ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಗುಬ್ಬಗೋಡು ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಮತ್ತು ಡಾ.ನಾರಿಬೋಲಿ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಕರ್ತವ್ಯ ನಿಷ್ಠೆ ಮತ್ತು ಭ್ರಷ್ಟಾಚಾರ ವಿರುದ್ಧದ ಮನೋಭಾವ ಬೆಳೆಸಬೇಕು ಎಂದರು.
ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿರುವ ಮಕ್ಕಳ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಓದಿನ ಜೊತೆಗೆ ಪ್ರಾಪಂಚಿಕ ಅರಿವು ಅವರಲ್ಲಿ ಬಿತ್ತಬೇಕು. ನಾಲ್ಕು ಗೋಡೆಯ ಶಿಕ್ಷಣ ಮಕ್ಕಳನ್ನು ಬೌದ್ಧಿಕವಾಗಿ ಸಜ್ಜುಗೊಳಿಸುತ್ತದೆ. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಅವರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಮಕ್ಕಳಿಗೆ ಕಲಿಯುವ ಹಸಿವು ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ಕಲಿಯಲು ಏನೆಲ್ಲಾ ಸಿಗುತ್ತದೆಯೋ ಅದನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿ, ಸಮಾಜದಲ್ಲಿ ಉತ್ತಮ ಪೌರರಾಗಬೇಕಾದರೆ ಸಂಯಮ, ತಾಳ್ಮೆ, ಶ್ರದ್ಧೆ ಅಗತ್ಯ. ತಮಗೆ ವಹಿಸಿರುವ ಕೆಲಸ ಪ್ರಾಮಾಣಿಕವಾಗಿ ಮಾಡಿ ಮುಗಿಸಬೇಕು. ಇಂತಹ ಶಿಬಿರಗಳಲ್ಲಿ ನಿಮಗೆ ಬದುಕಿನ ಬಗ್ಗೆ ಅನುಭವ ಸಿಗುತ್ತದೆ. ಪರಿಸರ ಸಂರಕ್ಷಣೆ ಜೊತೆಗೆ ಮಾನವೀಯ ಮೌಲ್ಯಗಳ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಎಂಡಿಎಫ್ ಉಪಾಧ್ಯಕ್ಷ ಬಿ.ಆರ್.ಜಯಂತ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಚಾರ್ಯೆ ಡಾ.ಶಿಲ್ಪ ವಿ.ಎನ್., ಗಣಪತಿ ಜಿ.ಎಸ್., ಸಚಿನ್ ಬಿ.ಇ., ಹಾಲೇಶ್ ಇನ್ನಿತರರಿದ್ದರು.