ಹಾಸನದಲ್ಲಿ ಉಚಿತ ಬೃಹತ್ ಉದ್ಯೋಗ ಮೇಳ

KannadaprabhaNewsNetwork |  
Published : Aug 20, 2026, 02:00 AM IST
18ಎಚ್ಎಸ್ಎನ್5 :  | Kannada Prabha

ಸಾರಾಂಶ

ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ವಿಧಾನ, ಉದ್ಯೋಗದಾತರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವ ರೀತಿ ಹಾಗೂ ಉದ್ಯೋಗ ಪಡೆಯಲು ಅಗತ್ಯವಿರುವ ವೃತ್ತಿಪರ ಕೌಶಲ್ಯಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಆಗಸ್ಟ್ ೨೫ರಂದು ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಕಾಲೇಜಿನ ಆವರಣದಲ್ಲಿಯೇ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಿದ್ದಾರೆ. ಅರ್ಹತೆ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆಯಿದೆ. ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಅವಕಾಶ. ಬಿಬಿಎ, ಬಿಕಾಂ, ಬಿಸಿಎ, ಬಿಎ, ಬಿಎಸ್ಸಿ, ಬಿಇ, ಬಿಟೆಕ್, ಎಂಎ, ಎಂಬಿಎ, ಎಂಕಾಂ, ಎಂಸಿಎ, ಎಂಟೆಕ್ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಯುವಜನರ ಸಬಲೀಕರಣ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಸಮಾಜಮುಖಿ ಸೇವೆಯ ಉದ್ದೇಶದಿಂದ ಹಾಸನ ನಗರದ ಸಂತ ಜೋಸೆಫ್ ಕಾಲೇಜಿನ ವತಿಯಿಂದ ಎರಡು ದಿನಗಳ ಉಚಿತ ಬೃಹತ್ ಉದ್ಯೋಗ ಮೇಳ-೨೦೨೬ವನ್ನು ಆಗಸ್ಟ್ ೨೪ ಮತ್ತು ೨೫ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಫಾದರ್ ಎಸ್.ಜೆ. ಓಲ್ವಿನ್ ವೇಗಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಹಾಸನ, ಮೈಸೂರು ಹಾಗೂ ಬೆಂಗಳೂರಿನ ೨೦ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ವಿವಿಧ ವಿದ್ಯಾರ್ಹತೆ ಹೊಂದಿರುವ ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ನೇರ ಉದ್ಯೋಗ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ ೧೮ ಸಾವಿರದಿಂದ ಆರಂಭವಾಗುವ ವೇತನ ಸೇರಿದಂತೆ ಹೆಚ್ಚಿನ ವೇತನದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಉದ್ಯೋಗ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಆಗಸ್ಟ್ ೨೪ರಂದು ಉಚಿತ ಉದ್ಯೋಗಪೂರ್ವ ತರಬೇತಿ ಕಾರ್ಯಾಗಾರ ನಡೆಯಲಿದೆ. ಬೆಂಗಳೂರಿನ ಪರಿಣತ ತರಬೇತುದಾರರು ಕಾರ್ಯಾಗಾರ ನಡೆಸಲಿದ್ದು, ಉತ್ತಮ ರೆಸ್ಯೂಮ್ ತಯಾರಿಕೆ, ಸಂದರ್ಶನ ಕೌಶಲ್ಯ, ಸಂವಹನ ಕೌಶಲ್ಯ ಮತ್ತು ಸಾಫ್ಟ್ ಸ್ಕಿಲ್ಸ್, ಜಾಬ್ ಡೆಸ್ಕ್ರಪೇಷನ್ ಹಾಗೂ ಉದ್ಯೋಗದ ಜವಾಬ್ದಾರಿಗಳ ಅರಿವು, ವೃತ್ತಿಪರ ಕೌಶಲ್ಯಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ. ಅಲ್ಲದೆ, ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ವಿಧಾನ, ಉದ್ಯೋಗದಾತರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವ ರೀತಿ ಹಾಗೂ ಉದ್ಯೋಗ ಪಡೆಯಲು ಅಗತ್ಯವಿರುವ ವೃತ್ತಿಪರ ಕೌಶಲ್ಯಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಆಗಸ್ಟ್ ೨೫ರಂದು ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಕಾಲೇಜಿನ ಆವರಣದಲ್ಲಿಯೇ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಿದ್ದಾರೆ. ಅರ್ಹತೆ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆಯಿದೆ. ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಅವಕಾಶ. ಬಿಬಿಎ, ಬಿಕಾಂ, ಬಿಸಿಎ, ಬಿಎ, ಬಿಎಸ್ಸಿ, ಬಿಇ, ಬಿಟೆಕ್, ಎಂಎ, ಎಂಬಿಎ, ಎಂಕಾಂ, ಎಂಸಿಎ, ಎಂಟೆಕ್ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.

ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕಳೆದ ವರ್ಷ ನಡೆದ ಮೊದಲ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಟ್ಟು ೧೯೨ ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ೧೨೧ ಅಭ್ಯರ್ಥಿಗಳು ಉದ್ಯೋಗದ ಆಫರ್‌ಗಳನ್ನು ಪಡೆದಿದ್ದರು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ೨೦೦೯ರಲ್ಲಿ ಸ್ಥಾಪನೆಯಾದ ಸೇಂಟ್ ಜೋಸೆಫ್ ಕಾಲೇಜು ಶ್ರೀಮಂತ ಜೆಸುಯಿಟ್ ಶೈಕ್ಷಣಿಕ ಪರಂಪರೆಯಲ್ಲಿ ಬೇರೂರಿದ್ದು, ಕರ್ನಾಟಕ ಜೆಸುಯಿಟ್ ಪ್ರಾಂತ್ಯದ ಸೊಸೈಟಿ ಆಫ್ ಜೀಸಸ್‌ನ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಸನದಲ್ಲಿ ೧೯೫೭ರಿಂದ ಜೆಸುಯಿಟ್ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಜ್ಞಾನ, ಕೌಶಲ್ಯ, ಮೌಲ್ಯಗಳು ಹಾಗೂ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡುತ್ತಿವೆ ಎಂದು ಮಾಹಿತಿ ನೀಡಿದರು. ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ, ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿರುವ ಈ ಉಚಿತ ಉದ್ಯೋಗ ಮೇಳವು ಜಿಲ್ಲೆಯ ಪದವೀಧರರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸೆಂಟ್ ಜೋಸೆಫ್ ಕಾಲೇಜು ಮೊಬೈಲ್ ಸಂಖ್ಯೆ ೯೪೮೩೦೭೪೪೭೫ ಗೆ ಸಂಪರ್ಕಿಸಬಹುದು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರದೀಪ್ ಕುಮಾರ್, ಕನ್ನಡ ಪ್ರಾಧ್ಯಾಪಕ ರಂಗೇಗೌಡ, ಶಶಿಕಲಾ, ಬಸಪ್ಪ, ನಿಖಿಲ್ ತೇಜಸ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
ಬಾಗೇವಾಡಿ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಮನವಿ