ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 10 ಹಾಸಿಗೆ ತುರ್ತು ಚಿಕಿತ್ಸಾ ಘಟಕದ ಕಟ್ಟಡಕ್ಕೆ ಅಡಿಗಲ್ಲು

KannadaprabhaNewsNetwork |  
Published : Jun 03, 2025, 01:27 AM IST
ಪೊಟೋ ಪೈಲ್ : 22ಬಿಕೆಲ್2 | Kannada Prabha

ಸಾರಾಂಶ

ತಾನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಸಮಾಜಕ್ಕೆ ಸಹಾಯ ಮಾಡುವ ಮೂಲಕ ದೇವರನ್ನು ಕಾಣುತ್ತೇನೆ.

ಭಟ್ಕಳ: ಇಲ್ಲಿನ ಆಸ್ಪತ್ರೆಯಲ್ಲಿ ಜನತೆಗೆ ಅನುಕೂಲವಾಗುವಂತೆ 10 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕವನ್ನು ನಿರ್ಮಾಣ ಮಾಡಲು ಅನಿವಾಸಿ ಭಾರತೀಯ ಕಟ್ಟಡದ ದಾನಿಗಳಾದ ವಾಮನ ರಾಮನಾಥ ಶ್ಯಾನಭಾಗ ಭೂಮಿ ಪೂಜೆ ಮಾಡಿ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ತಾನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಸಮಾಜಕ್ಕೆ ಸಹಾಯ ಮಾಡುವ ಮೂಲಕ ದೇವರನ್ನು ಕಾಣುತ್ತೇನೆ. ತನ್ನ ಪತ್ನಿ ಗೀತಾ ಶಾನಭಾಗ್ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ₹೫೦ ಲಕ್ಷ ವೆಚ್ಚದಲ್ಲಿ ಹತ್ತು ತುರ್ತು ಚಿಕಿತ್ಸಾ ಕೋಣೆಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದ್ದು, ಭರವಸೆಯಂತೆ ಕಟ್ಟಡ ಕಟ್ಟಿಸಿಕೊಡಲು ಮುಂದಾಗಿದ್ದೇನೆ. ತನ್ನ ಸೇವೆಯು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರದೇ ಸಮಾಜದ ಎಲ್ಲರಿಗೂ ಸಹಕಾರಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ್ ವಹಿಸಿದ್ದರು.

ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು, ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಆರ್. ನಾಯ್ಕ, ವರ್ತಕರ ಸಂಘದ ಅಧ್ಯಕ್ಷ ಶ್ರೀಧರ ಶ್ಯಾನಭಾಗ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸತೀಶಕುಮಾರ್, ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು.

ಸುಧೀಂದ್ರ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ರಮೇಶ್ ಖಾರ್ವಿ ಇದ್ದರು. ಅಡಿಗಲ್ಲು ಸಮಾರಂಭದ ಧಾರ್ಮಿಕ ಕಾರ್ಯಕ್ರಮವನ್ನು ವಿನೋದ ಭಟ್ಟ ನೆರವೇರಿಸಿಕೊಟ್ಟರು.

ವೈದ್ಯರಾದ ಡಾ. ಸತೀಶ ಬಿ., ಡಾ. ಲಕ್ಷ್ಮೀಶ, ಡಾ. ಸುರಕ್ಷಿತ ಶೆಟ್ಟಿ, ಪ್ರಮುಖರಾದ ಡಾ. ಸುರೇಶ ನಾಯಕ, ವಸಂತ ಶ್ಯಾನಭಾಗ, ರಾಜೇಶ ನಾಯಕ, ರಮೇಶ ಖಾರ್ವಿ, ಅಬ್ದುಲ್ ಸಮಿ ಕೋಲಾ, ನಜೀರ್ ಕಾಶಿಮನಿ, ಸಲ್ಮಾನ್ ಶೇಖ್, ನಿಸ್ಸಾರ್ ಅಹಮ್ಮದ್, ವೆಂಕಟೇಶ್ ನಾಯ್ಕ ಆಸರಕೇರಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಟ್ಕಳದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಹತ್ತು ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕದ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿತು.

PREV

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ