ಉಚಿತ ಆರೋಗ್ಯ ಶಿಬಿರ: 300 ಶಿಬಿರಾರ್ಥಿಗಳಿಗೆ ತಪಾಸಣೆ

KannadaprabhaNewsNetwork |  
Published : Feb 25, 2026, 01:45 AM IST
24ಕೆಎಂಎನ್ ಡಿ13 | Kannada Prabha

ಸಾರಾಂಶ

ಶಿಬಿರದಲ್ಲಿ ಸುಮಾರು 300 ರೋಗಿಗಳಿಗೆ ತಪಾಸಣೆ ನಡೆಸಲಾಗಿದೆ. 110 ಜನರಿಗೆ ಕಣ್ಣಿನ ತಪಾಸಣೆ ಮಾಡಿ 10 ಮಂದಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದು, ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ಚಿಕಿತ್ಸೆ ನಂತರ ಅವರಿಗೆ ನಮ್ಮ ತಂಡದಿಂದ ಉಚಿತ ಕನ್ನಡಕ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹಲಗೂರು

ಕರ್ನಾಟಕ ಪಬ್ಲಿಕ್ ಶಾಲಾವರಣದಲ್ಲಿ ಡಿ.ಆರ್.ಗುರು ಶಿಷ್ಯರ ಬಳಗದಿಂದ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಯೋಜನ ಪಡೆದರು.

ಬಳಗದ ಅಧ್ಯಕ್ಷ ಎ.ಎಸ್.ದೇವರಾಜು ಶಿಬಿರ ಉದ್ಘಾಟಿಸಿ ಮಾತನಾಡಿ, ವೈದ್ಯರು ಸೇವಾ ಮನೋಭಾವನೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ತಪಾಸಣೆ ನಡೆಸಿ ಅವರಿಗೆ ಸೂಕ್ತ ಸಲಹೆ ನೀಡಿ ಹಾಗೂ ಚರ್ಮ ರೋಗಕ್ಕೆ ಉಚಿತ ಔಷಧಿ ಮಾತ್ರೆ ನೀಡಿರುವುದಕ್ಕೆ ವೈದ್ಯರ ತಂಡಕ್ಕೆ ಆಭಾರಿಯಾಗಿದ್ದೇನೆ ಎಂದರು.

ಶಿಬಿರದಲ್ಲಿ ಸುಮಾರು 300 ರೋಗಿಗಳಿಗೆ ತಪಾಸಣೆ ನಡೆಸಲಾಗಿದೆ. 110 ಜನರಿಗೆ ಕಣ್ಣಿನ ತಪಾಸಣೆ ಮಾಡಿ 10 ಮಂದಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದು, ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ಚಿಕಿತ್ಸೆ ನಂತರ ಅವರಿಗೆ ನಮ್ಮ ತಂಡದಿಂದ ಉಚಿತ ಕನ್ನಡಕ ನೀಡಲಾಗುವುದು ಎಂದರು.

95 ಜನರಿಗೆ ಚರ್ಮರೋಗದ ತಪಾಸಣೆ, 55 ಜನರಿಗೆ ಕಿವಿ ಮೂಗು ಗಂಟಲು ತಪಾಸಣೆ, 25 ಜನರಿಗೆ ಹೃದಯ ತಪಾಸಣೆ ನಡೆಸಲಾಗಿದೆ. 6 ಜನರಿಗೆ ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ 6 ಜನರಿಗೆ ಮನೋರೋಗಕ್ಕೆ ಸಂಬಂಧ ತಪಾಸಣೆ ನಡೆಸಲಾಗಿದೆ ಎಂದರು.

ಚರ್ಮರೋಗ ತಜ್ಞ ಡಾ.ರಾಜಶೇಖರ್ ಮಾತನಾಡಿ, ನನ್ನ ತಂದೆ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನನ್ನ ತಾಯಿ ಜಿಪಂ ಸದಸ್ಯರಾಗಿ ಸೇವೆ ಮಾಡಿದ್ದಾರೆ. ಗ್ರಾಮದ ಜೊತೆ ನನಗೆ ಉತ್ತಮ ಬಾಂಧವ್ಯವಿದೆ. ನಾನು ಸಹ ಇಂತಹ ಸಮಾಜಸೇವೆ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಆರೋಗ್ಯ ತಪಾಸಣೆ ನಡೆಸುತ್ತಿದ್ದೇನೆ ಎಂದರು.

ಡಾ.ವೈ.ಎಸ್.ಚಂದ್ರಶೇಖರ ಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಎ.ಧನರಾಜ್, ಶ್ರೀನಾಥ್, ಎಸ್ ಪ್ರಶಾಂತ್, ಕೌಶಿಕ್, ಶ್ರೀಕಂಠಮೂರ್ತಿ, ಪ್ರಶಾಂತ್ ಮೂರ್ತಿ ಸೇರಿದಂತೆ ಬಳಗ ಅಧ್ಯಕ್ಷ ಎ.ಎಸ್.ದೇವರಾಜು, ಸದಸ್ಯರಾದ ರಾಜೇಶ್ವರಿ. ಬಸವರಾಜ ಸ್ವಾಮಿ, ಕೃಷ್ಣ ಜಿಎಸ್., ಎಂ.ಇ.ಸಿದ್ದಲಿಂಗ, ಪ್ರವೀಣ, ಸಿ.ಮಾದೇಗೌಡ, ಡಿ,ಎಲ್.ನಂದಕುಮಾರಿ ಭಾಗವಹಿಸಿದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವಿತಾ ಸಮಾಜದವರು ವೈಯಕ್ತಿಕ ಆರೋಗ್ಯದತ್ತ ಗಮನಹರಿಸಿ: ಡಾ. ಪುಷ್ಪಲತಾ
ರೋಸ್ಟರ್ ಬಿಂದು ಪದ್ಧತಿ ವಿರುದ್ಧ ಮತ್ತೆ ಮುಷ್ಕರ