿನ ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್ ಹಲ್ಲೆ ಮಾಡಿದವರಾಗಿದ್ದು, ಕಾರಿನಲ್ಲಿ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅವರ ಪುತ್ರ ಅಶುತೋಷ್ ಪ್ರಯಾಣಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕಾರುಗಳ ಓವರ್ ಟೇಕ್ ವಿಚಾರದಲ್ಲಿ ಗಲಾಟೆಯಾಗಿ ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ಮುಸ್ಲಿಂ ವ್ಯಕ್ತಿಗಳಿಗೆ ಮಾಜಿ ಸಂಸದ ಅನಂತ್‍ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು ಈ ಘಟನೆಯೂ ರಾಷ್ಟ್ರೀಯ ಹೆದ್ದಾರಿ 48ರ ಹಳೆನಿಜಗಲ್ ಬಳಿಯ ಶುತ್ತಾರಿಯಾ ಕಾಲೇಜು ಬಳಿ ನಡೆದಿದೆ.

ಹಾಲೇನಹಳ್ಳಿ ಗ್ರಾಮದ ಸಲ್ಮಾನ್ ಖಾನ್ (30) ಸೈಪ್ ಖಾನ್ (28) ಇಲಿಯಾಜ್ ಖಾನ್ (50) ಗುಲ್ ಷಿರಾ ಉನ್ನೀಸಾ (45) ಹಲ್ಲೆಗೊಳಗಾದವರಾಗಿದ್ದು, ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು. ಮಾಜಿ ಸಂಸದ ಹೆಗಡೆ ಕಾರಿನ ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್ ಹಲ್ಲೆ ಮಾಡಿದವರಾಗಿದ್ದು, ಕಾರಿನಲ್ಲಿ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅವರ ಪುತ್ರ ಅಶುತೋಷ್ ಪ್ರಯಾಣಿಸುತ್ತಿದ್ದರು. ಘಟನೆಯ ದೃಶ್ಯ ವಿಡಿಯೋ ವೈರಲ್ ಆಗಿದೆ.ಘಟನಾ ಹಿನ್ನೆಲೆ:

ಸೋಮವಾರ ಸಂಜೆ 4.30 ಗಂಟೆಯ ಸಮಯದಲ್ಲಿ ಸೋಂಪುರ ಹೋಬಳಿಯ ಹಳೇನಿಜಗಲ್ ಬಳಿ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಆಗಮಿಸುತ್ತಿದ್ದ ಅನಂತ್‍ಕುಮಾರ್ ಹೆಗಡೆ ಕಾರಿಗೆ ಮದುವೆ ಮುಗಿಸಿಕೊಂಡು ಬರುತ್ತಿದ್ದ ಮುಸ್ಲಿಂ ವ್ಯಕ್ತಿಗಳಿದ್ದ ಕಾರು ಓವರ್ ಟೇಕ್ ಮಾಡಿದ್ದಾರೆ ಎಂದು ಕಾರಿನಲ್ಲಿದ್ದವರಿಗೆ ದಾಬಸ್‍ಪೇಟೆ ಬಳಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅನಂತ್‌ ಹಾಗೂ ಅವರ ಗನ್ ಮ್ಯಾನ್ ಶ್ರೀಧರ್, ಚಾಲಕ ಮಹೇಶ್ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಘಟನೆಯಲ್ಲಿ ಸಂತ್ರಸ್ತರಿಗೆ ಹಲ್ಲು ಮುರಿತವಾಗಿ ರಕ್ತಸ್ರಾವವಾಗಿದ್ದು ಗಾಯಗಳಾಗಿವೆ. ಅವರನ್ನು ದಾಬಸ್‍ಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಕಿತ್ಸೆಗೆ ತುಮಕೂರಿಗೆ ದಾಖಲಿಸಲಾಗಿದೆ.ಗನ್ ತೋರಿಸಿದ ಶೂಟ್ ಮಾಡುತ್ತೇನೆಂದು ಬೆದರಿಕೆ:

ಗನ್ ಮ್ಯಾನ್ ಕಾರಿನಿಂದ ಇಳಿದು ಮುಸ್ಲಿಂ ವ್ಯಕ್ತಿಗಳಿಗೆ ಗನ್ ತೋರಿಸಿ ಜಗಳ ಮಾಡಿದರೆ ಶೂಟ್ ಮಾಡುತ್ತೇನೆಂದು ಬೆದರಿಕೆ ಹಾಕಿದರು ಎಂದು ಹಲ್ಲೆಗೊಳಗಾದ ಸೈಪ್ ಖಾನ್ ಆರೋಪಿಸಿದ್ದಾರೆ.

ಡಿವೈಎಸ್ ಪಿಎ ಕಚೇರಿಗೆ ಹೆಗಡೆ:

ಘಟನೆ ವಿಷಯ ತಿಳಿದು ದಾಬಸ್‍ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ಸಮಾಧಾನ ಮಾಡಿ ಸಂಸದ ಅನಂತ್‍ಕುಮಾರ್ ಹಾಗೂ ಆವರ ಬೆಂಬಲಿಗರನ್ನು ನೆಲಮಂಗಲ ನಗರ ಸಮೀಪದ ಡಿವೈಎಸ್‍ಪಿ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು.ಠಾಣೆ ಬಳಿ ಬಂದ ಜನರು:

ಮುಸ್ಲಿಂ ವ್ಯಕ್ತಿಗಳಿಗೆ ಹಲ್ಲೆ ಮಾಡಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ದಾಬಸ್‍ಪೇಟೆ ಠಾಣೆ ಬಳಿ ನೂರಾರು ಮುಸ್ಲಿಂ ವ್ಯಕ್ತಿಗಳು ಆಗಮಿಸಿ ಜಮಾವಣೆಗೊಂಡು ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಅನಂತ್ ಕುಮಾರ್ ಹೆಗ್ಗಡೆ ಪರವಾಗಿ ಬಿಜೆಪಿ ಮುಖಂಡರು ಸಹ ಠಾಣೆ ಬಳಿ ಆಗಮಿಸಿದ್ದು ಕಂಡುಬಂತು.

ಅನಂತ್ ಕುಮಾರ್ ಬಂದಿಸುವಂತೆ ಪ್ರತಿಭಟನೆ : ಹಲ್ಲೆ ಮಾಡಿದ ಮಾಜಿ ಸಂಸದ ಅನಂತ್ ಕುಮಾರ್ ಅವರನ್ನು ಬಂಧಿಸಿ ಸರಿಯಾಗಿ ಕಾನೂನು ರೀತಿಯಲ್ಲಿ ತನಿಖೆ ಮಾಡಬೇಕು. ಹಲ್ಲೆಗೊಳಗಾದ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದರು.ಬಿಗಿ ಬಂದೋಬಸ್ತ್ : ಘಟನೆಯ ವಿಕೋಪಕ್ಕೆ ತಿರುಗುತ್ತಿದ್ದಂತೆ ದಾಬಸ್‍ಪೇಟೆ ಪೊಲೀಸ್ ಠಾಣೆ ಬಳಿ ಹೆಚ್ಚಿನ ಬಂದೋಬಸ್ತ್ ಮಾಡಿ ಮೂರು ಜನ ಇನ್ಸ್ ಪೆಕ್ಟರ್, 20ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಒಂದು ಕೆಎಸ್ ಆರ್ ಪಿ ತುಕಡಿಯನ್ನು ಬಂದೋಬಸ್ತ್ ಮಾಡಿದ್ದರು.ದಾಬಸ್‍ಪೇಟೆ ಪೊಲೀಸ್ ಠಾಣೆಗೆ ಎಸ್ ಪಿ ಸಿ.ಕೆ.ಬಾಬಾ, ಅಡಿಷನಲ್ ಎಸ್ ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಜಗದೀಶ್, ಇನ್ಸ್ ಪೆಕ್ಟರ್ ರಾಜು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ