ಜ. 30 ರಂದು ರಕ್ತದಾನ ಶಿಬಿರ, ಕಣ್ಣಿನ ಉಚಿತ ತಪಾಸಣಾ ಚಿಕಿತ್ಸೆ

KannadaprabhaNewsNetwork | Published : Jan 29, 2024 1:32 AM

ಸಾರಾಂಶ

ಜ. 30 ರಂದು ಬೆಳಗ್ಗೆ 9.30 ರಿಂದ ಎಸ್‌ಕೆ ಹೈಸ್ಕೂಲ್‌ನ ಚಿಣ್ಣರ ಭವನದಲ್ಲಿ ಸಿ.ಆರ್.ಶೆಟ್ಟಿ ಫೌಂಡೇಶನ್, ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ ಬ್ಲಡ್ ಬ್ಯಾಂಕ್ ಹಾಗೂ ಎಂ.ಎಂ.ಜೋಶಿ ಐ ಫೌಂಡೇಶನ್ ಹುಕ್ಕೇರಿ ಶಾಖೆ ಆಶ್ರಯದಲ್ಲಿ ಈ ರಕ್ತದಾನ ಶಿಬಿರ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಶಿಕ್ಷಣ ಪ್ರೇಮಿ ಗಣ್ಯ ವರ್ತಕರಾಗಿದ್ದ ರವೀಂದ್ರ ಶೆಟ್ಟಿ ಅವರ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತ ರಕ್ತದಾನ ಶಿಬಿರ ಮತ್ತು ಕಣ್ಣಿನ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಕೆ.ಪಬ್ಲಿಕ್ ಸ್ಕೂಲ್ ಚೇರಮನ್ ಪಿಂಟು ಶೆಟ್ಟಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 30 ರಂದು ಬೆಳಗ್ಗೆ 9.30 ರಿಂದ ಎಸ್‌ಕೆ ಹೈಸ್ಕೂಲ್‌ನ ಚಿಣ್ಣರ ಭವನದಲ್ಲಿ ಸಿ.ಆರ್.ಶೆಟ್ಟಿ ಫೌಂಡೇಶನ್, ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕ ಬ್ಲಡ್ ಬ್ಯಾಂಕ್ ಹಾಗೂ ಎಂ.ಎಂ.ಜೋಶಿ ಐ ಫೌಂಡೇಶನ್ ಹುಕ್ಕೇರಿ ಶಾಖೆ ಆಶ್ರಯದಲ್ಲಿ ಈ ರಕ್ತದಾನ ಶಿಬಿರ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದರು.

ಶಿಬಿರದಲ್ಲಿ ಸುಮಾರು 100 ರಕ್ತದ ಬಾಟಲಿಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ನೇತ್ರ ಸಮಸ್ಯೆ ಇರುವವರನ್ನು ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಲಾಗುವುದು. ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಅವರಿಗೆ ಸಿ.ಆರ್.ಫೌಂಡೇಶನ್‌ನಿಂದ ಉಚಿತ ಚಿಕಿತ್ಸೆ ಮತ್ತು ನೆರವು ನೀಡಲಾಗುವುದು.ಫೌಂಡೇಶನ ವತಿಯಿಂದ ಈಗಾಗಲೇ ಗ್ರಾಮೀಣ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕ್ರೀಡಾ ಸಲಕರಣೆಗಳ ವಿತರಣೆ, ಸಸಿ ನೆಡುವುದು, ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಹೀಗೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ವಕೀಲ ಅನಿಲ ಶೆಟ್ಟಿ ಮಾತನಾಡಿ, ನಮ್ಮ ತಂದೆ ರವೀಂದ್ರ ಶೆಟ್ಟಿ ಅವರ 4ನೇ ಪುಣ್ಯಾರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಏರ್ಪಡಿಸಿದ ಕಾರ್ಯಕ್ರಮದ ಸಾನಿಧ್ಯವನ್ನು ಘೋಡಗೇರಿಯ ಮಲ್ಲಯ್ಯಾ ಸ್ವಾಮೀಜಿ ವಹಿಸುವರು. ನೀಲಾಂಬಿಕಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಕೀಲ ರಾಮಚಂದ್ರ ಜೋಶಿ, ಪುಣೆ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಸತೀಶ ಘಾಳಿ ಮತ್ತಿತರರು ಉಪಸ್ಥಿತರಿರುವರು ಎಂದು ತಿಳಿಸಿದರು.

ಎಸ್.ಕೆ.ಪಬ್ಲಿಕ್ ಸ್ಕೂಲ ನಿರ್ದೇಶಕರಾದ ಆನಂದ ಪಟ್ಟಣಶೆಟ್ಟಿ, ಸುಹಾಸ ನೂಲಿ, ಓಂಕಾರ ಹೆದ್ದೂರಶೆಟ್ಟಿ ಮುಖಂಡರಾದ ಬಸವರಾಜ ಗಂಧ, ಮಹಾಂತೇಶ ಕೋಟಗಿ, ಪುರಸಭೆ ಮಾಜಿ ಉಪಾಧ್ಯಕ್ಷರಾದ ಆನಂದ ಗಂಧ, ವಿರೇಶ ಗಜಬರ, ಮಹಾಂತೇಶ ಹಿರೇಮಠ, ಎಸ್.ಬಿ.ಬುರ್ಜಿ, ಬಿ.ಎಸ್.ಪಾಟೀಲ, ದಯಾನಂದ ಹಿರೇಮಠ, ಎ.ಬಿ.ಪಾಟೀಲ, ಪ್ರಾಂಶುಪಾಲ ರಾಘವೇಂದ್ರ ಕುಲಕರ್ಣಿ, ಎಸ್.ಆರ್.ಗಸ್ತಿ, ಶಂಕರ ಅಲಗರಾಹುತ ಮತ್ತಿತರರು ಇದ್ದರು.

Share this article