ರಕ್ತ ಚಂದನ ಸಾಗಿಸುತ್ತಿದ್ದಅಪ್ರಾಪ್ತ ಸೇರಿ ನಾಲ್ವರ ಸೆರೆ

KannadaprabhaNewsNetwork |  
Published : Dec 05, 2025, 04:30 AM IST
Red Sandal

ಸಾರಾಂಶ

ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಬಂಧಿಸಿ ₹1.75 ಕೋಟಿ ಮೌಲ್ಯದ ರಕ್ತ ಚಂದನವನ್ನು ಹುಳಿಮಾವು ಹಾಗೂ ಆರ್‌.ಟಿ.ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಬಂಧಿಸಿ ₹1.75 ಕೋಟಿ ಮೌಲ್ಯದ ರಕ್ತ ಚಂದನವನ್ನು ಹುಳಿಮಾವು ಹಾಗೂ ಆರ್‌.ಟಿ.ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಥಣಿಸಂದ್ರದ ಅಹಮ್ಮದ್ ಪಾಷ, 16 ವರ್ಷದ ಆತನ ಸಹಚರ, ರಾಜಶೇಖರ್ ಮತ್ತು ವರ ಪ್ರಸಾದ್ ಬಂಧಿತರಾಗಿದ್ದು, ಆರೋಪಿಗಳಿಂದ 1 ಟನ್ ರಕ್ತ ಚಂದನ ಜಪ್ತಿಯಾಗಿದೆ. ಆಂಧ್ರಪ್ರದೇಶ ರಾಜ್ಯದಿಂದ ರಕ್ತ ಚಂದನ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ.

ಮೆಕ್ಯಾನಿಕ್ ಆದ ಸ್ಮಗ್ಲರ್:

ಥಣಿಸಂದ್ರದಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಪಾಷ ಇತ್ತೀಚಿಗೆ ಹಣದಾಸೆಗೆ ರಕ್ತ ಚಂದನ ಕಳ್ಳ ಸಾಗಾಣಿಕೆಯಲ್ಲಿ ಆತ ತೊಡಗಿದ್ದ. ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ರಕ್ತಚಂದನ ದಂಧೆಕೋರನಿಂದ ಕಡಿಮೆ ಬೆಲೆಗೆ ಖರೀದಿಸಿ ತಮಿಳುನಾಡಿನ ವ್ಯಕ್ತಿಗಳಿಗೆ ದುಪ್ಪಟ್ಟು ಹಣಕ್ಕೆ ಮಾರುತ್ತಿದ್ದ. ಬಳಿಕ ಈ ರಕ್ತ ಚಂದನವು ಚೆನ್ನೈ ಬಂದರು ಸೇರಿ ಅಲ್ಲಿಂದ ಅಕ್ರಮವಾಗಿ ವಿದೇಶಕ್ಕೆ ರವಾನೆಯಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಹುಳಿಮಾವು ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರಸ್ವಾಮಿ, ಸ್ಮಗ್ಲರ್‌ಗಳ ಬೆನ್ನತ್ತಿದ್ದು, ಗೊಟ್ಟಿಗೆರೆ ಕೆರೆ ಸಮೀಪ ರಕ್ತ ಚಂದನ ಸಾಗಿಸುವಾಗ ಪಾಷ ಖಾಕಿ ಬಲೆಗೆ ಬಿದ್ದಿದ್ದಾನೆ. ಬಳಿಕ ಆತನ ವಿಚಾರಣೆ ವೇಳೆ ಅಕ್ರಮದ ಕೃತ್ಯವು ಬಯಲಾಗಿದೆ.

ಇಬ್ಬರು ಪದವೀಧರರು ಸೆರೆ:

ಆರ್.ಟಿ.ನಗರ ಠಾಣೆ ಪೊಲೀಸರಿಗೆ ಮತ್ತಿಬ್ಬರು ಸ್ಮಗ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಆಂಧ್ರಪ್ರದೇಶ ಮದನ ಪಲ್ಲಿಯ ರಾಜಶೇಖರ್ ಹಾಗೂ ವರ ಪ್ರಸಾದ್ ಬಂಧಿತರಾಗಿದ್ದು, ಆರೋಪಿಗಳಿಂದ ₹75 ಲಕ್ಷ ಮೌಲ್ಯದ ರಕ್ತಚಂದನ ಸಿಕ್ಕಿದೆ. ಕೆಎಚ್‌ಎಂ ಬ್ಲಾಕ್‌ನ ಈರುಳ್ಳಿ ಮೈದಾನದ ಬಳಿ ರಕ್ತ ಚಂದನ ಮಾರಾಟಕ್ಕೆ ಇಬ್ಬರು ಸಜ್ಜಾಗಿದ್ದಾಗ ಮಾಹಿತಿ ಪಡೆದು ಪೊಲೀಸರು ಬಂಧಿಸಿದ್ದಾರೆ. ಪದವಿ ಓದು ಮುಗಿದ ಬಳಿಕ ನಿರುದ್ಯೋಗಿಗಳಾಗಿದ್ದ ಈ ಆರೋಪಿಗಳು, ಹಣ ಸಂದಾಪನೆಗೆ ಅಡ್ಡದಾರಿ ತುಳಿದಿದ್ದಾರೆ

 ಮದನಪಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರಕ್ತ ಚಂದನ ತುಂಡುಗಳನ್ನು ಕಳವು ಮಾಡಿದ್ದರು. ನಂತರ ಆ ಮರದ ತುಂಡುಗಳನ್ನು ಟಾಟಾ ಏಸ್‌ನಲ್ಲಿ ಅಡಗಿಸಿಟ್ಟುಕೊಂಡು ನಗರಕ್ಕೆ ತಂದು ಮಾರಲು ಆರೋಪಿಗಳು ಯತ್ನಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ
ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ