ಇಳಕಲ್ಲ ಲಯನ್ಸ್ ಸಂಸ್ಥೆಯಿಂದ ಅನ್ನದಾಸೋಹ

KannadaprabhaNewsNetwork |  
Published : Sep 29, 2026, 03:00 AM IST
28ಬಸದಬಚದಸಬಚ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲಗ್ರಾಮೀಣ ಪ್ರದೇಶಗಳಿಂದ ಅನಾರೋಗ್ಯದ ನಿಮಿತ್ತ ನಗರಕ್ಕೆ ಬರುವ ಬಡ ಹಾಗೂ ಅಗತ್ಯವಿರುವ ಜನರಿಗೆ ಹಣದ ತೊಂದರೆಯ ಜತೆಗೆ ಊಟದ ಸಮಸ್ಯೆಯೂ ಎದುರಾಗುತ್ತದೆ. ಇದನ್ನು ಮನಗಂಡ ಇಳಕಲ್ಲ ಲಯನ್ಸ್ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅನ್ನದಾಸೋಹ ಏರ್ಪಡಿಸಿ ಮಾನವೀಯತೆ ಮೆರೆದಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಗ್ರಾಮೀಣ ಪ್ರದೇಶಗಳಿಂದ ಅನಾರೋಗ್ಯದ ನಿಮಿತ್ತ ನಗರಕ್ಕೆ ಬರುವ ಬಡ ಹಾಗೂ ಅಗತ್ಯವಿರುವ ಜನರಿಗೆ ಹಣದ ತೊಂದರೆಯ ಜತೆಗೆ ಊಟದ ಸಮಸ್ಯೆಯೂ ಎದುರಾಗುತ್ತದೆ. ಇದನ್ನು ಮನಗಂಡ ಇಳಕಲ್ಲ ಲಯನ್ಸ್ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅನ್ನದಾಸೋಹ ಏರ್ಪಡಿಸಿ ಮಾನವೀಯತೆ ಮೆರೆದಿದೆ.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಇಳಕಲ್ಲ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಅನೇಕ ಜನರು ತಮ್ಮ ಕುಟುಂಬಸ್ಥರೊಂದಿಗೆ ಆಸ್ಪತ್ರೆಗೆ ಆಗಮಿಸಿ ಶಸ್ತ್ರಚಿಕಿತ್ಸೆಯ ಸೌಲಭ್ಯ ಪಡೆಯಲು ಕಾಯುತ್ತಿದ್ದರು.ದೂರದ ಗ್ರಾಮಗಳಿಂದ ಬಂದಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಊಟದ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಇಳಕಲ್ಲ ಲಯನ್ಸ್ ಸಂಸ್ಥೆ, ಸಂಸ್ಥೆಯ ಅಧ್ಯಕ್ಷ ಏಕನಾಥ ರಾಜೋಳ್ಳಿ ಅವರ ಮಾರ್ಗದರ್ಶನದಲ್ಲಿ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಿತು. ರೋಗಿಗಳು ಹಾಗೂ ಅವರೊಂದಿಗೆ ಬಂದಿದ್ದವರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಅವರ ಸಮಸ್ಯೆಗೆ ಸ್ಪಂದಿಸಿತು.

ಅನ್ನದಾಸೋಹ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಕರಡಿ, ರಾಜೇಂದ್ರ ಜುಂಜಾ, ರವಿ ಅಂಗಡಿ, ಕಾಸಿಮ ಕಂದಗಲ್ಲ ಸೇರಿದಂತೆ ಸಂಸ್ಥೆಯ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರಿರಾಮಸಕ್ಕರೆ ಕಾರ್ಖಾನೆ ಪ್ರಾರಂಭಿಸದಿದ್ದರೆ ಪ್ರತಿಭಟನೆ
ಸೋಸಲೆ ಶ್ರೀ 10ನೇ ಚಾತುರ್ಮಾಸ್ಯ ಸಮಾರೋಪ