ಕಂಪನಿಗಳಿಂದ ವಂಚನೆ: ಹಣಕ್ಕಾಗಿ ಸಂತ್ರಸ್ತರ ಪ್ರತಿಭಟನೆ

KannadaprabhaNewsNetwork | Published : Sep 26, 2024 9:53 AM

ಸಾರಾಂಶ

ಪ್ರತಿಯೊಬ್ಬ ವಂಚನೆಗೊಳಗಾದ ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿ ವಂಚನೆಗೊಳಗಾದ ಏಜೆಂಟರು ರಾಮನಗರದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ಪಾವತಿಗೆ ಆಗ್ರಹ । ವಂಚನೆಮುಕ್ತ ರಾಷ್ಟ ಮಾಡಿಕನ್ನಡಪ್ರಭ ವಾರ್ತೆ ರಾಮನಗರಪಾವತಿ ಖಾತರಿ ಹಕ್ಕುಗಳ ಕಾನೂನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 (ಬಡ್ಸ್ ಕಾಯ್ದೆ 2019) ಅಡಿ ಪ್ರತಿಯೊಬ್ಬ ವಂಚನೆಗೊಳಗಾದ ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿ ವಂಚನೆಗೊಳಗಾದ ಏಜೆಂಟರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸಂಘಟನೆ ನೇತೃತ್ವದಲ್ಲಿ ಧರಣಿ ಪ್ರಾರಂಭಿಸಿದ ಏಜೆಂಟರು, ನಿರುದ್ಯೋಗಿ ಮುಗ್ಧ ಏಜೆಂಟರಿಗೆ ಭದ್ರತೆ, ಗೌರವ, ಉದ್ಯೋಗ ಮತ್ತು ಪುನರ್ವಸತಿ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 111ರ ಅಡಿಯಲ್ಲಿ ಪ್ರತಿಯೊಬ್ಬ ಅಪ್ರಾಮಾಣಿಕ ವ್ಯಕ್ತಿಗೆ ಮರಣ ದಂಡನೆಯನ್ನು ನೀಡುವ ಮೂಲಕ ಪವಿತ್ರ ಭಾರತವನ್ನು ವಂಚನೆಮುಕ್ತ ಮತ್ತು ಪ್ರಾಮಾಣಿಕ ರಾಷ್ಟ್ರವಾಗಿ ಸ್ಥಾಪಿಸುವಲ್ಲಿ ಸಹಕರಿಸಬೇಕು ಎಂದು ಆಗ್ರಹಿಸಿದರು.ಸರ್ಕಾರ ಕಾನೂನು ಕೆಲಸ ಆರಂಭಿಸಿದ್ದರೆ ಇಷ್ಟೋತ್ತಿಗೆ ಸಂತ್ರಸ್ತರಿಗೆಲ್ಲ ಹಣ ಸಂದಾಯವಾಗುತ್ತಿತ್ತು. ಹೂಡಿಕೆದಾರರು , ಏಜೆಂಟರು ವಲಸೆ ಮತ್ತು ಕಿರುಕುಳದಿಂದ ಪಾರಾಗುತ್ತಿದ್ದರು. 2024ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ವಂಚನೆಯ ಸಂತ್ರಸ್ತರ ಹಣವನ್ನು ಹಿಂದಿರುಗಿಸುವುದಾಗಿ ಪ್ರಧಾನಿ ಸ್ವತಃ ಅನೇಕ ಸಾರ್ವಜನಿಕ ಸಭೆಗಳಲ್ಲಿ ಭರವಸೆ ನೀಡಿದ್ದರು. ಅದು ಈಗ ಮರೆತು ಹೋಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಜನರು ವಂಚನೆಗೆ ಬಲಿಯಾಗಿದ್ದಾರೆ. ಅವರು ಕಷ್ಟುಪಟ್ಟು ಸಂಪಾದಿಸಿದ ಬಂಡವಾಳ ಸರ್ಕಾರಿ ಸಂಸ್ಥೆಗಳು ಮತ್ತು ದರೋಡೆಕೋರರ ಕೈಯಲ್ಲಿದೆ. ಜಿಲ್ಲಾಡಳಿತ ಮತ್ತು ಸಕ್ಷಮ ಅಧಿಕಾರಿಗಳು ಪದೇ ಪದೇ ಅರ್ಜಿ ಸಲ್ಲಿಸಿದರು ಹಿಂತಿರುಗಿಸುತ್ತಿಲ್ಲ. ಇದರಿಂದ ಲಕ್ಷಾಂತರ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಕಾನೂನಿನಡಿಯಲ್ಲಿ ಪಾವತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಂತ್ರಸ್ತರ ಠೇವಣಿಗಳನ್ನು ತಕ್ಷಣವೇ ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವ ಮೂಲಕ ಸರ್ಕಾರ ಮತ್ತು ಕಾನೂನಿನ ಮಂದಿರದ ಘನತೆಯನ್ನು ಉಳಿಸಲು ವಿನಂತಿಸಲಾಗಿದೆ. ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವ ಅಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಶಿವಲಿಂಗಯ್ಯ, ರಾಮಣ್ಣ, ಶಿವಕುಮಾರ್ , ಹೊನ್ನಯ್ಯ, ವೆಂಕಟೇಶ್, ನಾರಾಯಣ ಭಾಗವಹಿಸಿದ್ದರು.

Share this article