ಫೋಟೋ- 28ಎಂವೈಎಸ್31
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯು ಆಯೋಜಿಸಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಭಾನುವಾರ 4 ಪುಸ್ತಕಗಳನ್ನು ಎಂ.ಕೆ. ಹರಿಚರಣ ತಿಲಕ್ ಬಿಡುಗಡೆ ಮಾಡಿದರು.ಅಶೋಕ ಪಿ. ಮಣಿ ಅವರ ಅಮೃತ ಸಿಂಚನ, ಪ್ರಮೋದ ಕರಣಂ ಅವರ ಹುಟ್ಟು ಸಾವುಗಳ ನಡುವೆ, ಜ್ಯೋತಿ ಬದಾಮಿ ಅವರ ಕುಂಬಳಕಾಯಿ ಕಳ್ಳ ಅಂದ್ರೆ... ಹಾಗೂ ಕೆ.ಎಲ್. ವಿನೋದ್ ಅವರ ತುಪಾಕಿಯ ಪಿಸು ಮಾತುಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಉಪಸಮಿತಿ ಸದಸ್ಯರಾದ ರಾಜಶೇಖರ ಕದಂಬ, ಸುಚಿತ್ರಾ ಹೆಗಡೆ, ಡಾ.ಸಿ.ಡಿ. ಪರಶುರಾಮ್, ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು ಮೊದಲಾದವರು ಇದ್ದರು.