ಎಸ್.ಐ.ಹೊನ್ನಲಗೆರೆಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ

KannadaprabhaNewsNetwork |  
Published : Aug 07, 2024, 01:44 AM IST
30ಕೆಎಂಎನ್ ಡಿ18 | Kannada Prabha

ಸಾರಾಂಶ

ಪ್ರಸ್ತುತ ಪ್ರತಿಯೊಬ್ಬರಿಗೂ ಆಸ್ತಿ-ಅಧಿಕಾರಕ್ಕಿಂತ ರೋಗ್ಯವೇ ಮುಖ್ಯ. ಜನರ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ, ಉತ್ತಮ ಪರಿಸರ, ಪೌಷ್ಟಿಕ ಆಹಾರ, ವ್ಯಾಯಾಮ ಅತ್ಯವಶ್ಯಕ. ವೈದರ ಸಲಹೆ ಅನುಸರಿಸಿದರೆ ಅನಾರೋಗ್ಯವಂತರು ಆರೋಗ್ಯವಂತರಾಗಿ ಜೀವನ ನಡೆಸಬಹುದು.

ಕನ್ನಡಪ್ರಭ ವಾರ್ತೆ ಭಾರತೀನಗರ

ಎಸ್.ಐ.ಹೊನ್ನಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶರಣರ ಸಂಘಟನೆಯಿಂದ ನಡೆದ ಶಿಬಿರವನ್ನು ವೇದಿಕೆ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರಿಗೂ ಆಸ್ತಿ-ಅಧಿಕಾರಕ್ಕಿಂತ ರೋಗ್ಯವೇ ಮುಖ್ಯ. ಜನರ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ, ಉತ್ತಮ ಪರಿಸರ, ಪೌಷ್ಟಿಕ ಆಹಾರ, ವ್ಯಾಯಾಮ ಅತ್ಯವಶ್ಯಕ. ವೈದರ ಸಲಹೆ ಅನುಸರಿಸಿದರೆ ಅನಾರೋಗ್ಯವಂತರು ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದರು.

ಡಾ.ಎ.ಆರ್.ನಿಶ್ಚಿತ, ಳನ್ನು ತಪಾಸಣೆ ನಡೆಸಿದರು. ಕೆ.ಎಂ.ದೊಡ್ಡಿ ಎಎಸ್‌ಐ ಕೃಷ್ಣಪ್ಪ, ಬೀಟ್ ಪೊಲೀಸ್ ಶ್ರೀನಿವಾಸ್, ಮುಖ್ಯ ಶಿಕ್ಷಕಿ ಅಂಬುಜಾಕ್ಷಿ, ತಾಲೂಕು ಕಾರ್ಯದರ್ಶಿ ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ಕವಿತ, ಜಿಲ್ಲಾಉಪಾಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಸಂಚಾಲಕ ಮಹದೇವಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಬಸವಣ್ಣ, ತಾಲೂಕು ಮಹಿಳಾಧ್ಯಕ್ಷೆ ಶಿವಮ್ಮ, ಸಬ್ಬನಹಳ್ಳಿ ಮಹೇಶ್, ಅರೆಚಾಕನಹಳ್ಳಿ ಚಂದ್ರಕೀರ್ತಿ ಸೇರಿದಂತೆ ಹಲವರಿದ್ದರು.ತ್ರಿನೇತ್ರ ಮಹಂತ ಸ್ವಾಮಿಗಳ 49ನೇ ಜನ್ಮದಿನೋತ್ಸವ

ಶ್ರೀರಂಗಪಟ್ಟಣ:ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ 49ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚಂದ್ರವನ ಆಶ್ರಮದ ಸ್ವಾಮೀಜಿಗಳ ಜೀವನ ಚರಿತ್ರಗಳ ಕುರಿತು ಮಾತನಾಡಿದರು.ಈ ವೇಳೆ ಎಂ.ಎಲ್. ಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ಹಂಗಾರಪುರದ ಶ್ರೀ ಬಸವಲಿಂಗ ಸ್ವಾಮೀಜಿ, ವಿಜಯಪುರದ ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಿರದನಹಳ್ಳಿಯ ಬಸವ ಕಲ್ಯಾಣಮಠದ ಶ್ರೀ ಸದಾಶಿವ ಸ್ವಾಮೀಜಿ, ಕೊರಟಗೆರೆಯ ಶ್ರೀ ಹನುಮಂತ ಸ್ವಾಮೀಜಿ, ಕುಣಿಗಲ್‌ನ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ್ ನೀಲಪ್ಪ ಶಿವಣ್ಣನವರ್ ಸೇರಿದಂತೆ ಇತರೆ ಗಣ್ಯರು, ಭಕ್ತಾದಿಗಳು ಆಗಮಿಸಿ ತ್ರಿನೇತ್ರ ಶ್ರೀಗಳಿಗೆ ಶುಭಾಶಯ ಕೋರಿ ಹರಸಿದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ