ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷರ ವಾಗ್ವಾದ

KannadaprabhaNewsNetwork |  
Published : Feb 22, 2024, 01:48 AM IST
21ಕೆಆರ್ ಎಂಎನ್ 7.ಜೆಪಿಜಿಹಾರೋಹಳ್ಳಿ ತಾಲೂಕಿನ ಚೀಲೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ  ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಹಾರೋಹಳ್ಳಿ: ಕಾರ್ಖಾನೆಗಳಲ್ಲಿ ಹಣ ವಸೂಲಿ ಮಾಡಿದ್ದೀರಿ, ಅದರ ಲೆಕ್ಕ ಕೊಡಿ ಎಂದು ಮಾಜಿ ಅಧ್ಯಕ್ಷರ ನಡುವೆ ವಾಗ್ವಾದ ನಡೆದ ಪ್ರಸಂಗ ಚೀಲೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.

ಹಾರೋಹಳ್ಳಿ: ಕಾರ್ಖಾನೆಗಳಲ್ಲಿ ಹಣ ವಸೂಲಿ ಮಾಡಿದ್ದೀರಿ, ಅದರ ಲೆಕ್ಕ ಕೊಡಿ ಎಂದು ಮಾಜಿ ಅಧ್ಯಕ್ಷರ ನಡುವೆ ವಾಗ್ವಾದ ನಡೆದ ಪ್ರಸಂಗ ಚೀಲೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.

ತಾಲೂಕಿನ ಚೀಲೂರು ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ರವಿಕುಮಾರ್ ಹಾಗೂ ಶೋಭ ರವಿಗೌಡ ನಡುವೆ ಕಾರ್ಖಾನೆ ತೆರಿಗೆ ವಿಚಾರವಾಗಿ ಜಟಾಪಟಿ ನಡೆಯಿತು.

ನಿಮ್ಮ ಅವಧಿಯಲ್ಲಿ ಯಾರಿಗೂ ಹೇಳದೇ ಇಷ್ಟು ಹಣ ವಸೂಲಿ ಮಾಡಿದ್ದೀರಿ. ನೀವು ಸತ್ಯ ಹರಿಶ್ಚಂದ್ರರೇ ನಿಮ್ಮ ಅವಧಿಯಲ್ಲೂ ಸಹ ಇ-ಖಾತೆ ಸೇರಿದಂತೆ ಕಾರ್ಖಾನೆಯಲ್ಲಿಯೂ ಹಣ ವಸೂಲಿ ಮಾಡಿದ್ದೀರಿ ಎಂದು ಜಟಾಪಟಿ ನಡೆಸಿದ್ದಾರೆ.

ಪಿಡಿಒ ಅವರು ಏಕಮುಖವಾಗಿ ವರ್ತಿಸುತ್ತಾ ಕಾಂಗ್ರೆಸ್ ಬೆಂಬಲಿತ 10 ಅಭ್ಯರ್ಥಿಗಳ ಗಮನಕ್ಕೆತರದೆ ವರ್ಗ 1ರ ಕ್ರಿಯಾ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅರ್ಧ ಗಂಟೆ ಧರಣಿ ನಡೆಸಿದರು. ಬಳಿಕ ಪಿಡಿಒ ಅವರೇ ಕಾಂಗ್ರೆಸ್ ಬೆಂಬಲಿತ ಸದಸ್ಯರ ಮನವೊಲಿಸಿದರು.

ಮಾಜಿ ಅಧ್ಯಕ್ಷೆ ಶೋಭಾ ರವಿಗೌಡ ಮಾತನಾಡಿ, ಸರ್ವ ಸದಸ್ಯರ ಗಮನಕ್ಕೆ ತರದೆ ಪಿಡಿಒ ಅವರು, ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ನಾನು ಗ್ರಾಪಂ ಅಧ್ಯಕ್ಷರಾಗಿದ್ದಾಗ ಸಭೆಯಲ್ಲಿ ಚರ್ಚೆ ಮಾಡಿದರೂ ಅದನ್ನು ಅನುಮೋದನೆ ಕೊಡಬೇಡಿ ಎಂದು ತಾಪಂ ಅಧಿಕಾರಿಗಳಿಗೆ ದೂರು ಹೇಳಿದ್ದೀರಿ. ಈಗ ಸದಸ್ಯರ ಗಮನಕ್ಕೆ ತರದೆ ಕೆಲಸ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಎಲ್ಲದಕ್ಕೂ ಪ್ರಶ್ನೆ ಮಾಡುತ್ತಿದ್ದ ಸದಸ್ಯರು ಈಗೇಕೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸದಸ್ಯ ರವಿಕುಮಾರ್ ಮಾತನಾಡಿ, ಈಗಿರುವ ಅಧ್ಯಕ್ಷರು ಕಳ್ಳತನಕ್ಕೆ ಕೈ ಹಾಕುವವರಲ್ಲ ಪೈಪ್ ಲೈನ್ ಕಾಮಗಾರಿ ಆಕ್ಷನ್ ಪ್ಲಾನ್ ನಲ್ಲಿ ಸೇರ್ಪಡೆ ಮಾಡಿರುವುದು ನನಗೂ ಮಾಹಿತಿ ಇಲ್ಲ. ಕ್ರಿಯಾಯೋಜನೆಯಲ್ಲಿ ನಮಗೆ ಹೆಚ್ಚಿನ ಆದ್ಯತೆ ಕೊಟ್ಟಿರಬಹುದು ಮುಂದೆ ನಿಮಗೂ ಹೆಚ್ಚಿನ ಆದ್ಯತೆ ಕೊಡುತ್ತಾರೆ ಸ್ವಲ್ಪ ತಾಳ್ಮೆಯಿಂದ ಇರಿ ಎಂದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷ ವಿನೋದ ತಿಮ್ಮಪ್ಪ, ಸದಸ್ಯರಾದ ರವಿಕುಮಾರ್, ಹೊನ್ನಗಿರಿ ಗೌಡ, ಸಂತೋಷ್, ಪ್ರೇಮ, ಕೃಷ್ಣಮೂರ್ತಿ, ಲಕ್ಷ್ಮಣ್, ಗೀತಾ, ಅನುಸೂಯಮ್ಮ, ಜಯಮ್ಮ, ರತ್ನಮ್ಮ, ಮಮ್ತಾಜ್ ಬೇಗಂ, ವಸಂತ, ಮೇಘನ, ಕೃಷ್ಣಪ್ಪ, ಮುತ್ತುರಾಜ್, ಚಂದನ್, ಪಿಡಿಒ ಮಹದೇವ್ ಉಪಸ್ಥಿತರಿದ್ದರು.

21ಕೆಆರ್ ಎಂಎನ್ 7.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಚೀಲೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ