104 ಜನರಿಗೆ ವಿವಿಧ ಪರೀಕ್ಷೆ ನಡೆಸಿ ಔಷಧಿ ವಿತರಣೆ ಕೊಪ್ಪ: ಸ್ಥಳೀಯ ಅಮೃತ ಸಿಂಚನ ಸೇವಾ ಟ್ರಸ್ಟ್, ಕೊಪ್ಪ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಕೊಪ್ಪ ಸೆಂಚುರಿ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಬೆಂಗಳೂರಿನ ಸ್ಪರ್ಷ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೇಲಿನಪೇಟೆಯ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.
ಶಿಬಿರದಲ್ಲಿ ೧೦೪ ಮಂದಿ ಭಾಗವಹಿಸಿದ್ದು, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಇ.ಸಿ.ಜಿ., ನೇತ್ರ ಪರೀಕ್ಷೆ, ಶ್ರವಣ ಶಕ್ತಿ ಇನ್ನಿತರ ಪರೀಕ್ಷೆಗಳನ್ನು ನಡೆಸಿ ಔಷಧಿಗಳನ್ನು ನೀಡಲಾಯಿತು. ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಪ್ಪದ ವೈದ್ಯ ದಂಪತಿ ಡಾ. ಮುರಳೀಧರ್ ಎಸ್. ಕತ್ತಲಗಿರಿ ಮತ್ತು ಡಾ. ಸೋನಾಲಿ ಮುರಳೀಧರ್ ಹಾಗೂ ಡಾ. ಈಮಾ, ಹಾಸನದ ಸ್ಪರ್ಷ ಆಸ್ಪತ್ರೆಯ ಡಾ. ಚೇತನ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಅಮೃತ ಸಿಂಚನ ಟ್ರಸ್ಟ್ ಅಧ್ಯಕ್ಷ ಡಾ. ಶ್ರೀಧರ್, ಸದಸ್ಯರಾದ ಕೆ.ವಿ. ರತ್ನಾಕರ್, ಕೆ.ಎನ್. ಶಿವಾನಂದ್, ಜಾನ್ ಪೆರಿಸ್, ಆಶಾ ಪೆರಿಸ್, ಸತ್ಯಜಿತ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರವೀಣ್, ಮಾಜಿ ಅಧ್ಯಕ್ಷ ಡಾ. ಉದಯಶಂಕರ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಲಕ್ಷ್ಮೀ ಆನಂದ್, ಸದಸ್ಯರಾದ ಅನಸೂಯ ಕೃಷ್ಣಮೂರ್ತಿ, ಮೈತ್ರಾ ಗಣೇಶ್, ಅರ್ಚನಾ ಜಿನೇಶ್, ಕವಿತಾ ರಾಜಶೇಖರ್, ಪ್ರೀತಿ ಸತ್ಯಜಿತ್, ಪದ್ಮಾವತಿ ರಮೇಶ್, ಸುಧಾ ಮೋಹನ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇದ್ದಿನಬ್ಬ, ಕೊಪ್ಪ ಗ್ರಾಮಾಂತರ ಪಂಚಾಯಿತಿ ಸದಸ್ಯ ಉಸ್ಮಾನ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಬ್ರೀನ್ ತಾಜ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸಾಗರ್, ಮುಖ್ಯ ಶಿಕ್ಷಕ ಮಂಜುನಾಥ್ ಮುಂತಾದವರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.