ಕೆಂಪೇಗೌಡ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಹೆರಿಗೆ ವ್ಯವಸ್ಥೆ: ನಲ್ಲಿಗೆರೆ ಬಾಲಕೃಷ್ಣ

KannadaprabhaNewsNetwork |  
Published : Jan 06, 2025, 01:03 AM IST
5ಕೆಎಂಎನ್ ಡಿ19 | Kannada Prabha

ಸಾರಾಂಶ

ಕೆಂಪೇಗೌಡ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಹೆರಿಗೆ ಸೌಲಭ್ಯ, ವೈದ್ಯಕೀಯ ವೆಚ್ಚದಲ್ಲಿ ಸುಮಾರು 25% ರಷ್ಟು ರಿಯಾಯ್ತಿ ನೀಡಿ ರೈತರಿಗೆ ಹಾಗೂ ಎಲ್ಲಾ ರೋಗಿಗಳಿಗೂ ಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಹೆರಿಗೆ ಸೌಲಭ್ಯ ಜೊತೆಗೆ ತಾಯಿ ಮಗುವಿನ ಪೂರ್ಣ ಆರೈಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಒಕ್ಕಲಿಗರ ಸಂಘದ ಖಜಾಂಜಿ ನಲ್ಲಿಗೆರೆ ಬಾಲಕೃಷ್ಣ ತಿಳಿಸಿದರು.

ಹಲಗೂರು ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಟ್ರಸ್ಟ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಂಪೇಗೌಡ ಆಸ್ಪತ್ರೆಯಲ್ಲಿ ಸಾವಿರಾರು ನುರಿತ ವೈದ್ಯ ಸಿಬ್ಬಂದಿ ಈ ದಿನ ರಜಾವಾದರೂ ತಮ್ಮ ಆಸ್ಪತ್ರೆಯ ಕೆಲಸ ಕಾರ್ಯ ಬಿಟ್ಟು ಶಿಬಿರಕ್ಕೆ ಆಗಮಿಸಿ ಜನರಿಗೆ ಆರೋಗ್ಯ ಸೌಲಭ್ಯ ನೀಡುತ್ತಿದ್ದಾರೆ. ಜನರು ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕೆಂಪೇಗೌಡ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಹೆರಿಗೆ ಸೌಲಭ್ಯ, ವೈದ್ಯಕೀಯ ವೆಚ್ಚದಲ್ಲಿ ಸುಮಾರು 25% ರಷ್ಟು ರಿಯಾಯ್ತಿ ನೀಡಿ ರೈತರಿಗೆ ಹಾಗೂ ಎಲ್ಲಾ ರೋಗಿಗಳಿಗೂ ಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಶಿಬಿರದಲ್ಲಿ ಸುಮಾರು 20 ವಿಭಾಗಗಳ ವೈದ್ಯರು ಭಾಗವಹಿಸಿ ಕಣ್ಣಿನ ಆರೋಗ್ಯ ತಪಾಸಣೆ ನಡೆಸಿ ನಂತರ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿ ಸುಮಾರು 400 ಜನರಿಗೆ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು.

ಈ ವೇಳೆ ವೈದಾಧಿಕಾರಿಗಳು ಹಾಗೂ ಹಲಗೂರು ವಿದ್ಯಾ ಸಂಸ್ಥೆಯ ಟ್ರಸ್ಟಿನ ಅಧ್ಯಕ್ಷ ಆನಂದ್ ಕುಮಾರ್ ಸೇರಿದಂತೆ ಎಲ್ಲಾ ಸದಸ್ಯರು ಇದ್ದರು.

ಅಚೀವರ್ಸ್‌ ಶಾಲೆಗೆ ಬೆಸ್ಟ್‌ ಸ್ಕೂಲ್‌ ಅವಾರ್ಡ್‌

ಮಂಡ್ಯ:

ತಾಲೂಕಿನ ಸಾತನೂರಿನಲ್ಲಿರುವ ಅಚೀವರ್ಸ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಗೆ ಬೆಸ್ಟ್‌ ಸ್ಕೂಲ್‌ ವಿಥ್‌ ಹೋಲಿಸ್ಟಿಕ್‌ ಡೆವಲಪ್‌ಮೆಂಟ್‌ ಅಂಡ್‌ ಸ್ಟೆಮ್‌ ಕೋರ್ಸ್‌ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್‌ ಅವರು ಇಂಡಿಯನ್‌ ಸ್ಕೂಲ್‌ ಅವಾರ್ಡ್‌ ವತಿಯಿಂದ ನೀಡಲಾಗುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರನ್ನು ಮಧು ಕಲ್ಲಹಳ್ಳಿ, ಆನಂದ್‌ಗೌಡ ಹಾಗೂ ಇತರರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ