ಕನ್ನಡಪ್ರಭವಾರ್ತೆ ಅಮೀನಗಡ
ಸಮೀಪದ ದೊಡ್ಡಣವರ್ ಮೈನ್ಸ್ ಕಂಪನಿ ಆವರಣದಲ್ಲಿ 75ನೇ ಗಣ ರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತೀಯರು ಅದರಲ್ಲೂ ಇಂದಿನ ಯುವ ಜನಾಂಗ ಪರದೇಶಿ ವಸ್ತಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸುವುದರಿಂದ ರಾಷ್ಟ್ರದ ಆರ್ಥಿಕ ಪ್ರಗತಿ, ಉದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ, ಗುಡಿ ಕೈಗಾರಿಕೆಗಳಿಗೆ ಒತ್ತು ನೀಡುವುದರಿಂದ ಅನೇಕ ಕುಟುಂಬಗಳು ಸ್ವಾಭಿಮಾನದ ಸ್ವಾವಲಂಬನೆಯ ಬದುಕು ಸಾಗಿಸಲು ಸಾಧ್ಯ ಎಂದರು.
ಕಂಪನಿಯ ಜನರಲ್ ಮ್ಯಾನೇಜರ್ ಅಮಿತ್ ಗೂಳಿ, ಎಸ್‌ಎಸ್‌ಆರ್‌ಸಿ ಮಾಲೀಕರಾದ ಸಾಯಿಕಿರಣ ಸರಡಗಿ, ಸಮಾಜಸೇವಕಿ ಜ್ಯೋತಿ ಸರಡಗಿ, ವಿಶ್ವನಾಥ ಘೋರ್ಪಡೆ, ಹುಸೇನಸಾಬ ನದಾಫ್(ಮೇಸ್ತ್ರಿ), ಚಂದ್ರಶೇಖರ ಅಮೀನಗಡ, ಬಸವರಾಜ ನಿಂಬಲಗುಂದಿ, ಸಯ್ಯದ್ ಮಲಿಕ್ ಹಾಗೂ ಕಾರ್ಮಿಕರು, ಸಿಬ್ಬಂದಿ ಪಾಲ್ಗೊಂಡಿದ್ದರು, ಚಂದ್ರು ಅಮೀನಗಡ ನಿರೂಪಿಸಿ, ವಂದಿಸಿದರು.