ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯ ಅತಿಥಿಗಳಾಗಿ ಹಿರಿಯರಿಗೆ ಸನ್ಮಾನ ಅಭಿನಂದನೆ ಸಲ್ಲಿಸಿ ಮಾತನಾಡಿದ ಲೇಖಕ ದ.ಕೋ.ಹಳ್ಳಿ ಚಂದ್ರಶೇಖರ್, ಗ್ರಾಮದ ಎಲ್ಲಾ ಜಾತಿಯ ಎಲ್ಲಾ ಜನಾಂಗವು ಸಮನ್ವಯದಿಂದ ಒಗ್ಗೂಡಿರುವುದು ಸಂತಸದ ವಿಚಾರ. ಊರಿನ ಜನರಲ್ಲಿ ಒಗ್ಗಟ್ಟಿದ್ದಾಗ ಅಭಿವೃದ್ಧಿ ಸಾಧ್ಯವಾಗಲಿದೆ. ಆದ್ದರಿಂದ ಶ್ರೀಮಡಿವಾಳ ಮಾಚಿದೇವರ ಜಯಂತಿ ಯಶಸ್ವಿಯಾಗಿದೆ ಎಂದರು.
ನಮ್ಮ ಪೂರ್ವಿಕರು, ಹಿರಿಯರನ್ನು, ನಮಗೆ ಸನ್ಮಾರ್ಗವನ್ನು ತೋರಿಸಿದರನ್ನ ನೆನೆಯುವುದು ಮಾನವ ಧರ್ಮ. 12ನೇ ಶತಮಾನದ ಮಡಿವಾಳ ಮಾಚಿದೇವರನ್ನು ನಾಡಿನ ಒಬ್ಬ ಶ್ರೇಷ್ಠ ವ್ಯಕ್ತಿ. ಅವರು ನಮಗಾಗಿ ಬದುಕಲಿಲ್ಲ ನಾಡಿಗಾಗಿ ಸಮಾಜಕ್ಕಾಗಿ ಬದುಕಿದರು ಎಂದರು.ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಕೆಎಸ್‌ಎಫ್‌ಸಿ ನಿವೃತ್ತ ವ್ಯವಸ್ಥಾಪಕ ವಿಜಯಕುಮಾರ್ ಶ್ರೀಮಡಿವಾಳ ಮಾಚಿದೇವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಮಕ್ಕಳಿಗೆ ಬೋಧಿಸಿದರು.
ಗ್ರಾಪಂ ಉಪಾಧ್ಯಕ್ಷ ನಾರಾಯಣ, ಮಾಜಿ ಉಪಾಧ್ಯಕ್ಷ ಜಯಶಂಕರ್, ಡೈರಿ ಅಧ್ಯಕ್ಷ ಶಿವರಾಮು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷ ಶಿವಸಿದ್ದಯ್ಯ, ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ಅಧ್ಯಕ್ಷ ಎಚ್.ಎಂ. ಜಗದೀಶ್, ಉಪಾಧ್ಯಕ್ಷ ಗುಣಶೇಖರ್, ಕಾರ್ಯದರ್ಶಿ ಕುಮಾರ್, ಇತರರಿದ್ದರು.