ಕನ್ನಡಪ್ರಭ ವಾರ್ತೆ ಬೀಳಗಿ
ಎಸ್. ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.3ರಿಂದ ಆರಂಭಗೊಂಡ ಉಚಿತ ಆರೋಗ್ಯ ಸೇವೆಯು, ಗ್ರಾಮೀಣ ಭಾಗದ ಕಷ್ಟದಲ್ಲಿ ಮತ್ತು ಆರ್ಥಿಕವಾಗಿ ತೊಂದರೆ ಇದ್ದವರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿರುವುದರಿಂದ ಪ್ರತಿದಿನ 800ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಈಗಾಗಲೇ 100ಕ್ಕೂ ಹೆಚ್ಚು ವಿವಿಧ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ. ನೋಂದಣಿ, ಶಸ್ತ್ರ ಚಿಕಿತ್ಸೆ, ಔಷಧಿ ಸೇರಿದಂತೆ ಎಲ್ಲವೂ ಉಚಿತವಾಗಿದೆ. ಇದರ ಸದುಪಯೋಗವನ್ನು ಅವಳಿ ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿಯೂ ಜನವರಿ 29 ರಿಂದ ಫೆ. 15 ರವರೆಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಕಿಡ್ನಿ ಕಲ್ಲು, ಮೂತ್ರ ಕೋಶದ ಕಲ್ಲು ಶಸ್ತ್ರ ಚಿಕಿತ್ಸೆಗಾಗಿ ಹೊರಗಿನ ತಜ್ಞವೈದ್ಯರನ್ನು ಕರೆಯಿಸಿ, ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಜ.31ರವರೆಗೆ ಉಚಿತ ಸೇವೆ ಮುಕ್ತಾಯಗೊಳ್ಳುತ್ತದೆ ಎಂಬ ಜಿಜ್ಞಾಸೆ ಸಾರ್ವಜನಿಕರಿಗೆ ಬೇಡ. ರೋಗಿಗಳ ದಟ್ಟಣೆ, ಬಡಜನರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಸೇವೆಯನ್ನು ಫೆ.15ರವರೆಗೆ ಮುಂದುವರೆಸಲು ತೀರ್ಮಾಣ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.