ಮನಸೂರೆಗೊಂಡ ನಾಲ್ಕನೇ ದಿನದ ಭರತನಾಟ್ಯ ವೈಭವ

KannadaprabhaNewsNetwork |  
Published : Apr 01, 2026, 01:30 AM IST
31ಎಚ್ಎಸ್ಎನ್6 : ಬೆಂಗಳೂರು ಅರೋಹಣ ನೃತ್ಯ ಶಾಲೆಯ  ಶ್ರೀಮತಿ ಭಾರ್ಗವಿ ಹಾಗೂ ತಂಡ ಭರತನಾಟ್ಯ   ಕಾರ್ಯಕ್ರಮ ನಡೆಸಿಕೊಟ್ಟರು.31ಎಚ್ಎಸ್ಎನ್6 :  | Kannada Prabha

ಸಾರಾಂಶ

ಸಂಗೀತ, ಸಾಹಿತ್ಯ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಾವು ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸಿ, ಉತ್ತಮ ಸಂಸ್ಕಾರವನ್ನು ಪಡೆದು ಮುನ್ನಡೆಯೋಣ.

ಹಾಸನ: ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಧಾರ್ಮಿಕ ಕೇಂದ್ರಗಳಲ್ಲಿ ಭರತನಾಟ್ಯಗಳು ಹಾಗೂ ಸಂಗೀತ, ಹಾಡುಗಾರಿಕೆ ಕೇಳುವುದರಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ, ಉಲ್ಲಾಸ ಸಿಗುತ್ತದೆ ಎಂದು ಶ್ರೀರಾಮ ಸೇವಾ ಸಮಿತಿ ಸದಸ್ಯ, ವಕೀಲರಾದ ಶ್ರೀವತ್ಸಲ ಅವರು ತಿಳಿಸಿದರು. ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ 4ನೇ ದಿನದ ಭರತನಾಟ್ಯ ಕಾರ್ಯಕ್ರಮದಲ್ಲಿ ಬೆಂಗಳೂರು ಆರೋಹಷ ನೃತ್ಯ ಭರತನಾಟ್ಯ ಶಾಲೆಯ ವಿ. ಭಾರ್ಗವಿ ಹಾಗೂ ತಂಡದವರಿಂದ ಭರತನಾಟ್ಯ ನಡೆಯಿತು. ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಗೀತ, ಸಾಹಿತ್ಯ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಾವು ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸಿ, ಉತ್ತಮ ಸಂಸ್ಕಾರವನ್ನು ಪಡೆದು ಮುನ್ನಡೆಯೋಣ ಎಂದು ತಿಳಿಸಿದರು. ಸೇವಾಕರ್ತರಾದ ಬೆಂಗಳೂರು ಶೇಷಾದ್ರೀಪುರಂ, ದಿ. ಎಚ್.ಟಿ. ವರದರಾಜನ್ ಕುಟುಂಬ, ಅನೇಕಲ್ ಶ್ರೀ ಮಂಜುನಾಥಶಾಸ್ತ್ರಿ, ಎಂ.ವಿ. ನಾಗರಾಜ್ ಮುಂತಾದವರು ಬಂದಂಥ ಕಲಾಭಿಮಾನಿಗಳಿಗೆ ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ಉತ್ಸವ ಹಾಗೂ ಪೂಜಾ ಕೈಂಕರ್ಯ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕಾಲಿಕ ಮಳೆಗೆ ತರಕಾರಿ ವ್ಯಾಪಾರಸ್ಥರ ಬದುಕು ಮೂರಾಬಟ್ಟೆ: ಸೂಕ್ತ ತರಕಾರಿ ಮಾರುಕಟ್ಟೆ ಕಲ್ಪಿಸದ ಪಟ್ಟಣ ಪಂಚಾಯ್ತಿ
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸಮಯ ಪ್ರಜ್ಞೆಯ ಅಗತ್ಯವಿದೆ: ಡೀಸಿ ಲತಾಕುಮಾರಿ