ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಲಿ: ಚಲುವರಾಯಸ್ವಾಮಿ

KannadaprabhaNewsNetwork |  
Published : Jan 06, 2025, 01:03 AM IST
5ಕೆಎಂಎನ್ ಡಿ28 | Kannada Prabha

ಸಾರಾಂಶ

ನೂರಾರು ಕೋಟಿ ಸಾಲವನ್ನು ಸಂಘಗಳಿಗೆ ಸರ್ಕಾರ ನೀಡುತ್ತಾ ಬಂದಿದೆ. 5 ಲಕ್ಷದವರೆಗೂ ಶೂನ್ಯ ಬಡ್ಡಿ ದರದಲ್ಲಿ ಇಂತಹ ಸೊಸೈಟಿ ಮೂಲಕ ನೀಡುತ್ತಿದೆ. ರೈತಪಿ ವರ್ಗದ ಜನರಿಗೆ ಇದರಿಂದ ಆರ್ಥಿಕ ಹೊರೆ ಇಳಿಸಿದಂತಾಗುತ್ತದೆ. ರೈತರು ಸಾಲವನ್ನು ಪಡೆದು ನಿಗದಿತ ಅವಧಿ ಒಳಗೆ ಮರುಪಾವತಿ ಮಾಡಿ ಸೊಸೈಟಿ ಅಭಿವೃದ್ಧಿಗೆ ಸಹಕರಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಕಟ್ಟಿದ್ದಾರೆ. ರೈತಪಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ಜಿಲ್ಲಾ ಉಸ್ತುವರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಮಾರಗೌಡನಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಮತ್ತು ಗೋದಾಮು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ನೂರಾರು ಕೋಟಿ ಸಾಲವನ್ನು ಸಂಘಗಳಿಗೆ ಸರ್ಕಾರ ನೀಡುತ್ತಾ ಬಂದಿದೆ. 5 ಲಕ್ಷದವರೆಗೂ ಶೂನ್ಯ ಬಡ್ಡಿ ದರದಲ್ಲಿ ಇಂತಹ ಸೊಸೈಟಿ ಮೂಲಕ ನೀಡುತ್ತಿದೆ. ರೈತಪಿ ವರ್ಗದ ಜನರಿಗೆ ಇದರಿಂದ ಆರ್ಥಿಕ ಹೊರೆ ಇಳಿಸಿದಂತಾಗುತ್ತದೆ. ರೈತರು ಸಾಲವನ್ನು ಪಡೆದು ನಿಗದಿತ ಅವಧಿ ಒಳಗೆ ಮರುಪಾವತಿ ಮಾಡಿ ಸೊಸೈಟಿ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಸಿ.ಭಾಸ್ಕರ್, ಉಪಾಧ್ಯಕ್ಷರಾದ ಚಂದ್ರಮ್ಮ, ನಿರ್ದೇಶಕರಾದ ಎಂ.ಸಿ.ವರದರಾಜು, ಪವಿತ್ರ, ನಾಗಲಿಂಗೇಗೌಡ, ನಾಗಲಿಂಗಯ್ಯ, ಎಂ.ಟಿ.ರಾಜು, ಚಿಕ್ಕಲಿಂಗಯ್ಯ, ಶಿವಮಾದ ಶೆಟ್ಟಿ , ಕೃಷ್ಣಯ್ಯ, ಮುದ್ದುಲಿಂಗಯ್ಯ, ಮುರುಳಿಧರ್, ಶಿವಕುಮಾರ್, ಮಾಜಿ ಅಧ್ಯಕ್ಷ ವಸಂತ್ ರಾಜ್ ಭಾಗವಹಿಸಿದ್ದರು.

ಸಚಿವರಿಂದ ನೂತನ ಪೊಲೀಸ್ ಠಾಣಾ ಕಟ್ಟಡ ಉದ್ಘಾಟನೆ

ಮಂಡ್ಯ:

ತಾಲೂಕಿನ ಕೆರಗೋಡು ಗ್ರಾಮದಲ್ಲಿ ನೂತನ ಪೊಲೀಸ್ ಠಾಣಾ ಕಟ್ಟಡವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು, ಈ ಹಿಂದೆಯೆ ಠಾಣೆಯನ್ನು ಉದ್ಘಾಟಿಸಬೇಕಿತ್ತು. ಆದರೆ, ಅನೇಕ ಕಾರಣಗಳಿಂದ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗುತ್ತಿತ್ತು, ಅಂತಿಮವಾಗಿ ಇಂದು ಕಾಲ ಕೂಡಿಬಂದಿದೆ. ಕೆರಗೋಡಿನಲ್ಲಿ ನೂತನ ಪೊಲೀಸ್ ವೃತ್ತ ನಿರೀಕ್ಷಕ ಕಚೇರಿ ಕಟ್ಟಡ ಉದ್ಘಾಟಿಸಿರುವುದಕ್ಕೆ ಸಂತಸವಾಗಿದೆ ಎಂದರು.

ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್, ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು