-ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಅಲ್ಲಂಪ್ರಭು ಅಧಿಕಾರ ಸ್ವೀಕಾರ । ಕೈಗಾರಿಕೆ ಅಭಿವೃದ್ಧಿಗೆ ಕಾಲ ಸನ್ನಿಹಿತ:ನಿರೀಕ್ಷೆ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್ಎಸ್ಐಡಿಸಿ) ಅಧ್ಯಕ್ಷರಾಗಿ ಶಾಸಕ ಅಲ್ಲಂಪ್ರಭು ಪಾಟೀಲ್ ನೆಲೋಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅವರ ತವರೂರು ಕಲಬುರಗಿ ಸಾರ್ವಜನಿಕರು ಬಿಸಿಲೂರಿನ ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ದಶಕದಿಂದ ಹಿಡಿದಿರುವ ಗ್ರಹಣ ಮೋಕ್ಷವಾಗುವ ಕಾಲ ಸನ್ನಿಹಿತವಾಯಿತೆಂಬ ನಿರೀಕ್ಷೆಯಲ್ಲಿದ್ದಾರೆ.
ಮಾಜಿ ಸಿಎಂ ಧರಂಸಿಂಗ್ ಗರಡಿಯಲ್ಲಿ ಪಳಗಿರುವ, ಮಂಡಲ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಕಳೆದ 4 ದಶಕಗಳಲ್ಲಿ ತಾವು ಅಧಿಕಾರದಲ್ಲಿದ್ದಲ್ಲೆಲ್ಲಾ ಜನರ ದನಿಯಾಗಿ ಕಾಳಜಿ ತೋರಿರು ಅಲ್ಲಂಪ್ರಭು ಪಾಟೀಲರ ಮುಂದೆ ಇದೀಗ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾದ್ಯಂತ ಪೂರಕ ವಾತಾವರಣ ನಿರ್ಮಿಸಿ ಕಲಬುರಗಿಯನ್ನು ಕೈಗಾರಿಕೆ ಸಮೃದ್ಧ ಜಿಲ್ಲೆಯನ್ನಾಗಿಸುವ ಸವಾಲು ಇದೆ.
ಈಚೆಗೆ ಕಲಬುರಗಿ ಜೋಳದ ರೊಟ್ಟಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರೋದರಿಂದ, ತೊಗರಿ ಬೇಳೆ ಬಳಸಿ ಮೌಲ್ಯವರ್ಧನೆ ಮಾಡಿ ಆಹಾರೋತ್ಪನ್ನ ಮಾಡುತ್ತಿದ್ದು, ಕಲಬುರಗಿಯಲ್ಲಿ ಹಿಂದೆಂದಿಗಿಂತಲೂ ಸಣ್ಣ ಕೈಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ.
ಊದುಬತ್ತಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತಿಂಡಿ ತಿನಿಸು, ಕೆಟರಿಂಗ್ನಂತಹ ಮಹಿಳೆಯರ ಉದ್ಯಮಶೀಲತೆ ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋದರಿಂದ ಇವರೆಲ್ಲರಿಗೂ ಶೆಡ್ ಮಾಡಿಕೊಡುವ, ಮಾರುಕಟ್ಟೆ ಕಲ್ಪಿಸುವಲ್ಲಿ ಕೆಎಸ್ಎಸ್ಐಡಿಸಿ ತನ್ನ ಹೊಣೆಗಾರಿಕೆ ನಿಭಾಯಿಸಲು ಅವಕಾಶವಿದೆ.
ಪ್ರತಿ ತಾಲೂಕಿನಲ್ಲಿ 10 ಎಕರೆ ಇಂಡಸ್ಟ್ರಿಯಲ್ ಇಸ್ಟೇಟ್ ನಿರ್ಮಾಣವಾಲಿ
....ಬಾಕ್ಸ್....
ಜೇವರ್ಗಿ ಕ್ರಾಸ್ ರಾಷ್ಟ್ರಪತಿ ಚೌಕ್ನಲ್ಲಿ ಇರೋ ಕೆಎಸ್ಎಸ್ಐಡಿಸಿ ಕಚೇರಿಗೆ ಫಲಕ ಕೂಡಾ ಇಲ್ಲ. ಇಲ್ಲಿ ಬಹುದೊಡ್ಡ ಮಳಿಗೆ ಸಂಕೀರ್ಣವಿದ್ದು ಅದರಲ್ಲಿ ಶೇ. 50ರಷ್ಟು ಮಳಿಗೆ ಪಾಳು ಬಿದ್ದಿವೆ. ತಮ್ಮ ಮನೆ ದಾರಿಯಲ್ಲೇ ಪಾಳು ಬಿದ್ದಂತೆ ಇರುವ ಕೆಎಸ್ಎಸ್ಐಡಿಸಿ ಕಚೇರಿ, ಕಾಂಪ್ಲೆಕ್ಸ್ಗೆ ಅಧ್ಯಕ್ಷ ಅಲ್ಲಂಪ್ರಭು ಪಾಟೀಲ್ ಕಾಯಕಲ್ಪ ನೀಡಬೇಕಿದೆ. ಹಿಂದೊಮ್ಮೆ ಚಿಂಚೋಳಿ, ಆಳಂದ, ಚಿತ್ತಾಪುರದಲ್ಲಿಯೂ ಸಣ್ಣ ಕೈಗಾರಿಕೆ ವಸಾಹತು ನಿರ್ಮಾಣದ ಪ್ರಯತ್ನಗಳಾದವಾದರೂ ಅವು ನಿರೀಕ್ಷೆಯಂತೆ ಫಲ ಕೊಡಲಿಲ್ಲ. ಹೀಗಾಗಿ ಕಲಬುರಗಿಯ ಯಾವ ತಾಲೂಕಲ್ಲಿಯೂ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ಇಂದಿಗೂ ಇಲ್ಲ!
ಸರ್ಕಾರದ ಸಣ್ಣ ಪ್ರಮಾಣದ ಕೈಗಾರಿಕೆಗಳು, ಸಾರ್ವಜನಿಕ ಉದ್ಯಮಗಳ ಅಡಿಲ್ಲಿರುವ ಕೆಎಸ್ಎಸ್ಐಡಿಸಿಯ ಕಲಬುರಗಿ ಚಟುವಟಿಕೆಗಳಿಗೆ ಚುರುಕು ಮುಟ್ಟಿಸುವ ಕೆಲಸವಾಗಬೇಕಿದೆ. ಸಚಿವ ವಿಜಯಾನಂದ ಕಾಶಪ್ಪನವರ್ ಅವರೊಂದಿಗೆ ಸೇರಿಕೊಂಡು ಇಲ್ಲಿನ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಸೆಂಟರ್, ಕೆಎಸ್ಎಸ್ಐಡಿಸಿ ಎರಡೂ ಕ್ರಿಯಾಶೀಲವಾಗುವಂತೆ ಮಾಡುವ ಮೂಲಕ ಕೈಗಾರಿಕೆ ಪ್ರಗತಿಗೆ ಅಲ್ಲಂಪ್ರಭು ಪಾಟೀಲ್ ಶ್ರಮಿಸಬೇಕಿದೆ.ಕೆಎಸ್ಎಸ್ಐಡಿಸಿ ರಾಜ್ಯ ವ್ಯಾಪ್ತಿಯ ನಿಗಮ, ಆದರೂ ಅಧ್ಯಕ್ಷ ಅಲ್ಲಂಪ್ರಭು ಪಾಟೀಲರು ಕಲಬುರಗಿಯವರು. ಕೈಗಾರಿಕೆಗಳಿಲ್ಲದೆ ಹಿಂದುಳಿದಿರುವ ತಮ್ಮ ತವರು ಕಲಬುರಗಿಯಲ್ಲಿ ಆದ್ಯತೆಯ ಮೇರೆಗೆ ಹೊಸ ಯೋಜನೆ ಕೈಗೆತ್ತಿಕೊಂಡು ಸಣ್ಣ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸುವರೆ? ಎಂಬುದು ಎಂದಿನಂತೆ ಕಾದು ನೋಡಬೇಕಿದೆ.
..ಕೋಟ್.....ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ರಂಗ ನಿರೀಕ್ಷಿತ ಬೆಳವಣಿಗೆ ಕಾಣದೆ ಹಾಳು ಬಿದ್ದಿದೆ. ಕಚ್ಚಾ ಸಾಮಗ್ರಿ ಪೂರೈಕೆ, ಮೂಲ ಸೌಕರ್ಯ, ಮಾರುಕಟ್ಟೆ ಸೌಲಭ್ಯ, ತಾಂತ್ರಿಕತೆ ಯಾವುದೂ ಅನುೂಕಲಗಳಿಲ್ಲದೆ ನರಳುವಂತಾಗಿದೆ. ಕೆಸ್ಐಡಿಸಿ ಅಧ್ಯಕ್ಷರಾದ ಅಲ್ಲಂಪ್ರಭು ಪಾಟೀಲರು ತಮ್ಮ ಕ್ರಿಯಾಶೀಲತೆಯೊಂದಿಗೆ ಜಿಲ್ಲೆಯಲ್ಲಿ ಕೈಗಾರಿಕೆ ರಂಗ ಮರಳಿ ಅರಳುವಂತೆ ಮಾಡಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಲಿ.
-ಭೀಮಾಶಂಕರ ಪಾಟೀಲ್, ಅಧ್ಯಕ್ಷ, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘ, ಕಲಬುರಗಿ --ಫೋಟೋ- ಕೆಎಸ್ಐಡಿಸಿ 1
ಕೆಎಸ್ಎಸ್ಐಡಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಲ್ಲಂಪ್ರಭು ಪಾಟೀಲರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರೊಂದಿಗೆ ಮಾತುಕತೆ ನಡೆಸಿದರು.------------
(ಇದೂ ಮಹತ್ವದ ಫೋಟೋ)ಫೋಟೋ- ಕೆಎಸ್ಎಸ್ಐಡಿಸಿ 2
ಕಲಬುರಗಿಯ ಜೇವರ್ಗಿ ಕ್ರಾಸ್ ರಾಷ್ಟ್ರಪತಿ ಚೌಕ್ ಮಳಿಗೆ ಸಂಕೀರ್ಣದ ಮಹಡಿಯಲ್ಲಿರೋ ಕೆಎಸ್ಐಡಿಸಿ ಕಚೇರಿ ನೋಟ. ಅನೇಕರಿಗೆ ಈ ಕಚೇರಿ ಇನ್ನೂ ಅಪರಿಚಿತ.-------------
(ಇದೂ ಮಹತ್ವದ್ದು ಫೋಟೋ)ಫೋಟೋ- ಕೆಎಸ್ಎಸ್ಐಡಿಸಿ 3 ಮತ್ತು 4
ಕಲಬುರಗಿಯ ರಾಷ್ಟ್ರಪತಿ ವೃತ್ತದಲ್ಲಿರುವ ಕೆಎಸ್ಎಸ್ಐಡಿಸಿ ಮಳಿಗೆ ನೋಟ. ನಿರ್ವಹಣೆ ಕಾಮದ ಕಾಂಪ್ಲೆಕ್ಸ್ನಲ್ಲಿ ಅನೇಕ ಮಳಿಗೆಗಳು ಹಾಗೇ ಬಿದ್ದಿವೆ.------------
(ಇದು ಮಹತ್ವದ ಫೋಟೋ)ಫೋಟೋ- ಅಲ್ಲಂ 1 ಮತ್ತು ಅಲ್ಲಂ 2
ಕೆಎಸ್ಎಸ್ಐಡಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಲ್ಲಂಪ್ರಭು ಪಾಟೀಲರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರೊಂದಿಗೆ ಮಾತುಕತೆ ನಡೆಸಿದರು.