ರಂಗಸಿರಿಯ ಕಾರ್ಯದರ್ಶಿ ಪಿ.ಶಾಡ್ರಾಕ್ ಮಾಹಿತಿ । ಆರು ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ವತಿಯಿಂದ ಕಾಲೇಜು ರಂಗೋತ್ಸವವನ್ನು ಮಾ.೨೪ ರಿಂದ ೨೭ರ ವರೆಗೂ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಿರಿಯ ಕಾರ್ಯದರ್ಶಿ ಪಿ.ಶಾಡ್ರಾಕ್ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ವಿ, ಸತೀಶ್, ಎಚ್.ಡಿ. ಗುರುಪ್ರಸಾದ್, ಶ್ರೀನಿವಾಸ್ ಕೊಟ್ಟೂರು ಅವರ ನೆನಪಿನಲ್ಲಿ ನುರಿತ ತಜ್ಞರಿಂದ ಅನೇಕ ತರಬೇತಿ ಕೊಡುತ್ತ ರಂಗಸಿರಿಯೂ ಅನೇಕ ನಾಟಕವನ್ನು, ಕಾಲೇಜು ವಿದ್ಯಾರ್ಥಿಗಳಿಗೆ ಶಿಬಿರವನ್ನು ಪ್ರತಿವರ್ಷ ಏರ್ಪಡಿಸುತ್ತ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಕಾರಣದಿಂದ ಈ ಚಟುವಟಿಕೆ ನಡೆಸಲು ಆಗಿರಲಿಲ್ಲ. ಈ ಬಾರಿ ಮತ್ತೆ ರಂಗ ಚಟುವಟಿಕೆಯನ್ನು ಕೈಗೆತ್ತಿಕೊಂಡು ಸುಮಾರು ೫ ಕಾಲೇಜುಗಳಿಗೆ ನಾಟಕವನ್ನು ಕಲಿಸುತ್ತ ಪ್ರಯೋಗವನ್ನು ಮಾ.೨೪ ರಿಂದ 27ರ ವರೆಗೂ ನಾಲ್ಕು ದಿನಗಳಲ್ಲಿ ಆರು ನಾಟಕವನ್ನು ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ ೬ ಗಂಟೆಯಿಂದ ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.
ಉದ್ಘಾಟನೆಯನ್ನು ಲಂಕೇಶ್ ಪುತ್ರ ಇಂದ್ರಜೀತ್ ಲಂಕೇಶ್ ಹಾಗೂ ರಾಜ್ಯ ಕಾರ್ಯಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ನೆರವೇರಿಸಲಿದ್ದಾರೆ. ಮಾ.೨೭ರ ಮುಕ್ತಾಯ ಸಮಾರಂಭಕ್ಕೆ ವಿಶ್ವ ರಂಗಭೂಮಿ ದಿನದಂದು ‘ತಂಗಿಗೊಂದು ಗಂಡು ಕೊಡಿ’ ನಾಟಕದಲ್ಲಿ ಪ್ರದರ್ಶಿಸಲಾಗುವುದು. ಇದರಲ್ಲಿ ಹಾಸನ ಜಿಲ್ಲೆಯ ಹಿರಿಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಹಿರಿಯ ನಟ ದೊಡ್ಡಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಂಗಸಿರಿಯ ಸಂಚಾಲಕ ಬಿ.ಆರ್.ಉದಯಕುಮಾರ್, ಶಿಬಿರದ ನಿರ್ದೇಶಕ ಅನಿಲ್ ರೇವೂರ್, ರಂಗಸಿರಿಯ ಧ್ವನಿ ಮತ್ತು ಬೆಳಕಿನ ಮಲ್ಲೇಶ್, ಹಿರಿಯ ನಟ ಜವರೇಗೌಡ ಇದ್ದರು.