ಇಟಗಿಯಲ್ಲಿ 28ರಿಂದ ಅಗ್ನಿವೀರ ಉಚಿತ ಸೇನಾ ಭರ್ತಿ ತರಬೇತಿ: ಮಲ್ಲಸರ್ಜಾ ದೇಸಾಯಿ

KannadaprabhaNewsNetwork |  
Published : Sep 20, 2026, 03:45 AM IST
17 ರೋಣ 1.  ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ವಿಜಯಮಾರ್ಗ ಟ್ರಸ್ಟ ಅಧ್ಯಕ್ಷ ಮಲ್ಲಸರ್ಜಾ ದೇಶಾಯಿ ಮಾತನಾಡಿದರು. | Kannada Prabha

ಸಾರಾಂಶ

ವಿಜಯಮಾರ್ಗ ಟ್ರಸ್ಟ್‌ ಇಟಗಿ ಮತ್ತು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೇರಿ-ಇಟಗಿ ಸಹಯೋಗದಲ್ಲಿ ತಾಲೂಕಿನ ಇಟಗಿ ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಸೆ.28ರಿಂದ 1 ತಿಂಗಳವರೆಗೆ ಅಗ್ನೀವೀರ ಸೇನಾ ಭರ್ತಿ ತರಬೇತಿ ನೀಡಲಾಗುವುದು.

ಸಭೆಯಲ್ಲಿ ವಿಜಯಮಾರ್ಗ ಟ್ರಸ್ಟ್‌ ಅಧ್ಯಕ್ಷರ ಮಾಹಿತಿ

ಕನ್ನಡಪ್ರಭ ವಾರ್ತೆ ರೋಣ

ವಿಜಯಮಾರ್ಗ ಟ್ರಸ್ಟ್‌ ಇಟಗಿ ಮತ್ತು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೇರಿ-ಇಟಗಿ ಸಹಯೋಗದಲ್ಲಿ ತಾಲೂಕಿನ ಇಟಗಿ ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಸೆ.28ರಿಂದ 1 ತಿಂಗಳವರೆಗೆ ಅಗ್ನೀವೀರ ಸೇನಾ ಭರ್ತಿ ತರಬೇತಿ ನೀಡಲಾಗುವುದು ಎಂದು ವಿಜಯಮಾರ್ಗ ಟ್ರಸ್ಟ್‌ ಅಧ್ಯಕ್ಷ ಮಲ್ಲಸರ್ಜಾ ದೇಸಾಯಿ ಹೇಳಿದರು.

ಪಟ್ಟಣದ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದರು.

ದೇಶ ರಕ್ಷಣೆಯಲ್ಲಿ ಯುವ ಶಕ್ತಿ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸೇನೆ ಸೇರುವ ಮೂಲಕ ದೇಶ ಸೇವೆ ಮಾಡಬಯಸುವ ಯುವಕಕರಿಗೆ ಸೇನಾ ಭರ್ತಿಗೆ ಬೇಕಾದ ದೈಹಿಕ, ಮಾನಸಿಕ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ವಿಜಯಮಾರ್ಗ ಟ್ರಸ್ಟ್‌ ವತಿಯಿಂದ ಕಳೆದ ಮೂರುವ ವರ್ಷದಿಂದ ಅರ್ಹ ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ಉಚಿತ ಸೇನಾ ತರಬೇತಿ ನೀಡಲಾಗುವುದು. ನಮ್ಮಲ್ಲಿ ತರಬೇತಿ ಪಡೆದ ಅನೇಕ ಯುವಕರು ಈಗಾಗಲೇ ಸೇನೆಗೆ ಸೇರಿದ್ದಾರೆ. ಪೊಲೀಸ್ ಹುದ್ದೆಗೂ ಅರ್ಹತೆ ಪಡೆದಿದ್ದಾರೆ. ಒಂದು ತಿಂಗಳಕಾಲ ತರಬೇತಿಗೆ ಬೇಕಾದ ಸಾಮಗ್ರಿ ವ್ಯವಸ್ಥೆ, ಊಟ, ವಸತಿ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಸೇನಾ ಭರ್ತಿ ತರಬೇತಿದಾರ ರವಿ ಶೆಟ್ಟಿ ತಂಡದಿಂದ ತರಬೇತಿ ನೀಡಲಾಗುವುದು. ಯುವಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಪ್ರಭುಗೌಡ ಪಾಟೀಲ ಮಾತನಾಡಿದರು.

ಈ ವೇಳೆ ಮಾಜಿ ಸೈನಿಕರಾದ ಚನ್ನಪ್ಪ ನೆಲಗುಡ್ಡ, ವೀರಯ್ಯ ಹಿರೇಮಠ, ವೀರುಪಾಕ್ಷಪ್ಪ ಬಡಿಗೇರ ಸೇರಿದಂತೆ ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ ಆಳ್ವಾಸ್ ಮೆಡಿಕಲ್ ಕಾಲೇಜು ನಾಳೆ ಉದ್ಘಾಟನೆ
ಡೋಂಗಿ ಪರಿಸರವಾದಿ ಹೇಳಿಕೆಗೆ ಮುತ್ತಣ ಖಂಡನೆ