ಗದಗ-ಹೊನ್ನಾಳಿ ಚತುಷ್ಪಥ ರಸ್ತೆ; ಅಗಲೀಕರಣಕ್ಕೆ ಚಾಲನೆ

KannadaprabhaNewsNetwork |  
Published : Dec 25, 2024, 12:47 AM IST
ಹೊನ್ನಾಳಿ ಫೋಟೋ 24ಎಚ್.ಎಲ್.ಐ3. ಹೊನ್ನಾಳಿ ಪಟ್ಟದಲ್ಲಿ ಗದಗ್ ನಿಂದ  ಹೊನ್ನಾಳಿ ಚತುಷ್ಪಥ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ  ಅಧಿಕೃತವಾಗಿ ಚಾಲನೆ ನೀಡಲಾಯಿತು.                      | Kannada Prabha

ಸಾರಾಂಶ

ಗದಗ-ಹೊನ್ನಾಳಿ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿಗೆ ಸೋಮವಾರದಿಂದ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ರಸ್ತೆ ಅಗಲೀಕರಣಕ್ಕಾಗಿ 2018-2019ರ ಬಿಜೆಪಿ ಸರ್ಕಾರದಲ್ಲಿ ಸರ್ಕಾರ ಗೆಜೆಟ್ ನೋಟಿಫಿಕೇಶನ್, ಟೆಂಡರ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ನಡೆಸಿತ್ತು.

- ಸ್ವತಃ ಕಟ್ಟಡ ತೆರವಿಗೆ ಮಾಲೀಕರು ಮುಂದಾಗಲು ಸೂಚನೆ ।

- ಭೂ ಪರಿಹಾರ ಹಣ ಪಡೆದುಕೊಳ್ಳುವಂತೆ ಆಸ್ತಿ ಮಾಲೀಕರಿಗೆ ಮನವಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಗದಗ-ಹೊನ್ನಾಳಿ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿಗೆ ಸೋಮವಾರದಿಂದ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ರಸ್ತೆ ಅಗಲೀಕರಣಕ್ಕಾಗಿ 2018-2019ರ ಬಿಜೆಪಿ ಸರ್ಕಾರದಲ್ಲಿ ಸರ್ಕಾರ ಗೆಜೆಟ್ ನೋಟಿಫಿಕೇಶನ್, ಟೆಂಡರ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ನಡೆಸಿತ್ತು.

ಕಳೆದ ವರ್ಷದಲ್ಲಿ ಈ ರಸ್ತೆ ಯೋಜನೆಯಡಿ ಯಾರು ಜಮೀನು ಕಳೆದುಕೊಳ್ಳುತ್ತಾರೋ ಅಂತಹವರಿಗೆ ಪರಿಹಾರದ ಹಣವೂ ಬಂದಿದೆ. ಕಳೆದ ಆರು ತಿಂಗಳಲ್ಲಿ 3 ಬಾರಿ ರಸ್ತೆ ಅಗಲೀಕರಣಕ್ಕೆ ನೀವೇ ಜಾಗ ಖಾಲಿ ಮಾಡಿಕೊಡಿ ಎಂದು ಹೈವೇ ಅಭಿವೃದ್ಧಿ ಪ್ರಾಧಿಕಾರ (ಕೆಶಿಪ್) ಮನವಿ ಮಾಡಿತ್ತು. ಕೆಲವರು ಜಾಗವನ್ನು ಖಾಲಿ ಮಾಡಿಕೊಟ್ಟಿದ್ದರು. ಇನ್ನೂ ಕೆಲವರು ಕಟ್ಟಡ ತೆರವು ಮಾಡಇರಲಿಲ್ಲ. ಈ ಹಿನ್ನೆಲೆ ಕೆಶಿಪ್ ಅಧಿಕಾರಿಗಳು ಸೋಮವಾರ ರಸ್ತೆ ಅಭಿವೃದ್ಧಿಗೆ ಕೆಲವು ಕಟ್ಟಡಗಳ ತೆರವು ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಕೆಶಿಪ್ ಎಇಇ ಪರಮೇಶ್ವರ್ ನಾಯ್ಕ್ ಈ ಸಂದರ್ಭ ಮಾತನಾಡಿ, ಕಟ್ಟಡ ತೆರವಿಗೆ ಮೂರು ಭಾರಿ ಧ್ವನಿವರ್ಧಕ ಮೂಲಕ ಮನವಿ ಮಾಡಿದ್ದೇವು. ಇನ್ನೂ ಪರಿಹಾರದ ಹಣ ಪಡೆಯದಿರುವವರು ಅಂಥವರಿಗೆ ಶೀಘ್ರ ನಿಮ್ಮ ಹಣ ತೆಗೆದುಕೊಳ್ಳಬೇಕು. ಇನ್ನೂ ದಾಖಲಾತಿಗಳನ್ನು ಕೊಟ್ಟಿಲ್ಲದವರು ಶೀಘ್ರ ನ್ಯಾಯಾಲಯಕ್ಕೆ ದಾಖಲಾತಿ ಸಲ್ಲಿಸಿ, ತಮ್ಮ ಪರಿಹಾರದ ಹಣ ತೆಗೆದುಕೊಳ್ಳಬಹುದು ಎಂದರು.

ಈಗ ಅಧಿಕೃತವಾಗಿ ಕಾಮಗಾರಿ ಪ್ರಾರಂಭಿಸಬೇಕಾಗಿದೆ. ರಸ್ತೆ ಅಭಿವೃದ್ಧಿ ಅಗಲೀಕರಣ ಕಾಮಗಾರಿಗೆ ನಾವೇ ಕಟ್ಟಡ ತೆರವು ಮಾಡುತ್ತಿದ್ದೇವೆ. 2138 ನೋಟಿಫಿಕೇಶನ್ ಆಗಿದ್ದು, ಅದರಲ್ಲಿ 170 ಕಟ್ಟಡಗಳಿವೆ. ಏಳು ಸರ್ಕಾರಿ ಕಟ್ಟಡಗಳು ಸಹ ಇದೆ. ರಸ್ತೆ ಮಧ್ಯೆಯಿಂದ ಎರಡೂ ಕಡೆಗಳಿಗೂ 37.5 ಅಡಿ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಕೆಲ ನಾಗರಿಕರು ಅಳತೆ ಸರಿಯಾಗಿಲ್ಲ, ಇನ್ನೊಮ್ಮೆ ಅಳತೆ ಮಾಡಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಆದ್ದರಿಂದ ಅಧಿಕಾರಿಗಳು ಯಾರು ಮನವಿ ಮಾಡಿದ್ದಾರೋ ಅಂತಹ ಕಟ್ಟಡಗಳ ಬಳಿ ಅಳತೆ ಮಾಡಿಕೊಟ್ಟರು.

ಮನವಿ:

ರಸ್ತೆ ಅಭಿವೃದ್ಧಿ ಕಾಮಗಾರಿ ವೇಗವಾಗಿ ನಡೆಯಲಿದೆ. ರಸ್ತೆಯಿಂದ ತಮ್ಮ ಕಟ್ಟಡ ಎಷ್ಟಕ್ಕೆ ಕತ್ತರಿಕೊಳ್ಳಬೇಕು ಎಂದು ಈಗಾಗಲೇ ತಮ್ಮ ತಮ್ಮ ಕಟ್ಟಡಗಳಲ್ಲಿ ಮಾರ್ಕ್ ಮಾಡಿದ್ದೇವೆ. ಈ ಮಾರ್ಕಿನ ಅನ್ವಯ ತಾವುಗಳೇ ಕಟ್ಟಡ ತೆರವು ಮಾಡಿಕೊಂಡರೆ ಒಳ್ಳೆಯದು. ನೀವೇ ಕಟ್ಟಡ ತೆರವು ಮಾಡಿಕೊಡಿ ಎಂದು ಕೆಶಿಪ್‌ ಎಇಇ ಪರಮೇಶ್ವರ ನಾಯ್ಕ್ ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ನಿರೀಕ್ಷಕ ಮಂಜುನಾಥ, ಟಾಸ್ಕ್ ಫೋರ್ಸ್‌ ವ್ಯವಸ್ಥಾಪಕ ಮಂಜುನಾಥ್‌ ರೆಡ್ಡಿ ಸೇರಿದಂತೆ ಅನೇಕ ಸಿಬ್ಬಂದಿ ಹಾಗೂ ನಾಗರೀಕರು ಇದ್ದರು.

- - - -24ಎಚ್.ಎಲ್.ಐ3:

ಹೊನ್ನಾಳಿ ಪಟ್ಟದಲ್ಲಿ ಗದಗದಿಂದ ಹೊನ್ನಾಳಿ ಚತುಷ್ಪಥ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ