ನರಗುಂದ: ಸಮಾಜದಲ್ಲಿ ಬಡವರ್ಗದವರಿಗೆ ಅನುಕೂಲವಾಗಲೆಂದು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದೇವೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಬಡವರಿಗೆ ಸಹಾಯಧನ, ಉಚಿತ ಶಸ್ತ್ರಚಿಕಿತ್ಸೆ ಸೇರಿ ಕಣ್ಣಿನ ತಪಾಸಣೆಯನ್ನು ನಮ್ಮ ಅಭಿಮಾನಿಗಳ ಬಳಗದಿಂದ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರುದ್ರಸ್ವಾಮಿ ಮಠದ ಸೋಲಬಯ್ಯಾ ಮಹಾಸ್ವಾಮಿಗಳು, ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಅಣ್ಣಪ್ಪಗೌಡ ಪಾಟೀಲ, ದುಡ್ಡಪ್ಪ ಮಾಗೇರಿ, ನಾಗನಗೌಡ ಪಾಟೀಲ, ಎಂ. ಬಿ. ಮೆಣಸಗಿ ಎಫ್.ವೈ. ದೊಡಮನಿ, ರಾಮನಗೌಡ ಹಿರೇಗೌಡ್ರ, ಎಚ್.ಎಸ್. ಆದೇಪನವರ, ಎಸ್.ಎಸ್. ಆದೇಪನವರ, ಎಂ.ಎಚ್. ಪಾಟೀಲ, ಪ್ರಕಾಶ ಕುಂಬಾರ, ರುದ್ರಪ್ಪ ಬಾರಕೇರ, ಬಸುರಡ್ಡಿ ರಾಯರಡ್ಡಿ, ಬಸನಗೌಡ ಕರಿಗೌಡ್ರ, ಫಕೀರಪ್ಪ ಆದೇಪನವರ, ಅಶೋಕ ಸುರಕೋಡ, ಈರಣ್ಣಗೌಡ ಮುಗನೂರ, ಪ್ರವೀಣ ಮ್ಯಾಗೇರಿ, ಬಾಳಪ್ಪ ನಾಗನೂರ, ಡಾ. ಸಂಗಮೇಶ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.ಪಾದಯಾತ್ರಿಕರಿಗೆ ಅನ್ನಸಂತರ್ಪಣೆ
ರೋಣ: ಪಟ್ಟಣದ ಶಿವಪೇಟಿಯ ಗೆಳೆಯರ ಬಳಗದ ವತಿಯಿಂದ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ರೋಣ ಮಾರ್ಗವಾಗಿ ತೆರಳುವ ಪಾದಯಾತ್ರಿಗಳಿಗೆ ಗುರುವಾರ ಅನ್ನಸಂತರ್ಪಣೆ, ಹಣ್ಣು, ತಂಪು ಪಾನೀಯ, ಔಷಧೋಪಚಾರ ಸೇವೆ ಒದಗಿಸಲಾಯಿತು.ಭಕ್ತರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಶಿವಪೇಟಿಯ ಗೆಳೆಯರ ಬಳಗದ ವತಿಯಿಂದ ಇದು ಎರಡನೇಯ ವರ್ಷದ ದಾಸೋಹ ಕಾರ್ಯಕ್ರಮವಾಗಿದೆ. ದಾಸೋಹ ಸೇವೆಯಲ್ಲಿ ರಾಜೇಶ ಕುಲಕರ್ಣಿ, ಅಶೋಕ ಕೊಳಿವಾಡ, ಶರಾಣಪ್ಪ ಡಂಬಳ, ಸುರೇಶ್ ಅಂಗಡಿ, ಪ್ರಭುರಾಜ ಮಾರನಬಸರಿ, ಈರಣ್ಣ ಗದಗಿನ, ರವಿ ಕೊಪ್ಪದ, ರಮೇಶ ಗೌಡಪ್ಪ, ರೋಹಿತ ಕುಂಬಾರ, ಮಾಗುಂಡಪ್ಪ ಕರ್ಪೂರ ಮಠ, ಶಶಿಧರ ಪಾಟೀಲ ಇತರರಿದ್ದರು.