ಹೊಸಕೋಟೆ: ತನ್ನ ಅಧಿಕಾರಾವಧಿಯಲ್ಲಿ ನಗರದ ದಂಡುಪಾಳ್ಯ ದಿಣ್ಣೆಯಲ್ಲಿ ಕುರುಬರ ಸಂಘಕ್ಕೆನೀಡಿದ್ದ ಸ್ಥಳದಲ್ಲಿ ಶಾಲೆ ನಿರ್ಮಿಸುತ್ತಿರುವುದು ಉತ್ತಮ ಕೆಲಸ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಆಗಿಲ್ಲ. ವಾಣಿಜ್ಯವಾಗಿ ಯೋಚಿಸುವ ಕಾಲದಲ್ಲಿ ವಿದ್ಯಾ ಮಂದಿರ ಕಟ್ಟುವ ಯೋಚನೆ ಪ್ರಶಂಸನೀಯ. ತಾಲೂಕಿನಲ್ಲಿರುವ ಪ್ರತಿಯೊಬ್ಬ ಕುರುಬ ಸಮುದಾಯದ ಮನೆಯಿಂದಲೂ ವಿದ್ಯಾಮಂದಿರಕ್ಕೆ ದೇಣಿಗೆ ಬರಬೇಕು, ಆಗ ಮಾತ್ರ ಜವಾಬ್ದಾರಿ ಬರಲು ಸಾಧ್ಯ. ಪ್ರಮುಖವಾಗಿ ಸಮುದಾಯ ಅಭಿವೃದ್ಧಿ ಆಗಬೇಕಾದರೆ ರಾಜಕೀಯ ಬಲ ಇರಬೇಕು. ಅದರಿಂದ ಮುಂದಿನ ದಿನಗಳಲ್ಲಿ ಎಂಟಿಬಿ ನಾಗರಾಜ್ ಅವರಿಗೆ ರಾಜಕೀಯ ಉತ್ತಮ ಸ್ಥಾನಮಾನ ದಕ್ಕಬೇಕು ಎಂದರು.
ಕುರುಬರ ಸಂಘದ ಅಧ್ಯಕ್ಷ ರಘುವೀರ್ ಮಾತನಾಡಿ, ೮೦ರ ದಶಕದಲ್ಲಿ ಪ್ರಾರಂಭಗೊಂಡ ಸಂಘ ಸಾಕಷ್ಟು ಕೆಲಸ ಮಾಡಿದ್ದು ಕನಕ ಭವನ ಸಂಘದ ಪ್ರಥಮ ಮೈಲಿಗಲ್ಲು. ಈಗ ಶಾಲೆ ಸ್ಥಾಪನೆ ಎರಡನೇ ಮೈಲಿಗಲ್ಲಿಗೆ ಸಾಕ್ಷಿ. ೫ ಕೋಟಿ ವೆಚ್ಚದಲ್ಲಿ ವಿದ್ಯಾಮಂದಿರ ನಿರ್ಮಾಣ ಮಾಡುತ್ತಿದ್ದೇವೆ ಎಂದರು.ಕೆಆರ್‌ಪುರಂ ಶಾಸಕ ಭೈರತಿ ಬಸವರಾಜ್, ಹನೂರು ಶಾಸಕ ಎಂ.ಆರ್.ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಅನಂತ ರಾಮಯ್ಯ, ಮಾಜಿ ಅಧ್ಯಕ್ಷ ಶ್ರೀನಿವಾಸಯ್ಯ ಇತರರಿದ್ದರು.
ಸಮುದಾಯದ ಅಭಿಮಾನ ಮುಖ್ಯ
ಬಾಕ್ಸ್ ...............
ದೇವರು ನನಗೆ ಆಸ್ತಿ, ಅಂತಸ್ತು, ಆರೋಗ್ಯ, ರಾಜಕೀಯ ಸ್ಥಾನಮಾನ ಎಲ್ಲವನ್ನೂ ಕೊಟ್ಟಿದ್ದಾನೆ. ನಾನು ನನ್ನ ಅಧಿಕಾರಾವಧಿಯಲ್ಲಿ ಪಕ್ಷಾತೀತ, ಧರ್ಮಾತೀತ ಅಭಿವೃದ್ದಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿರುವ ತೃಪ್ತಿ ಇದೆ. ನನ್ನ ಕೆಲಸದ ಲೆಕ್ಕ ದೇವರ ಬಳಿಯೂ ಇದೆ. ಹೊಸಕೋಟೆಯಲ್ಲಿ ದಶಕಗಳ ಕಾಲ ಆಡಳಿತ ಮಾಡಿದವರು ಮಾಡದ ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಆದರೆ ಇಲ್ಲಿ ಸಮುದಾಯ ಒಗ್ಗೂಡಿ ಮುಂದಿನ ಚುನಾವಣೆಗೆ ಮತ ಕೇಳಲು ಬಂದಿಲ್ಲ. ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಪರೋಕ್ಷವಾಗಿ ತಮ್ಮ ಸೋಲಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹೊಸಕೋಟೆ ನಗರದ ದಂಡುಪಾಳ್ಯ ದಿನ್ನೆಯಲ್ಲಿ ತಾಲೂಕು ಕುರುಬರ ಸಂಘ ಹಮ್ಮಿಕೊಂಡಿರುವ ಜ್ಞಾನ ಕನಕ ಶ್ರೀ ವಿದ್ಯಾಮಂದಿರದ ಶಂಕುಸ್ಥಾಪನೆಯನ್ನು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ನೆರವೇರಿಸಿದರು.
ಹೊಸಕೋಟೆ ತಾಲೂಕು ಕುರುಬರ ಸಂಘ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ಕನಕದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.