ದತ್ತು ವಿದ್ಯಾರ್ಥಿ ಜಿಲ್ಲೆಗೆ ನಾಲ್ಕನೇ ಸ್ಥಾನ

KannadaprabhaNewsNetwork |  
Published : Apr 10, 2026, 02:30 AM IST
ದತ್ತು ವಿದ್ಯಾರ್ಥಿ ಜಿಲ್ಲೆಗೆ ನಾಲ್ಕನೇ ಸ್ಥಾನ | Kannada Prabha

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಮೂಡಲಗಿ ಮುನ್ಯಾಳ ಗ್ರಾಮದ ವಿದ್ಯಾರ್ಥಿ ರವಿ ಮಲ್ಲಪ್ಪ ತುಕ್ಕಣ್ಣವರ ಪಿಯು ವಿಜ್ಞಾನ ವಿಭಾಗದಲ್ಲಿ ೫೯೧ ಅಂಕದೊಂದಿಗೆ ಶೇ.೯೮.೫ರಷ್ಟು ಸಾಧನೆ ಮಾಡಿ ರಬಕವಿ-ಹೊಸೂರಿನ ಪದ್ಮಾವತಿ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಸ್ಥಾನದೊಂದಿಗೆ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ.

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಮೂಡಲಗಿ ಮುನ್ಯಾಳ ಗ್ರಾಮದ ವಿದ್ಯಾರ್ಥಿ ರವಿ ಮಲ್ಲಪ್ಪ ತುಕ್ಕಣ್ಣವರ ಪಿಯು ವಿಜ್ಞಾನ ವಿಭಾಗದಲ್ಲಿ ೫೯೧ ಅಂಕದೊಂದಿಗೆ ಶೇ.೯೮.೫ರಷ್ಟು ಸಾಧನೆ ಮಾಡಿ ರಬಕವಿ-ಹೊಸೂರಿನ ಪದ್ಮಾವತಿ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಸ್ಥಾನದೊಂದಿಗೆ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ. ರವಿ ತಂದೆ-ತಾಯಿ ಇಬ್ಬರೂ ಕೂಲಿ ಕೆಲಸ ಮಾಡಿ ದೈನಂದಿನ ಬದುಕು ಸಾಗಿಸುತ್ತಿದ್ದಾರೆ. ಕುಟುಂಬದ ಆರ್ಥಿಕ ಗಂಭೀರ ಸ್ಥಿತಿಯನ್ನರಿತ ಹಜಾರೆ ಫೌಂಡೇಶನ್ ವಿದ್ಯಾರ್ಥಿಯನ್ನು ದತ್ತು ಪಡೆದು ಕಲಿಕೆಗೆ ಅವಕಾಶ ಕಲ್ಪಿಸಿದ್ದರು. ಇದೀಗ ವಿಶೇಷ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾನೆ.ಕನ್ನಡ-೯೮, ಇಂಗ್ಲೀಷ್-೯೪, ಭೌತಶಾಸ್ತ್ರ-೧೦೦, ರಸಾಯನಶಾಸ್ತ್ರ-೯೯, ಗಣಿತ-೧೦೦, ಜೀವಶಾಸ್ತ್ರ-೧೦೦ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳಿಗೆ ವಿಟಿಯು ಆದ್ಯತೆ
ಮಸ್ಟ್ 3ನೇ ಪುಟಕ್ಕೆ.... ನೀರಿನ ಹೊಂಡಕ್ಕೆ ಬಿದ್ದು ಯುವಕ ಸಾವು