ತುಮಕೂರು: ಮೊಬೈಲ್ ಹಾಗೂ ಕಂಪ್ಯೂಟರ್‌ನ ಬಳಕೆ ಹೆಚ್ಚಾಗಿರುವುದರಿಂದ ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದಾಗಿ ದೃಷ್ಟಿದೋಷದ ಸಮಸ್ಯೆ ಯುವಕರಲ್ಲಿ ಕಾಡುತ್ತಿದೆ. ಮಂದ ದೃಷ್ಟಿಯಿಂದ ದಪ್ಪ ಗಾಜಿನ ಕನ್ನಡಕ ಧರಿಸುವಂತಾಗಿದೆ. ಈ ಸಮಸ್ಯೆಗಳಿಂದ ಪಾರಾಗಲು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ವಿವಿಯ ಯುವರೆಡ್ ಕ್ರಾಸ್ ಘಟಕದ ಸಲಹಾ ಸಮಿತಿ ಸದಸ್ಯ ಬಿ. ಆರ್. ಉಮೇಶ್ ಹೇಳಿದರು.
ಹಸಿರು ತರಕಾರಿಗಳು, ಹಣ್ಣುಗಳನ್ನು ಸೇವಿಸುವುದರಿಂದ ದೃಷ್ಟಿದೋಷದ ಸಮಸ್ಯೆ ಬರುವುದಿಲ್ಲ. ನಾವು ಸೇವಿಸುವ ಆಹಾರವೇ ನಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಮಂದ ಬೆಳಕಿನಲ್ಲಿ ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆರೋಗ್ಯಕರ ಕಣ್ಣುಗಳು ದೃಷ್ಟಿಹೀನತೆಯ ಸಮಸ್ಯೆಗೆ ಒಳಗಾಗುತ್ತಿರುವುದಕ್ಕೆ ಕಾರಣ ನಮ್ಮಜೀವನ ಶೈಲಿಯಾಗಿದೆ ಎಂದರು.
ವಿವಿಯ 100 ಕ್ಕೂ ಹೆಚ್ಚು ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಚಿತ ಕಣ್ಣು ತಪಾಸಣೆಯಲ್ಲಿ ಭಾಗವಹಿಸಿದ್ದರು.ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಠ್, ಯುವರೆಡ್ ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ. ಪೂರ್ಣಿಮಾ ಡಿ., ಕಾರ್ಯಕ್ರಮಾಧಿಕಾರಿ ಡಾ. ರಶ್ಮಿ ಹೊಸಮನಿ, ರೆಡ್ ರಿಬ್ಬನ್ ಘಟಕದ ಸಂಯೋಜಕಿ ಡಾ. ಪರಿಮಳ ಆಂತೋಣಿ ಅನಿಲ್ ಜಿ. ವಿ. ಉಪಸ್ಥಿತರಿದ್ದರು.